Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಕುವೈತ್‌ ನಲ್ಲಿ ಉದ್ಯೋಗ ಅಭದ್ರತೆಯಲ್ಲಿ ಭಾರತೀಯರು ಚಾಲಕರು -ಡ್ರೈವಿಂಗ್‌ ಲೈಸೆನ್ಸ್‌ ರದ್ದು?

ಕುವೈತ್‌:ಏ 02.ಕುವೈತ್‌ನಲ್ಲಿ ಭಾರತೀಯ ವಲಸಿಗರೇ ಹೆಚ್ಚಾಗಿದ್ದಾರೆ. ಒಳ್ಳೆಯ ಉದ್ಯೋಗ , ವೇತನದ ಕನಸಿನೊಂದಿಗೆ ಅರಬ್ ದೇಶದಕ್ಕೆ ವಲಸೆ ಹೋಗಿರುವ ಭಾರತೀಯರಿಗೆ ಅದರಲ್ಲೂ ಚಾಲಕರಿಗೆ ಇದೀಗ ಉದ್ಯೋಗ ಅಭದ್ರತೆ ಶುರುವಾಗಿದೆ.

ಕುವೈತ್ ಸರ್ಕಾರ ತನ್ನ ದೇಶದಲ್ಲಿರುವ ಕಡಿಮೆ ಸಂಬಳಕ್ಕೆ ದುಡಿಯುತ್ತಿರುವ, ಹಾಗೂ ವಿಶ್ವವಿದ್ಯಾನಿಲಯದಿಂದ ಪದವಿ ಪಡೆಯದೇ ಚಾಲಕರಾಗಿ ದುಡಿಯುತ್ತಿರುವ ವಿದೇಶಿ ಚಾಲಕರ ಡ್ರೈವಿಂಗ್‌ ಲೈಸೆನ್ಸ್‌ ರದ್ದು ಮಾಡಲು ಚಿಂತನೆ ನಡೆಸಿದೆ. 600 ದಿನಾರ್‌ಗಿಂದ ಕಡಿಮೆ ಸಂಬಳ, ಡಿಗ್ರಿ ಹೊಂದಿರದ ವಿದೇಶಿಗರಿಂದ ಚಾಲನಾ ಪರವಾನಗಿಯನ್ನು ಹಿಂಪಡೆಯಲು ಕುವೈತ್‌ ಸರ್ಕಾರ ಆಂತರಿಕ ಸಚಿವರ ಸಮಿತಿಯೊಂದನ್ನು ರಚಿಸಿದೆ ಎಂದು ಅಲ್-ಜರಿದಾ ದಿನಪತ್ರಿಕೆ ವರದಿ ಮಾಡಿದೆ

ಕುವೈತ್‌ ಸರ್ಕಾರದ ಈ ನಿರ್ಧಾರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಸುಮಾರು 3 ಲಕ್ಷ ಜನ ಚಾಲಕರು ಉದ್ಯೋಗ ಕಳೆದುಕೊಳ್ಳುವ ಭೀತಿಯನ್ನು ಎದುರಿಸುತ್ತಿದ್ದಾರೆ.

