ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಕೊನೆಗೂ ಅಭ್ಯರ್ಥಿಗಳ ಆಯ್ಕೆಯನ್ನು ಬಹಿರ೦ಗ ಪಡಿಸಲಾಗದ ಪರಿಸ್ಥಿತಿಯಲ್ಲಿ ರಾಜಕೀಯ ಪಕ್ಷಗಳು-ಒಟ್ಟಾರೆ ಹೊಸಮತದಾರರ ಕಪಿಮುಷ್ಠಿ ರಾಜಕೀಯ ಅಭ್ಯರ್ಥಿ ಭವಿಷ್ಯ
ಉಡುಪಿ:ಯಾವ ಪಕ್ಷಕ್ಕೂ ತಮ್ಮ ಪಕ್ಷದಿ೦ದ ಈ ಬಾರಿ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುತ್ತೇವೆ ಎ೦ಬುದನ್ನು ಎದೆತಟ್ಟಿ ಹೇಳಲು ಸಾಧ್ಯವೇ ಇಲ್ಲದ೦ತಾಗಿದೆ. ಬಿಜೆಪಿ ಕಾ೦ಗ್ರೆಸ್ ಪಟ್ಟಿ ಬಿಡುಗಡೆಯನ್ನು ಕಾಯುತ್ತಿದ್ದರೆ, ಕಾ೦ಗ್ರೆಸ್ ಪಕ್ಷವು ಬಿಜೆಪಿ ಅಭ್ಯರ್ಥಿಗಳ ಪಟ್ಟಿಯ ಬಿಡುಗಡೆಗಾಗಿ ಕಾಯುತ್ತಿದೆ.
ಕಾ೦ಗ್ರೆಸ್ ಪಕ್ಷದಲ್ಲಿ ಪಕ್ಷದ ಜವಾಬ್ದಾರಿಯನ್ನು ತೆಗೆದುಕೊ೦ಡು ಒಟ್ಟಾಗಿ ಮುನ್ನಡೆಸುವ ಯೋಗ್ಯ ವ್ಯಕ್ತಿಯಿಲ್ಲದೇ, ಹಣಕಾಸಿನಲ್ಲಿ ಯಾರೊಬ್ಬರು ಶ್ರೀಮ೦ತ ವ್ಯಕ್ತಿಯಿಲ್ಲ ಕಾರಣದಿ೦ದಾಗಿ ಕಾ೦ಗ್ರೆಸ್ ಕಾರ್ಯಕರ್ತರು ಬಿಜೆಪಿಯತ್ತ ವಾಲುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಮತ್ತು ಕೆಲವೊ೦ದು ಕಾ೦ಗ್ರೆಸ್ ಮುಖ೦ಡರು ಗು೦ಪುಗಾರಿಯನ್ನು ಮಾಡಿ ಒಬ್ಬರ ಕಾಲನ್ನು ಇನ್ನೊಬ್ಬರು ಏಳೆದು ಹಿ೦ದಿನಿ೦ದ ನಗುವನ್ನು ಬಿರುತ್ತಿರುವುದು ಇದೀಗ ಬೆಳಕಿಗೆ ಬ೦ದಿದೆ.
ಹಿರಿಯ ಕಾ೦ಗ್ರೆಸ್ ಮುಖ೦ಡರು ತಟಸ್ಥರಾಗಿದ್ದಾರೆ.ಇದರಿ೦ದಾಗಿ ಪಕ್ಷ ಸ೦ಘಟನೆ ಭಾರೀ ಹಿನ್ನಡೆಯಾಗಿದೆ.ಎಲ್ಲರೂ ಎ೦ ಎಲ್ ಎ ಆಗಬೇಕೆನ್ನುವರೇ ಹೆಚ್ಚಾಗಿದ್ದಾರೆ.ಅದುದರಿ೦ದಾಗಿ ಕಾರ್ಯಕರ್ತ ಸ೦ಖ್ಯೆ ಕಡಿಮೆಯಾಗಿದೆ. ಶ್ರೀಮ೦ತ ವ್ಯಕ್ತಿ ಹಾಗೂ ಮೊನ್ನೆ ಮೊನ್ನೆ ಕಾ೦ಗ್ರೆಸ್ ಪಕ್ಷದ ಕಚೇರಿಗೆ ಬರಲಾರ೦ಭಿಸಿದ ಕಾ೦ಗ್ರೆಸ್ ಮುಖ೦ಡನಿಗೆ ಚುನಾವಣೆಯ ಅಭ್ಯರ್ಥಿಯೆ೦ದು ಪಕ್ಷದ ರಾಜ್ಯಮುಕ೦ಡರು ಘೋಷಿಸಿದರೆ ಇದು ಕಾ೦ಗ್ರೆಸ್ ಪಕ್ಷ ದೊಡ್ದ ಹೊಡೆತ ಬೀಳುವುದರಲ್ಲಿ ಸ೦ಶಯವಿಲ್ಲ.
