Log In
BREAKING NEWS >
ಡಿ.7ರ ಗುರುವಾರದ೦ದು ಸಾಯಂಕಾಲ 4.00 ಘಂಟೆಗೆ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನ ಗೋಕರ್ಣಮಠಾಧೀಶರ ಪ್ರಥಮ ಭೇಟಿ....

ಅಮೆರಿಕದಲ್ಲಿ ಭೀಕರ ಸುಂಟರಗಾಳಿ – ಕನಿಷ್ಟ 21 ಜನ ಬಲಿ , ಹಲವರು ಗಂಭೀರ

ವಾಷಿಂಗ್ಟನ್:ಏ 02 , ಶುಕ್ರವಾರದ ಮುಂಜಾನೆಯಿಂದ ಶನಿವಾರದವರೆಗೆ ಅಮೆರಿಕದ ದಕ್ಷಿಣ ಮತ್ತು ಮಧ್ಯ ಪಶ್ಚಿಮ ಭಾಗದಲ್ಲಿ ಬೀಸಿದ ಭೀಕರ ಸುಂಟರಗಾಳಿ ಮತ್ತು ಚಂಡಮಾರುತಕ್ಕೆ ಕನಿಷ್ಠ 21ಸಾವನ್ನಪ್ಪಿ, ಹಲವರು ಗಂಭೀರ ಗಾಯಗೊಂಡು, ಅಪಾರ ಆಸ್ತಿ ಪಾಸ್ತಿ ನಷ್ಟ ಉಂಟುಮಾಡಿದ ಘಟನೆ ನಡೆದಿದೆ.

ರಾಷ್ಟ್ರೀಯ ಹವಾಮಾನ ಸೇವೆಯ ಚಂಡಮಾರುತ ಮುನ್ಸೂಚನಾ ಕೇಂದ್ರದ ಮಾಹಿತಿ ಪ್ರಕಾರ, 60ಕ್ಕೂ ಹೆಚ್ಚು ಕಡೆ ಸುಂಟರಗಾಳಿ ಭೀಕರವಾಗಿ ಬೀಸಿದೆ. ಯುಎಸ್ ಮೂಲಗಳ ಪ್ರಕಾರ, ಅರ್ಕಾನಾಸ್‌ನಲ್ಲಿ ವಿನಾಶಕಾರಿಯಾದ ಸುಂಟರಗಾಳಿ ಬೀಸಿದ್ದು, ಹಲವು ಸಾರ್ವಜನಿಕ ಸಂಪತ್ತು ನಷ್ಟವಾಗಿದೆ. ಅಲ್ಲದೇ ದೇಶದ 8 ರಾಜ್ಯಗಳಲ್ಲಿ ಬಿರುಗಾಳಿ ಬೀಸಿದ್ದು, ಇದರಿಂದ ರಸ್ತೆ ಮಾರ್ಗಗಳು ಕೂಡ ಹಾಳಾಗಿದೆ. ಇಲಿನಾಯ್ಸ್ ಎಂಬ ಸ್ಥಳದಲ್ಲಿ ಸಂಗೀತ ಕಚೇರಿ ನಡೆಯುತ್ತಿದ್ದ ವೇಳೆ, ಮೇಲ್ಛಾವಣಿಯೇ ಹಾರಿ ಹೋಗಿದೆ.

