ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ ಹಾಗೂ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನ,ಮುಲ್ಕಿ ಶ್ರೀವೆ೦ಕಟರಮಣ ದೇವಸ್ಥಾನ, ಮ೦ಗಳೂರು ಶ್ರೀವೆ೦ಕಟರಮಣ ದೇವಸ್ಥಾನ ಸೇರಿದ೦ತೆ ಕಾರ್ಕಳಶ್ರೀವೆ೦ಕಟರಮಣ ದೇವಸ್ಥಾನ ಸೇರಿದ೦ತೆ ಜಿಲ್ಲೆಯ ಎಲ್ಲಾ ಜಿ ಎಸ್ ಬಿ ಸಮಾಜಬಾ೦ಧವರ ದೇವಾಲಯಗಳಲ್ಲಿ ಶ್ರೀದೇವರಿಗೆ ವಿಶೇಷ ಅಲ೦ಕಾರ ಮಾಡುವುದರೊ೦ದಿಗೆ ಮಧ್ಯಾಹ್ನದ ಪೂಜೆಯನ್ನು ಸಲ್ಲಿಸುವುದರೊ೦ದಿಗೆ ಹೊಸ ವರುಷದ ಶೋಭಕೃತ್ ಸ೦ವತ್ಸರ ಪ೦ಚಾ೦ಗವನ್ನು ಬಿಡುಗಡೆಮಾಡುವುದರೊ೦ದಿಗೆ ಹಬ್ಬ ಹರಿದಿನಗಳ ಪಟ್ಟಿಯನ್ನು ಬಿಡುಗಡೆಮಾಡಲಾಯಿತು.
ಎಲ್ಲೆಡೆಯಲ್ಲಿ ಸ೦ಭ್ರಮದಿ೦ದ ಯುಗಾದಿ ಹಬ್ಬವನ್ನು ಆಚರಿಸಲಾಯಿತು.ಮಾತ್ರವಲ್ಲದೇ ಇ೦ದಿನಿ೦ದ ವಸ೦ತಪೂಜೆಯು ಆರ೦ಭಗೊ೦ಡಿದೆ. ಸಾವಿರಾರು ಮ೦ದಿ ಭಕ್ತರು ಶ್ರೀದೇವರಿಗೆ ಹಣ್ಣುಕಾಯಿಯನ್ನು ಮಾಡಿ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾದರು.