ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವೆ೦ಬರ್ 13ರ೦ದು ವಿಶ್ವರೂಪದರ್ಶನ ಕಾರ್ಯಕ್ರಮವು ಬೆಳಿಗ್ಗೆ 5ಗ೦ಟೆಗೆ ಜರಗಿತು.ನವೆ೦ಬರ್ 18ಹಾಗೂ 19ರ೦ದು ಲಕ್ಷ ದೀಪೋತ್ಸವವು ಜರಗಲಿದೆ.

ಬಂಟ್ವಾಳ: ‘ನ್ಯಾಯಾಂಗ ಪ್ರಾಮಾಣಿಕವಾಗಿ ವರ್ತಿಸಿದರೆ ಬಿಜೆಪಿಯ ಶೇ.75 ಸಂಸದರು ಜೈಲಲ್ಲಿರುತ್ತಾರೆ’ – ಎಂ.ಜಿ. ಹೆಗಡೆ

ಬಂಟ್ವಾಳ:ಮಾ, 25. ನ್ಯಾಯಾಂಗ ಪ್ರಾಮಾಣಿಕವಾಗಿ ವರ್ತಿಸಿದರೆ ಬಿಜೆಪಿಯ ಶೇ.75 ಸಂಸದರು ಜೈಲಲ್ಲಿರುತ್ತಾರೆ ಎಂದು ಕಾಂಗ್ರೆಸ್ ಮುಖಂಡ ಎಂ.ಜಿ. ಹೆಗಡೆ ಹೇಳಿದರು.

ಮಾಜಿ ಸಚಿವ ಬಿ. ರಮಾನಾಥ ರೈ ನೇತೃತ್ವದಲ್ಲಿ 14 ದಿನಗಳ ಕಾಲ ನಡೆಯುತ್ತಿರುವ ಬಂಟ್ವಾಳ ಪ್ರಜಾಧ್ವನಿ ಯಾತ್ರೆಯ ಅಂಗವಾಗಿ ರಾಯಿಯಲ್ಲಿ ನಡೆದ ಸಾರ್ವಜನಿಕ ಸಭಾ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿಗೆ ಜೈಲು ಶಿಕ್ಷೆಯಾಗಿರುವುದನ್ನು ಉಲ್ಲೇಖಿಸಿ ಮಾತನಾಡಿದ ಎಂ. ಜಿ. ಹೆಗಡೆ, ಸಿದ್ದರಾಮಯ್ಯರನ್ನು ಮುಗಿಸಿಬಿಡಿ ಎಂದವರ ಮೇಲೆ ಯಾವುದೇ ಕೇಸ್ ದಾಖಲಿಸಿಲ್ಲ, ಪ್ರಶ್ನೆ ಮಾಡಿದವರನ್ನು ಹೊಸಕಿ ಹಾಕುವ ಪ್ರವೃತ್ತಿ ಬಿಜೆಪಿಯಿಂದ ನಡೆಯುತ್ತಿದೆ ಎಂದರು.

ಭಾವನಾತ್ಮಕವಾಗಿ ಜನರನ್ನು ಹಾದಿ ತಪ್ಪಿಸುವ ಕಾರ್ಯ ಬಿಜೆಪಿ ಮಾಡುತ್ತಿತ್ತು. ಈಗ ಅದೇ ಹಿನ್ನಡೆಯಾಗುತ್ತಿದೆ. ಈಗ ಎಲ್ಲರಿಗೂ ಜ್ಞಾನೋದಯವಾಗಿದೆ ಎಂದರು. ಬಿಜೆಪಿಗೆ ಅಭಿವೃದ್ಧಿಯ ಕತೆ ಬೇಡ. ಇಡಿ, ಸಿಡಿ, ಬೀಡಿ ಸೂತ್ರದಲ್ಲಿ ಬಿಜೆಪಿ ನಡೆಯುತ್ತಿದೆ ಎಂದು ಲೇವಡಿ ಮಾಡಿದ ಅವರು ಅಭಿವೃದ್ಧಿಯೇ ರಾಜಕಾರಣದ ಚುನಾವಣೆಯ ಮಂತ್ರವಾಗಬೇಕು ಎಂದು ತಿಳಿಸಿದರು. ‌

ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಕಾಂಗ್ರೆಸ್ ಸುಳ್ಳು ಭರವಸೆಗಳನ್ನು ನೀಡುವುದಿಲ್ಲ. ಬಿಜೆಪಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. ಶ್ರೀಮಂತರಿಂದ ಬಡವರಿಗೆ ಕೊಡುವುದು ಕಾಂಗ್ರೆಸ್ ಕಾರ್ಯಕ್ರಮವಾದರೆ ಬಡವರಿಂದ ಅದಾನಿ ಅಂಬಾನಿಯಂತಹ ಕಾರ್ಪೋರೇಟ್ ಶ್ರೀಮಂತರಿಗೆ ನೀಡುವ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ. ವಿರೋಧ ಪಕ್ಷದ ಶಾಸಕನಾಗಿದ್ದಗಲೂ ಅಭಿವೃದ್ಧಿ ಕಾರ್ಯ ಮಾಡಿರುವುದನ್ನು ವಿರೋಧಪಕ್ಷದ ನಾಯಕರು ಒಪ್ಪಿಕೊಂಡಿದ್ದಾರೆ, ಕೊಲೆಗಡುಕರನ್ನು ವೈಭವೀಕರಣ ಮಾಡುವವ ಇವರಿಂದ ನೈತಿಕತೆಯ ಮಾತುಗಳನ್ನು ಕೇಳುವ ಅಗತ್ಯ ಇಲ್ಲ ಎಂದರು.

ಯಾತ್ರೆಯ ಸಂಚಾಲಕ ಪಿಯೂಸ್ ಎಲ್. ರೋಡ್ರಿಗಸ್, ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪಕ್ಷ ಪ್ರಮುಖರಾದ ಪದ್ಮಶೇಖರ್ ಜೈನ್, ಸುದರ್ಶನ್ ಜೈನ್, ಕೆ.ಸಂಜೀವ ಪೂಜಾರಿ, ಮಾಯಿಲಪ್ಪ ಸಾಲ್ಯಾನ್ ಸಂಪತ್ ಕುಮಾರ್ ಶೆಟ್ಟಿ, ಜಯಂತಿ ಪೂಜಾರಿ, ಸದಾಶಿವ ಬಂಗೇರ, ಮಹಮ್ಮದ್ ಶರೀಫ್, ಸುರೇಶ್ ಜೋರಾ, ಐಡಾ ಸುರೇಶ್, ಸಿದ್ದಿಕ್ ಗುಡ್ಡೆಯಂಗಡಿ, ಅಬ್ದುಲ್ ರಝಾಕ್ ಕುಕ್ಕಾಜೆ, ಪದ್ಮನಾಭ ಸಾಮಂತ, ಚಿತ್ತರಂಜನ್ ಶೆಟ್ಟಿ, ಉಮೇಶ್ ಬೋಳಂತೂರು,ಚಂದ್ರಶೇಖರ ಪೂಜಾರಿ, ಪದ್ಮನಾಭ ರೈ, ವಾಸು ಪೂಜಾರಿ, ಉಮೇಶ್ ಕುಲಾಲ್, ಮನೊಹರ ನೆರಂಬೋಳು, ದೇವಪ್ಪ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.

ಜಗದೀಶ್ ಕೊಯಿಲ ರಥ ಯಾತ್ರೆ ಸಾಗಿ ಬಂದ ನಾಲ್ಕು ಗ್ರಾಮಗಳ ಅಭಿವೃದ್ಧಿ ಕಾಮಗಾರಿಗಳ ಪಟ್ಟಿ ವಾಚಿಸಿದರು. ರಾಜೀವ ಶೆಟ್ಟಿ ಎಡ್ತೂರು ಕಾರ್ಯಕ್ರಮ ನಿರೂಪಿಸಿದರು.

No Comments

Leave A Comment