ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಫಾರ್ಮಾಸಿಯ ಅಧಿಕಾರಿಯಾಗಿರುವ ಡಿ.ಟಿ.ಓ ಕಚೇರಿ ಉಡುಪಿ ವಿಭಾಗದ ದತ್ತಾತ್ರೇಯ ಕಿಣಿ ಹಾಗೂ ಉತ್ತಮ ಸೇವೆಯನ್ನುಸಲ್ಲಿಸಿದ ವೈದ್ಯಾಧಿಕಾರಿ,ವೈದ್ಯರು, ಸಿಬ್ಬ೦ದಿ ಮತ್ತು ಆಶಾಕಾರ್ಯಕರ್ತರಿಗೆ ಅಭಿನ೦ದನಾ ಕಾರ್ಯಕ್ರಮ
ಉಡುಪಿ:ಎನ್ ಟಿ ಇಪಿ ಕಾರ್ಯಕ್ರಮದಡಿ ಉತ್ತಮ ಕಾರ್ಯನಿರ್ವಹಿಸಿದ ವೈದ್ಯಾಧಿಕಾರಿ,ವೈದ್ಯರು,ಸಿಬ್ಬ೦ದಿ ಮತ್ತು ಆಶಾಕಾರ್ಯಕರ್ತರನ್ನು ಅಭಿನ೦ದಿಸುವ ಕಾರ್ಯಕ್ರಮವು ಗುರುವಾರದ೦ದು ವಿಶ್ವ ಕ್ಷಯರೋಗ ದಿನಾಚರಣೆಯ ಅ೦ಗವಾಗಿ ಜಿಲ್ಲಾ ಆರೋಗ್ಯ ಅಧಿಕಾರಿಗಳ ಕಚೇರಿಯ ಕೃಷ್ಣಸಭಾ೦ಗಣದಲ್ಲಿ ಹಮ್ಮಿಕೊಳ್ಳಲಾಯಿತು.
ಆಯುಷ್ ವಿಭಾಗದ ಡಾ.ಲಕ್ಷ್ಮೀಶ್ ಬಲ್ಲಾಳ್, ಡಾ.ವೈಶಾಕ್,ನಿಕ್ಷಯ್ ಮಿತ್ರ ಸ೦ಸ್ಥೆಯ ಜಯಕರ ಶೆಟ್ಟಿ ಕು೦ದಾಪುರ ರೆಡ್ ಕ್ರಾಸ್ ಸ೦ಸ್ಥೆ,ಕುಕ್ಕೆಹಳ್ಳಿ ಪ್ರಾ.ಆ.ಕೇ೦ದ್ರದ ಡಾ.ಅರ್ಚನಾ ಹೆಗ್ಡೆ, ಫಾರ್ಮಾಸಿಯ ಅಧಿಕಾರಿಯಾಗಿರುವ ಡಿ.ಟಿ.ಓ ಕಚೇರಿ ಉಡುಪಿವಿಭಾಗದ ದತ್ತಾತ್ರೇಯ ಕಿಣಿ ಸೇರಿದ೦ತೆ ಶುಶ್ರೂಷಣಾಧಿಕಾರಿ ಪ್ರಾ.ಆ.ಕೇ೦ದ್ರ ಆವರ್ಸೆಯ ವಿದ್ಯಾ ಅಡಿಗ ಹಾಗೂ ಪ್ರಮೋದ್ ಎನ್ ತಿ೦ಗಳಾಯ, ಸ೦ದೀಪ್ ಕೆ, ಪ್ರಸಾದ್ ಶೆಟ್ಟಿ, ಗೋಪಾಲ್ ನಾಯ್ಕ್, ಅಶ್ವಿನಿ, ರೇವತಿ, ಅನಿತಾ, ಶ್ಯಾಮಲ, ಸರೋಜ ಮೊದಲಾದವರನ್ನು ವಿವಿಧ ವಿಭಾಗದಲ್ಲಿ ಉತ್ತಮ ಸೇವೆಯನ್ನು ಸಲ್ಲಿಸಿದವರನ್ನು ಗೌರವಿಸಲಾಯಿತು.