Log In
BREAKING NEWS >
...........ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ,ಅಭಿಮಾನಿಗಳಿಗೆ "ಶ್ರೀರಾಮನವಮಿ"ಯ ಶುಭಾಶಯಗಳು.......

ಶ್ರೀರಾಮನ ತೊಡೆಯೇರಿ ಹೂಹಾರ ಹಾಕಿದ ಬಿಜೆಪಿ ಮಾಜಿ ಶಾಸಕ-ತೀವ್ರ ಆಕ್ರೋಶ

ಬೀದರ್:ಮಾ 31. ರಾಮನವಮಿ ಶೋಭಾಯಾತ್ರೆ ವೇಳೆ ಶಾಸಕರೊಬ್ಬರು ಶ್ರೀರಾಮನ ತೊಡೆ ಮೇಲೆ ನಿಂತು ಕೊರಳಿಗೆ ಹೂವಿನ ಹಾರ ಹಾಕುತ್ತಿರುವ ಫೋಟೋ ವೈರಲ್ ಆಗಿದ್ದು, ಶ್ರೀರಾಮನಿಗೆ ಅವಮಾನ ಮಾಡಿದ ಆರೋಪ ಕೇಳಿ ಬಂದಿದೆ.

ಬಸವಕಲ್ಯಾಣದಲ್ಲಿ ನಡೆದ ರಾಮನವಮಿ ಶೋಭಾಯಾತ್ರೆಯಲ್ಲಿ ಈ ಘಟನೆ ನಡೆದಿದೆ. ಶಾಸಕ ಶರಣು ಸಲಗರ ಅವರು ಶ್ರೀರಾಮನ ಮೂರ್ತಿಯ ತೊಡೆ ಮೇಲೆ ನಿಂತು ರಾಮನ ಕೊರಳಿಗೆ ಹೂಹಾರ ಹಾಕಿದ್ದಾರೆ. ಅಲ್ಲದೆ, ಅದೇ ರೀತಿಯಾಗಿ ಫೋಟೋಗೆ ಪೋಸ್ ನೀಡಿದ್ದಾರೆ. ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಇನ್ನು ಶರಣು ಸಲಗರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಾರ್ವಜನಿಕರಿಂದಲೂ ಶಾಸಕರ ನಡೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಮಾಜಿ ಶಾಸಕ ಮಲ್ಲಿಕಾರ್ಜುನ ಖುಬಾ ಅವರೂ ಶಾಸಕರ ವರ್ತನೆಗೆ ಕಿಡಿ ಕಾರಿದ್ದಾರೆ.

No Comments

Leave A Comment