ಕುವೈತ್‌ನಲ್ಲಿ ಹೆಚ್ಚಾಗಿರುವ ಟ್ರಾಫಿಕ್‌ ಸಮಸ್ಯೆಗೆ ಪರಿಹಾರವಾಘಿ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ವರದಿಯಾಗಿದೆ. ಸುಲಭವಾಗಿರುವ ತಾರತಮ್ಯ ಆಧಾರಿತ ಆದೇಶಗಳೊಂದಿಗೆ ಟ್ರಾಫಿಕ್ ಜಾಮ್‌ಗಳ ಸಮಸ್ಯೆ ಪರಿಹರಿಸಲು ಪ್ರಯತ್ನಿಸುವುದು ನೈಜಪರಿಹಾರವಲ್ಲ.ಕುವೈತ್‌ನಲ್ಲಿ ಕಳಪೆ ರಸ್ತೆ ನಿರ್ಮಾಣ ಯೋಜನೆಯಿಂದ ಟ್ರಾಫಿಕ್ ಜಾಮ್ ಸಂಭವಿಸುತ್ತದೆ. ಆದ್ದರಿಂದ ರಸ್ತೆಗಳನ್ನು ಸುಧಾರಿಸುವ ಮೂಲಕ ಮತ್ತು ಫ್ಲೈ ಒವರ್‌ಗಳು, ಅಂಡರ್‌ಪಾಸ್‌ಗಳ ನಿರ್ಮಾಣದಿಂದ ಟ್ರಾಫಿಕ್‌ ಸಮಸ್ಯೆಯನ್ನು ಬಗೆಹರಿಸಬಹುದು. ಈ ರೀತಿ ದುರ್ಬಲ ಗುಂಪುಗಳನ್ನು ಗುರಿಯಾಗಿಸಿಕೊಂಡು, ತಾರತಮ್ಯದ ನೀತಿಗಳ ಜಾರಿ ಮೂಲಕ ಟ್ರಾಫಿಕ್‌ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಅಲ್ಲಿನ ವಾಹನ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೊದಲ ಉಪಪ್ರಧಾನಿಯಾಗಿರುವ, ಆಂತರಿಕ ಸಚಿವ ಮತ್ತು ರಕ್ಷಣಾ ಸಚಿವ ಶೇಖ್ ತಲಾಲ್ ಅಲ್-ಖಾಲಿದ್ ಅವರು ವಿದೇಶೀ ಚಾಲನಾ ಪರವಾನಗಿಗಳ ಸ್ಥಿತಿಯನ್ನು ಅಧ್ಯಯನ ಮಾಡಲು ಮತ್ತು ಡೇಟಾವನ್ನು ಪರಿಶೀಲಿಸಲು ಸಮಿತಿಯನ್ನು ರಚಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ ಎಂದು ಅಲ್-ಜರಿದಾ ಪತ್ರಿಕೆ ವರದಿ ಮಾಡಿದೆ.

ಕುವೈತ್‌ ಸರ್ಕಾರದ ಈ ನಿರ್ಧಾರದಿಂದ ಸುಮಾರು 3,00,000 ಡ್ರೈವಿಂಗ್‌ ಲೈಸೆನ್ಸ್‌ಗಳು ರದ್ಧತಿಯ ತೂಗುಗತ್ತಿಯನ್ನು ಸಿಲುಕಿದ್ದು, ಈ ನಿರ್ಧಾರದಿಂದ ಗೊಂದಲ ಪ್ರಾರಂಭವಾಗಿದೆ. ವಿದೇಶಿ ಚಾಲಕರ ಡ್ರೈವಿಂಗ್‌ ಲೈಸೆನ್ಸ್‌ ಹಿಂಪಡೆದರೆ ಮುಂದೇನು ಎಂಬ ಗೊಂದಲದಲ್ಲಿ ಚಾಲಕರು ಹಾಗೂ ಅಲ್ಲಿನ ಸ್ಥಳೀಯ ನಿವಾಸಿಗಳಾದ ವಾಹನಗಳ, ವಾಹನ ಏಜೆನ್ಸಿಗಳ ಮಾಲೀಕರು ಇದ್ದಾರೆ.

ಕುವೈತ್‌ ದೇಶಕ್ಕೆ ಸೇವೆ ಸಲ್ಲಿಸುತ್ತಿರುವ ಮತ್ತುಆ ದೇಶದ ಆರ್ಥಿಕತೆಗೆ ಕೊಡುಗೆ ನೀಡುವ ವಲಸಿಗರ ವರ್ಗಕ್ಕೆ ಈ ಕಾನೂನು ಜಾರಿಯಾದರೆ ಅನ್ಯಾಯವಾಗಲಿದ್ದು ,ಟ್ರಾಫಿಕ್ ಸಮಸ್ಯೆಯನ್ನು ನಿಭಾಯಿಸುವ ಬಗ್ಗೆ ವಾಹನ ಚಾಲಕರ ಸಂಖ್ಯೆಯನ್ನು ಕಡಿಮೆ ಮಾಡುವ ಉಪಾಯ ಸರಿಯಾದ ಕ್ರಮವಲ್ಲ. ಇತರ ಪರಿಹಾರದ ಬಗ್ಗೆ ಯೋಚಿಸಬೇಕು ಎಂದು ಚಾಲಕರು ಒತ್ತಾಯಿಸಿದ್ದಾರೆ.

ಒಂದು ವೇಳೆ ಹೊಸ ಕಾನೂನು ಜಾರಿ ಬಂದರೆ ಭಾರತೀಯರ ಚಾಲಕರ ಮೇಲೆ ಹೆಚ್ಚು ಉದ್ಯೋಗ ಹೊಡೆತ ಬೀಳಲಿದೆ.

No Comments

Leave A Comment