ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......
ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......

ಮೂರು ತಿಂಗಳಲ್ಲಿ ಗರಿಷ್ಠ ಮಟ್ಟ ತಲುಪಿದ ಭಾರತದ ನಿರುದ್ಯೋಗ ದರ

ನವದೆಹಲಿ:ಏ 02. ಭಾರತದಲ್ಲಿ ನಿರುದ್ಯೋಗದ ದರವು ತಿಂಗಳಿಂದ ತಿಂಗಳಿಗೆ ಗಣನೀಯವಾಗಿ ಏರುತಲಿದ್ದು, ಮಾರ್ಚ್‌ ತಿಂಗಳಲ್ಲಿ ಇದು ಮೂರು ತಿಂಗಳ ಗರಿಷ್ಠ ಮಟ್ಟವನ್ನು ತಲುಪಿವೆ. ಈ ಕುರಿತು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE) ಶನಿವಾರದಂದು ಈ ನಿರುದ್ಯೋಗ ದರ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ.

ನಿರುದ್ಯೋಗ ದರವು ಡಿಸೆಂಬರ್ 2022 ರಲ್ಲಿ 8.30%ಕ್ಕೆ ತಲುಪಿ ಬಳಿಕ ಇದರ ದರವು ಜನವರಿಯಲ್ಲಿ 7.14 ಶೇಕಡಾಕ್ಕೆ ಇಳಿದಿತ್ತು. ಆದರೆ ಫೆಬ್ರವರಿಯಲ್ಲಿ ನಿರುದ್ಯೋಗ ಮತ್ತೆ ಏರಿಕೆ ಕಂಡು ಇದು ಕಳೆದ ತಿಂಗಳ ಮಾರ್ಚ್ ನಲ್ಲಿ 7.8 %ಕ್ಕೆ ಏರಿದೆ. ಇದು ಮೂರು ತಿಂಗಳಲ್ಲೇ ಅತ್ಯಧಿಕವಾಗಿದೆ.

ಭಾರತವನ್ನು ಸೇರಿ ಜಾಗತಿಕವಾಗಿ ಕಂಡು ಬರುತ್ತಿರುವ ಉದ್ಯೋಗ ಕಡಿತದಿಂದ ನಿರುದ್ಯೋಗದ ದರ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದ್ದು ಹೀಗಾಗಿ ದೇಶದಲ್ಲಿ ನಿರುದ್ಯೋಗ ದರ ಗರಿಷ್ಠ ಮಟ್ಟ ತಲುಪಿದೆ ಎಂದು ಅಂದಾಜಿಸಲಾಗಿದೆ.

CMIEನ ವ್ಯವಸ್ಥಾಪಕ ನಿರ್ದೇಶಕರಾದ ಮಹೇಶ್ ವ್ಯಾಸ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ‘ಭಾರತದ ಕಾರ್ಮಿಕ ಮಾರುಕಟ್ಟೆಯಲ್ಲಿ ತೀವ್ರ ಕ್ಷೀಣತೆ ಕಂಡುಬಂದಿದೆ. ಹೆಚ್ಚು ಜನರನ್ನು ಕೆಲಸದಿಂದ ವಜಾ ಗೊಳಿಸುತ್ತಿರುವ ಕಾರಣ, ನಿರುದ್ಯೋಗ ಸಮಸ್ಯೆ ಶೇ.39.8ರಷ್ಟು ಹೆಚ್ಚಾಗಿದೆ’ ಎಂದಿದ್ದಾರೆ.

CMIE ವರದಿ ಪ್ರಕಾರ, ಫೆಬ್ರವರಿಯಲ್ಲಿ ಶೇ.36.9 ಇದ್ದಿದ್ದು, ಮಾರ್ಚ್‌ನಲ್ಲಿ ಶೇ.36.7ರಷ್ಟು ಇಳಿದಿತ್ತು. ಮತ್ತು ಉದ್ಯೋಗಿಗಳ ಸಂಖ್ಯೆ 409.9 ಮಿಲಿಯನ್‌ನಿಂದ 407.6 ಮಿಲಿಯನ್‌ಗೆ ಇಳಿದಿದೆ.

ಮಾರ್ಚ್‌ನಲ್ಲಿ ಯಾವ ರಾಜ್ಯದಲ್ಲಿ ಹೆಚ್ಚು ನಿರುದ್ಯೋಗ ಸಮಸ್ಯೆ ಇದೆ ಎಂದು ಮಾಹಿತಿ ಬಿಡುಗಡೆ ಮಾಡಲಾಗಿದೆ. ಹರಿಯಾಣ ಶೇ.26.8, ರಾಜಸ್ತಾನ ಶೇ.26.6, ಕಾಶ್ಮೀರ ಶೇ.23.1, ಸಿಕ್ಕಿಂ ಶೇ.20.7, ಬಿಹಾರ ಶೇ.17.6, ಜಾರ್ಖಂಡ ಶೇ.17.5ರಷ್ಟು ನಿರುದ್ಯೋಗ ದರವನ್ನ ಹೊಂದಿದೆ.

kiniudupi@rediffmail.com

No Comments

Leave A Comment