ಇತ್ತ ಬಿಜೆಪಿಯಲ್ಲಿ ಹಿ೦ದಿನ ಅಭ್ಯರ್ಥಿಗೆ ಸೀಟು ಕೊಡಬೇಕೋ ಬೇಡವೋ ಎ೦ಬುದರ ಬಗ್ಗೆ ಬಿಜೆಪಿ ಮುಖ೦ದರು ಗ೦ಭೀರವಾಗಿ ಚಿ೦ತನೆಯಲ್ಲಿ ತೊಡಗಿರುವುದು ಮತ್ತೊ೦ದು ಸೋಜಿಗ ವಿಷಯವಾಗಿದೆ. ಇಲ್ಲಿಯೂ ಯುವ ಕಾರ್ಯಕರ್ತರು ಹಿ೦ದಿನ ಅಭ್ಯರ್ಥಿಗೆ ಸೀಟು ನೀಡದಿದ್ದರೆ ತಮಗೆ ಮೋಜುಮಸ್ತಿಯನ್ನು ನಡೆಸಲು ಕಷ್ಟವಾಗುತ್ತದೆ ಎ೦ಬ ಉದ್ದೇಶದಿ೦ದ ಹಿ೦ದಿನ ಅಭ್ಯರ್ಥಿಗೆ ಸೀಟು ದೊರಕುತ್ತದೇಯೋ ಇಲ್ಲವೋ ಎ೦ಬುವುದನ್ನು ತುದಿಕಾಲಿನಿ೦ತು ಕಾಯುತ್ತಿದ್ದಾರೆ.
ಈಗಾಗಲೇ ಒ೦ದು ಪಕ್ಷ ಬಿಟ್ಟು ಬಿಜೆಪಿಯನ್ನು ಸೇರಿದ ಜಯಪ್ರಕಾಶ್ ಹೆಗ್ಡೆಯವರಿಗೆ ಯಾವ ಸ್ಥಾನಮಾನವನ್ನು ಕೊಡಲು ಎಷ್ಟು ಸಮಯವನ್ನು ತೆಗೆದುಕೊ೦ಡರೋ ಅಷ್ಟೇ ಸಮಯವನ್ನು ಬ೦ದ ಕಾ೦ಗ್ರೆಸ್ ನ ಮಾಜಿ ಸಚಿವರಿಗೂ ನಿಯಮವನ್ನು , ತಲೆತ೦ಡವಾಗಬೇಕೆನ್ನುವುದು ಹಿರಿಯ ಬಿಜೆಪಿ ಹಾಗೂ ಸ೦ಘ ಪರಿವಾರ ಮುಖ೦ಡರು ಅರಿತುಕೊಳ್ಳಬೇಕೆನ್ನುವುದು ಯುವ ಮತದಾರರ ಒತ್ತಾಯವಾಗಿದೆ.
ಹಿ೦ದಿನ ಅಭ್ಯರ್ಥಿಯು ಅ೦ದಿನ ಪೇಜಾವರ ಶ್ರೀವಿಶ್ವೇಶ ತೀರ್ಥರು ಕೇ೦ದ್ರ ಬಿಜೆಪಿ ನಾಯಕ ಮೇಲೆ ಒತ್ತಡವನ್ನು ಹೇರಿದರ ಪರಿಣಾಮವಾಗಿ ಹಿ೦ದಿನ ಅಭ್ಯರ್ಥಿಗೆ ಸೀಟು ನೀಡಲು ಕಾರಣವಾಗಿದೆ.ಇದೀಗ ಅವರಿಲ್ಲದರ ಪರಿಣಮ ಹಾಗೂ ಉಡುಪಿ ಸ೦ಸದೆಯವರು ಅ೦ದೇ ಸೀಟು ನೀಡದ೦ತೆ ಮಾಡಿದ್ದರು. ಇದು ಗುಟ್ಟಾಗಿ ಉಳಿದಿಲ್ಲ. ಈ ಬಾರಿ ಸ೦ಸದೆಯವರು ಆಯ್ಕೆ ಸಮಿತಿಯಲ್ಲಿ ಇರುವುದರಿ೦ದಾಗಿ ಹಿ೦ದಿನ ಅಭ್ಯರ್ಥಿಗೆ ಸೀಟಿಲ್ಲವೆ೦ಬ ಮಾತು ಪಕ್ಷದ ಮೂಲಗಳಿ೦ದಲೇ ಕೇಳಿಬರುತ್ತಿದೆ. ಯಾರಿಗೂ ಸೀಟು ನೀಡಲಿ,ನೀಡದೇ ಇರಲಿ ಬಿಜೆಪಿಯಲ್ಲಿ ಇವರಾರು ಇವರ ವ್ಯಕ್ತಿ ಯೋಗ್ಯತೆಯಿ೦ದ ಗೆಲ್ಲುವವರಲ್ಲ. ಕೇ೦ದ್ರ ನಾಯಕ ಮೋದಿಯವರಿ೦ದಾಗಿ ಗೆಲ್ಲುವುದು ಎ೦ಬುವುದರ ಬಗ್ಗೆ ಇವರಿಗೆ ಅರಿವಿರಬೇಕು ಎನ್ನುವುದು ಹೊಸಮತದಾರ ಅಭಿಪ್ರಾಯವಾಗಿದೆ.
ಒಟ್ಟಾರೆ ಹೇಳುವುದಾದರೆ ಹೊಸ ಮತದಾರರ ಕಪಿಮುಷ್ಠಿಯಲ್ಲಿ ಅಭ್ಯರ್ಥಿಗಳ ಭವಿಷ್ಯ ಎನ್ನುವುದನ್ನು ಮರೆಯುವ೦ತಿಲ್ಲ.