ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...
ವಿಶಾಖಪಟ್ಟಣ: ಕಟ್ಟಡ ಕುಸಿತ, ಮೂವರ ಸಾವು; ಹುಟ್ಟುಹಬ್ಬದ ಸಂಭ್ರಮದಲ್ಲಿದ್ದವರಿಗೆ ಕಾದಿತ್ತು ಆಘಾತ!
ವಿಶಾಖಪಟ್ಟಣ: ಮಹಾರಾಣಿಪೇಟೆಯ ರಾಮಜೋಗಿಪೇಟೆಯಲ್ಲಿ ಗುರುವಾರ ಮುಂಜಾನೆ ಮೂರು ಅಂತಸ್ತಿನ ಕಟ್ಟಡ ಕುಸಿದು ಬಿದ್ದ ಪರಿಣಾಮ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ.
ಕೆಲವೇ ಗಂಟೆಗಳ ಹಿಂದೆ ಮನೆಯಲ್ಲಿ ಹುಟ್ಟುಹಬ್ಬದ ಸಂಭ್ರಮಾಚರಣೆ ನಡೆದಿತ್ತು, ಮಧ್ಯರಾತ್ರಿ 2 ಗಂಟೆವರೆಗೆ ದೊಡ್ಡ ಶಬ್ದಕೇಳಿ ಬಂದಿತ್ತು. ಹೊರಗೆ ಬಂದು ನೋಡುವಷ್ಟರಲ್ಲಿ ಕಟ್ಟಡ ಕುಸಿದಿತ್ತು ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ. ಬೆಳಗಿನ ಜಾವ ಕಟ್ಟಡ ಕುಸಿದು ಮೂವರು ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ.
ನೂಡಲ್ಸ್ ಮಾರಾಟಗಾರ ದುರ್ಗಾಪ್ರಸಾದ್(27) ಮಕ್ಕಳಾದ ಅಂಜಲಿ (14) ಮತ್ತು ಚೋಟು (17) ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಸಾಕೇತಿ ರಾಮರಾವ್, ಸಾಕೇತಿ ಕಲ್ಯಾಣಿ, ಕೊಮ್ಮಿಸೆಟ್ಟಿ ಶಿವಶಂಕರ್ ಎಂದು ಗುರುತಿಸಲಾಗಿದೆ.
ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಎನ್‌ಡಿಆರ್‌ಎಫ್ ತಂಡಗಳೊಂದಿಗೆ ಪರಿಹಾರ ಕಾರ್ಯಾಚರಣೆ ನಡೆಸಿದರು. ಪ್ರತ್ಯಕ್ಷದರ್ಶಿಗಳ ಪ್ರಕಾರ, ಅವರು 2 ಗಂಟೆ ಸುಮಾರಿಗೆ ದೊಡ್ಡ ಶಬ್ದವನ್ನು ಕೇಳಿದರು. ನೋಡ ನೋಡುತ್ತಿದ್ದಂತೆಯೇ ಕಟ್ಟಡವು ಕಾರ್ಡ್‌ಗಳ ಪ್ಯಾಕ್‌ನಂತೆ ಕುಸಿಯಿತು. ಅವಶೇಷಗಳಡಿ ಸಿಲುಕಿದ್ದ ಇಬ್ಬರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಡಿಸಿಪಿ ಸುಮಿತ್ ಗರುಡ ಪರಿಹಾರ ಕಾರ್ಯಗಳನ್ನು ಪರಿಶೀಲಿಸಿದರು.
ಕಟ್ಟಡ ಹಳೆಯದಾಗಿತ್ತು ಎಂದಿರುವ ಅವರು, ಕಟ್ಟಡ ಕುಸಿತಕ್ಕೆ ಕಾರಣಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಕಟ್ಟಡ ಏಕಾಏಕಿ ಕುಸಿದು ಬೀಳಲು ಕಾರಣಗಳನ್ನು ಪತ್ತೆ ಹಚ್ಚಲು ಸಮಗ್ರ ತನಿಖೆ ನಡೆಸಲಾಗುವುದು ಎಂದು ಕಂದಾಯ ವಿಭಾಗಾಧಿಕಾರಿ ಹುಸೇನ್ ಸಾಹೇಬ್ ತಿಳಿಸಿದ್ದಾರೆ.