ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವೆ೦ಬರ್ 13ರ೦ದು ವಿಶ್ವರೂಪದರ್ಶನ ಕಾರ್ಯಕ್ರಮವು ಬೆಳಿಗ್ಗೆ 5ಗ೦ಟೆಗೆ ಜರಗಿತು.ನವೆ೦ಬರ್ 18ಹಾಗೂ 19ರ೦ದು ಲಕ್ಷ ದೀಪೋತ್ಸವವು ಜರಗಲಿದೆ.
ಇನ್ನೂ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಮಾಡದ ರಾಜಕೀಯ ಪಕ್ಷಗಳು-ರೊಚ್ಚಿಗೆದ್ದ ಕಾರ್ಯಕರ್ತರು-ಪಕ್ಷಗಳಿಗೆ ಸೋಲಿನ ಭೀತಿಯೇ?
ಇದುವರಗೆ ಬಾಯಿಗೆ ಬ೦ದ೦ತೆ ಒ೦ದು ಪಕ್ಷವನ್ನು ಇನ್ನೊ೦ದು ಪಕ್ಷಕ್ಕೆ ಸಾವಲನ್ನು ಹಾಕಿ ನಮ್ಮ ಪಕ್ಷವೇ ಮು೦ದಿನ ದಿನದಲ್ಲಿ ರಾಜ್ಯದಲ್ಲಿ ಸರಕಾರವನ್ನು ನಡೆಸುತ್ತದೆ ಎ೦ದು ದೃಶ್ಯ ಮಾಧ್ಯಮ ಎದುರು ಏದೆಯುಬ್ಬಿಸಿಕೊ೦ಡು ಹೇಳಿಕೆಯನ್ನು ನೀಡುತ್ತಿದ್ದರು,ಆದರೆ ಇದೀಗ ಹಾರಾಟ-ಚಿರಾಟಕ್ಕೆ ಚುನವಾಣೆ ಘೋಷಣೆಯು ಬ್ರೇಕ್ ಹಾಕಿಬಿಟ್ಟಿದೆ.ಆಡಳಿತ ನಡೆಸುವವರು ಏದುರಾಳಿ ಪಕ್ಷಕ್ಕೆ ,ಏದುರಾಳಿಪಕ್ಷಕ್ಕೆ ವಿರೋಧ ಪಕ್ಷಗಳು ಸಾವಲನ್ನು ಹಾಕುವ ಎಲ್ಲಾ ಕಾರ್ಯಕ್ರಮಕ್ಕೆ ಅಭ್ಯರ್ಥಿ ಘೋಷಣೆ ಮಾಡದಿರುವುದೇ ಎಲ್ಲಾ ಪಕ್ಷಕ್ಕೆ ನು೦ಗಲಾರದ ತುತ್ತಾಗಿದೆ.
ಎಲ್ಲಾ ಪಕ್ಷಗಳ ಜಿಲ್ಲಾ ಕಚೇರಿ,ರಾಜ್ಯದ ಕಚೇರಿಗಳಲ್ಲಿ ಅಭ್ಯರ್ಥಿಗಳ ಆಯ್ಕೆಯ ಬಗ್ಗೆ ಬಿರುಸಿನ ಪ್ರಕ್ರಿಯೆಗಳು ನಡೆಯುತ್ತಿದೆ.ಅದೇ ರೀತಿ ಸೀಟು ಸಿಕ್ಕಿಲ್ಲವೆ೦ದು ಕೆಲವು ಶಾಸಕರು ಬೇರೆ ಪಕ್ಷಕ್ಕೆ ಸೇರುತ್ತಿರುವ ಘಟನೆಯು ನಡೆಯುತ್ತಿದೆ.
ಬಿಜೆಪಿಗೆ ಮೋದಿಯವರ ಹೆಸರಿನಲ್ಲಿ ಓಟು ಬೀಳುವುದು ಖಚಿತವಾಗಿರುವುದರಿ೦ದ ಪಕ್ಷದ ರಾಜ್ಯ ಮುಖ೦ಡರು ಬಿಗುತ್ತಿದ್ದಾರೆ.ಏನಿದ್ದರೂ ನಾವೇ ಮು೦ದಿನ ದಿನದಲ್ಲಿ ಮತ್ತೆ ಸರಕಾರವನ್ನು ನಡೆಸುವವರೆ೦ದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ.
ಕಾ೦ಗ್ರೆಸ್ ಪಕ್ಷದಲ್ಲಿ ಮುಖ೦ಡರುಗಳ ನಡುವೆ ಸರಿಯಾದ ಹೊ೦ದಾಣಿಕೆಯಿಲ್ಲ ಕಾರಣ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಮಾಡಲು ಹಿ೦ದೇಟು ಹಾಕುತ್ತಿದ್ದಾರೆ.
ಒಟ್ಟಾರೆ ರಾಜಕೀಯ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಮಾಡ ಕಾರಣ ಕಾರ್ಯಕರ್ತರು ನಿರುತ್ಸಾಹ ರಾಗಿದ್ದಾರೆ.ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರೆ ಮತಯಾಚನೆಯ ಕೆಲಸಕ್ಕೆ ಅನುಕೂಲವಾಗುತ್ತಿತ್ತು ಎ೦ಬುದು ಕಾರ್ಯಕರ್ತರ ಮಾತಾಗಿದೆ.
ಏನಿದ್ದರೂ ಯಾರು ಕೊನೆಯ ಕ್ಷಣದವರೆಗೆ ಪಟ್ಟಿಯನ್ನು ಬಿಡುಗಡೆಮಾಡುವುದಿಲ್ಲವೋ ಅಲ್ಲಿಯವರೆಗೆ ಅಭ್ಯರ್ಥಿಗಳ ಬೆ೦ಬಲಿಗರಿಗೆ ಊಟ, ನಿದ್ದೆ, ಎಣ್ಣೆ, ಹಣ ಮೋಜು-ಮಸ್ತಿಮಾಡುವುದಕ್ಕೆ ತಡೆಯಾದ೦ತಾಗಿದೆ. ಪಕ್ಷದ ಈ ನಡೆಯಿ೦ದಾಗಿ ಪಕ್ಷಕ್ಕೂ ತೊ೦ದರೆಯು೦ಟಾಗಲಿದೆ ಎ೦ಬುವುದು ಪಕ್ಷದ ಕಾರ್ಯಕರ್ತರ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.