Log In
BREAKING NEWS >
ಜೂ.26ರ೦ದು ಉಡುಪಿ ಶ್ರೀಪುತ್ತಿಗೆ ಮಠದ ೪ನೇ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ ಕಾರ್ಯಕ್ರಮ ಜರಗಲಿದೆ.....

ಮೆಕ್ಸಿಕೋ ವಲಸಿಗರ ಕೇಂದ್ರದಲ್ಲಿ ಭಾರೀ ಬೆಂಕಿ ದುರಂತ: 37 ಸಾವು, 100ಕ್ಕೂ ಹೆಚ್ಚು ಮಂದಿಗೆ ಗಾಯ!

ಮೆಕ್ಸಿಕೋ: ಅಮೆರಿಕಾ ಮತ್ತು ಮೆಕ್ಸಿಕನ್ ಗಡಿಯಲ್ಲಿರುವ ಸಿಯುಡಾಡ್ ಜುವಾರೆಜ್‌ನ ವಲಸಿಗರ ಕೇಂದ್ರದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು ಇದರಲ್ಲಿ ಕನಿಷ್ಠ 37 ಮಂದಿ ಸಾವನ್ನಪ್ಪಿದ್ದು ಸುಮಾರು 100 ಮಂದಿ ಗಾಯಗೊಂಡರು.

ಮೆಕ್ಸಿಕೊ ಮತ್ತು ಅಮೆರಿಕಾವನ್ನು ಸಂಪರ್ಕಿಸುವ ಸ್ಟಾಂಟನ್-ಲೆಡ್ರೆ ಸೇತುವೆಯ ಬಳಿ ಇರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಮೈಗ್ರೇಷನ್ (INM) ಕಚೇರಿಯಲ್ಲಿ ಬೆಂಕಿ ಕಾಣಿಸಿಕೊಂಡು ಈ ದುರಂತ ಸಂಭವಿಸಿದೆ.

ಕಳೆದ ತಡರಾತ್ರಿ ಸುಮಾರು 71 ವಲಸಿಗರನ್ನು ಕೇಂದ್ರಕ್ಕೆ ಕರೆತಂದ ಸ್ವಲ್ಪ ಸಮಯದ ಬಳಿಕ ಈ ಘಟನೆ ಸಂಭವಿಸಿದೆ. ಬೆಂಕಿಗೆ ಕಾರಣ ಅಥವಾ ಮೃತರ ರಾಷ್ಟ್ರೀಯತೆ ಇನ್ನೂ ತಿಳಿದುಬಂದಿಲ್ಲ.

ಎಲ್ ಪಾಸೊ ಟೆಕ್ಸಾಸ್‌ನಿಂದ ರಿಯೊ ಗ್ರಾಂಡೆ ನದಿಗೆ ಅಡ್ಡಲಾಗಿರುವ ಮೆಕ್ಸಿಕನ್ ನಗರವಾದ ಸಿಯುಡಾಡ್ ಜುರೆಜ್ ಇತ್ತೀಚಿನ ವಾರಗಳಲ್ಲಿ ಜನರ ಒಳಹರಿವನ್ನು ಕಂಡಿದೆ ಎಂದು ಬಿಬಿಸಿ ವರದಿ ಮಾಡಿದೆ.

No Comments

Leave A Comment