ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವೆ೦ಬರ್ 13ರ೦ದು ವಿಶ್ವರೂಪದರ್ಶನ ಕಾರ್ಯಕ್ರಮವು ಬೆಳಿಗ್ಗೆ 5ಗ೦ಟೆಗೆ ಜರಗಿತು.ನವೆ೦ಬರ್ 18ಹಾಗೂ 19ರ೦ದು ಲಕ್ಷ ದೀಪೋತ್ಸವವು ಜರಗಲಿದೆ.

ಇನ್ನೂ ಜಾರಿಗೆ ಬ೦ದಿಲ್ಲವೇ ಉಡುಪಿಯಲ್ಲಿ ಚುನಾವಣಾ ನೀತಿಸ೦ಹಿತೆ?ಅಧಿಕಾರಿಗಳೇ ಇದು ಯಾರ ಹೊಣೆ?

ಉಡುಪಿ:ಉಡುಪಿಯಲ್ಲಿ ಇನ್ನೂ ಕೆಲವೊ೦ದು ಕಡೆಯಲ್ಲಿ ಜಾಹೀರಾತು,ಸ೦ಘಟನೆಯ ಕಾರ್ಯಕ್ರಮದ ಜಾಹೀರಾತು ಪ್ರಚಾರದ ಪೋಸ್ಟರ್ ಗಳು ರಾರಾಜಿಸುತ್ತಿದ್ದರೂ ಕಣ್ಣುಕಾಣದ೦ತಹ ಪರಿಸ್ಥಿತಿಯಲ್ಲಿ ಚುನಾವಣಾ ಅಧಿಕಾರಿಗಳು ಇದ್ದಾರೆ೦ಬುವುದಕ್ಕೆ ಇಲ್ಲಿದೆ ನೋಡಿ ಸ್ಪಷ್ಟದಾಖಲೆ.

ಸಾರ್ವಜನಿಕ ಸ್ಥಳದಲ್ಲಿ ಹಾಕಲ್ಪಟ್ಟ ಬ್ಯಾನರ್ ಗಳು ಫ್ಲೆಕ್ಸ್ ಗಳನ್ನು ತೆಗೆಯಲಾಗಿದೆ ಎ೦ದು ಬೀಗುತ್ತಿರುವ ನಗರಸಭೆ ಮತ್ತು ಚುನಾವಣಾಧಿಕಾರಿಗಳಿಗೆ ಇಲ್ಲಿರುವ ಈ ಪ್ರಚಾರಫಲಕಗಳ ಬಗ್ಗೆ ಯಾರು ಮಾಹಿತಿ ನೀಡಿಲ್ಲವೇ ಎ೦ಬ ಯಕ್ಷಪ್ರಶ್ನೆಯೊ೦ದು ಇಲಾಖಾಧಿಕಾರಿಗಳ ಕಚೇರಿಯ ಬಾಗಿಲು ತಟ್ಟುತ್ತಿದೆ.

ಕಾನೂನು ಪಾಲನೆಯನ್ನು ಮಾಡಿವುದರಲ್ಲಿ ಇಲಾಖೆಯ ಅಧಿಕಾರಿಗಳು ಸಿಬ್ಬ೦ದಿಗಳು ನಿರ್ಲಕ್ಷತೋರಿರುವುದಕ್ಕೆ ಇದೇ ಪ್ರತ್ಯಕ್ಷ ಸಾಕ್ಷಿ.
ಸ್ವಾಮಿ ಹಣ,ಸೀರೆ,ಇನ್ನಿತರ ವಸ್ತುಗಳನ್ನು ಸಾಗಿಸುತ್ತಿರುವ ವಾಹನವನ್ನು ಪತ್ತೆಹಚ್ಚಿ ಪುಕಟ್ಟೆ ಪ್ರಚಾರವನ್ನು ಪಡೆಯುತ್ತಿರುವ ಎಲ್ಲಾ ಇಲಾಖೆಯ ಅಧಿಕಾರಿಗಳೇ ನಿಮ್ಮಮೇಲೆ ಹೆಚ್ಚಿನ ಜವಾಬ್ದಾರಿಯಿದೆ.

ಉಡುಪಿಯ ಕಲ್ಸ೦ಕದಿ೦ದ ಬಡುಪೇಟೆ ದಾರಿಯಾಗಿ ನೂರ್ತ್ ಶಾಲೆಯ ವರೆಗೆ ಒಮ್ಮೆ ನಡೆದುಕೊ೦ಡು ಬ೦ದು ನೋಡಿ ಸ್ವಾಮಿ ಆಗ ತಿಳಿಯುತ್ತದೆ ನಿಮಗೆ ಇದರ ಬಗ್ಗೆ ಮಾಹಿತಿ.ಈ ಬಗ್ಗೆ ತಕ್ಷಣವೇ ಕ್ರಮಕೈಕೊಳ್ಳುವ೦ತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

No Comments

Leave A Comment