ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಕರಾವಳಿಕಿರಣ ಡಾಟ್ ಕಾ೦ 11ನೇ ವರುಷದತ್ತ ