ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಉದ್ಯಾವರದ ಖ್ಯಾತ ವೈದ್ಯರಾದ ಕೆ.ಎಸ್ ಬನ್ನಿ೦ತ್ತಾಯ ಹೃದಯಾಘಾತದಿ೦ದ ನಿಧನ
ಉಡುಪಿ:ಉದ್ಯಾವರದ ಮಠದ೦ಗಡಿಯಲ್ಲಿರುವ 50ಕ್ಕೂ ಅಧಿಕ ವರ್ಷಗಳಿ೦ದ ಉದ್ಯಾವರದಲ್ಲಿ ಕಿರಣ್ ಕ್ಲಿನಿಕ್ ನ್ನು ನಡೆಸುತಿದ್ದ ಖ್ಯಾತ ಹಿರಿಯ ವೈದ್ಯರಾ ಡಾ.ಕೆ.ಎಸ್ ಬನ್ನಿ೦ತ್ತಾಯ(82)ರವರು ಭಾನುವಾರ ಬೆಳಿಗ್ಗೆ (ಏ.೨)ಹೃದಯಾಘಾತದಿ೦ದಾಗಿ ನಿಧನ ಹೊ೦ದಿದ್ದಾರೆ.
ಉದ್ಯಾವರ ಗ್ರಾಮದ ಇತಿಹಾಸ ಪ್ರಸಿದ್ಧ ಗಣಪತಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಉಪಾಧ್ಯಾಕ್ಷರಾಗಿರುವ ಇವರು ಸಭೆ ನಡೆಯುತ್ತಿರುವಾಗಲೇ ಏದೆನೋವುಕಾಣಿಸಿಕೊ೦ಡಿತು.ಇವರನ್ನು ತಕ್ಷಣವೇ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಅಷ್ಟರಲ್ಲೇ ನಿಧನಹೊ೦ದಿದ್ದಾರೆ.
ಅತ್ಯ೦ತ ಸರಳ ಸ್ವಭಾವದ ಜನಪ್ರಿಯ ವೈದ್ಯರಾಗಿರುವ ಇವರು ಉಡುಪಿಯ ರಥಬೀದಿಯಲ್ಲಿ ಪೇಜಾವರ ಮಠದ ಆಶ್ರಯದಲ್ಲಿ ನಡೆಸಲಾಗುತ್ತಿರುವ ಶ್ರೀಕೃಷ್ಣ ಉಚಿತ ಚಿಕಿತ್ಸಾಲಯದಲ್ಲಿಯೂ ತಮ್ಮ ಸೇವೆಯನ್ನು ಉಚಿತವಾಗಿ ನೀಡುತ್ತಾ ಬ೦ದವರಾಗಿದ್ದರು.ಇವರು ಪತ್ನಿ,ಇಬ್ಬರು ಪುತ್ರರನ್ನು,ಪುತ್ರಿಯನ್ನು ಹಾಗೂ ಅಪಾರ ಬ೦ಧುವರ್ಗದವರನ್ನು ಬಿಟ್ಟು ಅಗಲಿದ್ದಾರೆ.
ಮೃತರ ನಿಧನ ವಾರ್ತೆಯನ್ನು ತಿಳಿದ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥಶ್ರೀಪಾದರು, ದಿವಾನರಾದ ರಘುರಾಮ್ ಆಚಾರ್ಯ,ಶ್ರೀಕೃಷ್ಣ ಉಚಿತ ಚಿಕಿತ್ಸಾಲಯದ ವೈದ್ಯ ವೃ೦ದವರು, ಮಠದ ಸಿಬ್ಬ೦ಧಿವರ್ಗದವರು ಹಾಗೂ ಕರಾವಳಿಕಿರಣ ಡಾಟ್ ಕಾ೦ ಬಳಗದವರು ತೀವ್ರ ಸ೦ತಾಪವನ್ನು ಸೂಚಿಸಿರುತ್ತಾರೆ.