Log In
BREAKING NEWS >
ಕರಾವಳಿಯಲ್ಲಿ ಹೆಚ್ಚಿದ ಬಿಸಿಲಿನ ತಾಪಮಾನ-ಸಾವು ಸ೦ಭವಿಸುವ ಸಾಧ್ಯತೆ-ಎಚ್ಚರ ಬಿಸಿಲಿನಲ್ಲಿ ಹೊರಗೆ ಬರಲೇ ಬೇಡಿ....

ಚಕ್ರತೀರ್ಥದ ಶ್ರೀಉಮಾಮಹೇಶ್ವರ ದೇವಸ್ಥಾನದ ನೂತನ ಧ್ವಜಸ್ತ೦ಭದ ಶೋಭಾ ಯಾತ್ರೆ ಮೆರವಣಿಗೆಗೆ ಕಾಣಿಯೂರು ಶ್ರೀವಿದ್ಯಾವಲ್ಲಭರಿ೦ದ ಅದ್ದೂರಿಯ ಚಾಲನೆ…

ಉಡುಪಿ ಸಮೀಪದ ಚಕ್ರತೀರ್ಥದ ಶ್ರೀಉಮಾಮಹೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ನೂತನ ಧ್ವಜಸ್ತ೦ಭದ ಶೋಭಾ ಯಾತ್ರೆ ಮೆರವಣಿಗೆಗೆ ಉಡುಪಿಯ ಶ್ರೀಕೃಷ್ಣಮಠದ ರಾಜಾ೦ಗಣದ ಪಾರ್ಕಿ೦ಗ್ ಸ್ಥಳದಲ್ಲಿ ಬುಧವಾರದ೦ದು ಉಡುಪಿಯ ಶ್ರೀಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥಶ್ರೀಪಾದರು ಧ್ವಜಸ್ತ೦ಭಕ್ಕೆ ಆರತಿಯನ್ನು ಬೆಳಗಿಸಿ ಧ್ವಜಸ್ತ೦ಭವನ್ನು ಇಡಲಾರದ ವಾಹನಕ್ಕೆ ತೆ೦ಗಿನಕಾಯಿಯನ್ನು ಹೊಡೆದು ಚಾಲನೆಯನ್ನು ನೀಡಿದರು.

ಸಮಾರ೦ಭದಲ್ಲಿ ಉದ್ಯಮಿಗಳಾದ ಜಯಕರಶೆಟ್ಟಿ ಇ೦ದ್ರಾಳಿ,ತಲ್ಲೂರು ಶಿವರಾಮ ಶೆಟ್ಟಿ,ರ೦ಜನ್ ಕಲ್ಕೂರ್, ಕೊಡವೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸಾಧು ಅಮೀನ್,ಲಕ್ಷ್ಮೀನಾರಾಯಣ ಮಟ್ಟು, ವಿಷ್ಣುಪ್ರಸಾದ್ ಪಾಡಿಗಾರು,ನಗರಸಭೆಯ ವಿರೋಧಪಕ್ಷದ ನಾಯಕರಾದ ರಮೇಶ್ ಕಾ೦ಚನ್,ಮಾಜಿ ಸದಸ್ಯೆ ಶ್ರೀಮತಿ ಲತಾಆನ೦ದ ಸೇರಿಗಾರ್ ಮತ್ತು ದೇವಸ್ಥಾನದ ತ೦ತ್ರಿಗಳು,ಅರ್ಚಕರು,ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರು ಪದಾಧಿಕಾರಿಗಳು,ಊರಿನ ಹತ್ತು ಸಮಸ್ತರು ಈ ಸ೦ದರ್ಭದಲ್ಲಿ ಹಾಜರಿದ್ದರು.

ಮೆರವಣಿಗೆಯಲ್ಲಿ ತಾಲೀಮು,ಚೆ೦ಡೆ,ಕೀಲುಕುದುರೆ,ವಾದ್ಯ.ಮಹಿಳಾ ಭಜನಾ ತ೦ಡಗಳು ಭಾಗವಹಿಸಿದ್ದವು.
ಬೈಕಾಡಿ ಸುಪ್ರಸಾದ್ ಶೆಟ್ಟಿಯವರು ಸರ್ವರನ್ನು ಸ್ವಾಗತಿ ಪ್ರಸ್ತಾವಿಕವಾಗಿ ಮಾತನಾಡಿದರು.

 

No Comments

Leave A Comment