Log In
BREAKING NEWS >
ಜೂ.26ರ೦ದು ಉಡುಪಿ ಶ್ರೀಪುತ್ತಿಗೆ ಮಠದ ೪ನೇ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ ಕಾರ್ಯಕ್ರಮ ಜರಗಲಿದೆ.....

ಬಿಜೆಪಿ ವಿರುದ್ಧ ಅನಂತಕುಮಾರ್‌ ಪುತ್ರಿ ಬೇಸರ

ಬೆಂಗಳೂರು:ಮಾ 28.’ಭಾರತೀಯ ಜನತಾ ಪಕ್ಷ(ಬಿಜೆಪಿ)ವನ್ನು ಕಟ್ಟಿ ಬೆಳೆಸಿದ ನನ್ನ ತಂದೆಯನ್ನು ಮರೆಯುತ್ತಿರುವ ಆ ಪಕ್ಷವೀಗ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ’ ಎಂದು ಮಾಜಿ ಕೇಂದ್ರ ಸಚಿವ ದಿ. ಅನಂತಕುಮಾರ್‌ ಪುತ್ರಿ ವಿಜೇತಾ ಬೇಸರ ವ್ಯಕ್ತಪಡಿಸಿದ್ದಾರೆ.

ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ಬಿಜೆಪಿ ನಾಯಕರ ಕುರಿತಾದ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ‘ನನ್ನ ತಂದೆ 1987ರಲ್ಲಿ ಬಿಜೆಪಿ ಸೇರಿದ್ದರು ಮತ್ತು ಅವರ ಕೊನೆ ಉಸಿರಿನ ತನಕವೂ ಬಿಜೆಪಿಗಾಗಿ ದುಡಿದಿದ್ದರು. ರಸ್ತೆ, ರೈಲು ಮಾರ್ಗಗಳಲ್ಲಿ ಅವರ ಹೆಸರಿಡುವ ಮೂಲಕ ಅವರ ಕೊಡುಗೆ ಗುರುತಿಸದಿರುವುದು ವಿಚಿತ್ರ. ಅವರು ಇಂದಿಗೂ ಲಕ್ಷಾಂತರ ಜನರ ಹೃದಯದಲ್ಲಿ ನೆಲೆಸಿದ್ದಾರೆ. ಅವರನ್ನು ಮರೆಯುತ್ತಿರುವ ಪಕ್ಷಕ್ಕೆ ಆತ್ಮಾವಲೋಕನ ಅಗತ್ಯ’ ಎಂದಿದ್ದಾರೆ.

ರಸ್ತೆಗಳಿಗೆ ಅಂಬರೀಷ್ ,ಪುನೀತ್ ರಸ್ತೆ ಎಂದು ನಾಮಕರ ಮಾಡಿದ್ದನ್ನು ಉಲ್ಲೇಖಿಸಿದ್ದ ದಿನ ಪತ್ರಿಕೆಯೊಂದು ಅನಂತ ಕುಮಾರ್ ಸಾಧನೆಯನ್ನು ಸರ್ಕಾರ ಅಥವಾ ಬಿಜೆಪಿ ಮರೆಯಿತೇ ಎಂದು ಪ್ರಶ್ನಿಸಿ ವರದಿಯೊಂದನ್ನು ಪ್ರಕಟಿಸಿತ್ತು. ಆ ವರದಿಯ ಪ್ರತಿಯನ್ನು ಲಗತ್ತಿಸಿ ವಿಜೇತಾ ಅನಂತ ಕುಮಾರ್ ತಮ್ಮ ಅಸಮಧಾನವನ್ನು ಟ್ವೀಟ್ ಮಾಡುವ ಮೂಲಕ ಹೊರಹಾಕಿದ್ದಾರೆ.

No Comments

Leave A Comment