ಅಷ್ಟೇ ಅಲ್ಲದೇ, ‘ಇಲ್ಲಿನ ಅರ್ಕಾನಾಸ್‌ನಲ್ಲಿ ಬಂದ ಬಿರುಗಾಳಿಗೆ ಒಂದು ಕಲ್ಲು ಬಂಡೆಯೇ ಉರುಳಿ ಹೋಗಿದ್ದು, ಇದರಿಂದ ನಾಲ್ಕು ಜನ ಮೃತಪಟ್ಟಿದ್ದಾರೆ. 2600 ಕಟ್ಟಡಗಳು ಧರೆಗುರುಳಿದೆ. ಸ್ಥಳೀಯ ಶಾಲೆಯ ಮೇಲ್ಛಾವಣಿ ಹಾರಿ ಹೋಗಿದ್ದು, ಶಾಲೆಯಲ್ಲಿನ ಇನ್ನು ಕೆಲ ಮುಖ್ಯವಾದ ವಸ್ತುಗಳು ಕೂಡ ಚೆಲ್ಲಾಪಿಲ್ಲಿಯಾಗಿದೆ. ಅಂಗಡಿ ಮುಂಗಟ್ಟುಗಳು ಬಿರುಗಾಳಿಗೆ ಮುರಿದು ಬಿದ್ದಿದ್ದು,ಇಲ್ಲಿನ ವ್ಯಾಪಾರಸ್ಥರ ಪರಿಸ್ಥಿತಿ ಹೇಳತೀರದಾಗಿದೆ’ ಎಂದು ಇಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ..

ಟೆನ್ನೆನ್ಸಿ ಕೌಂಟಿಯಲ್ಲಿ ಕನಿಷ್ಟ 9 ಮಂದಿ, ಅರ್ಕಾನಾಸ್‌ನ ವೈನೆಯಲ್ಲಿ ನಾಲ್ಕು ಜನ, ಇಂಡಿವಾನಾದಲ್ಲಿ ಮೂವರು ಮತ್ತು ಇಲಿನಾಯ್ಸ್‌ನಲ್ಲಿ ನಾಲ್ಕು ಮಂದಿ ಮೃತ ಪಟ್ಟಿದ್ದಾರೆ. ಪ್ರಕೃತಿ ಅನಾಹುತದ ಬಗ್ಗೆ ಸ್ಥಳೀಯರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, “1985ರಿಂದ ನಾವಿಲ್ಲಿ ವಾಸವಾಗಿದ್ದು, ಇದು ಸುಂದರವಾದ ಪ್ರದೇಶವಾಗಿತ್ತು. ಆದರೆ ಪ್ರಸುತ್ತ ಇಲ್ಲಿಯ ಸ್ವರೂಪವೇ ಬದಲಾಗಿದೆ. ಈ ರೀತಿಯ ಭೀಕರ ಬಿರುಗಾಳಿ ಮೊದಲ ಬಾರಿ ಅನುಭವಿಸಿದ್ದು, ಯಾವ ರಸ್ತೆ, ಯಾವ ಸ್ಥಳ ಎಂದು ಗುರುತಿಸದಷ್ಟು ಬದಲಾಗಿದೆ. ದೊಡ್ಡ ಕಟ್ಟಡ ನೋಡ ನೋಡುತ್ತಿದ್ದಂತೆ, ರಸ್ತೆಗೆ ಉರುಳಿ ಬಿದ್ದಿದ್ದು, ಸುಂಟರಗಾಳಿ ಭೀಕರತೆಯನ್ನು ಸೃಷ್ಟಿಸಿದೆ” ಎಂದು ವಿವರಿಸಿದ್ದಾರೆ.

ಶುಕ್ರವಾರದಂದು ಉತ್ತರ ಇಲಿನಾಯ್ಸ್‌ನಲ್ಲಿ ಸುಂಟರಗಾಳಿ ಬೀಸಿದ ಪರಿಣಾಮ ಥಿಯೇಟರ್ ಮೇಲ್ಛಾವಣಿ ಹಾರಿಹೋಗಿದ್ದು, ಈ ಸ್ಥಳದಲ್ಲಿದ್ದ 260 ಮಂದಿಯಲ್ಲಿ, ಓರ್ವ ಸಾವನ್ನಪ್ಪಿದ್ದಾನೆ. 28 ಮಂದಿಯನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.ಸ್ಥಳೀಯ ಹವಾಮಾನ ಇಲಾಖೆಯ ವರದಿಯ ಪ್ರಕಾರ, ಮತ್ತೊಮ್ಮೆ ಬಿರುಗಾಳಿ ಬೀಸುವ ಸಾಧ್ಯತೆ ಇದ್ದು, ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.

No Comments

Leave A Comment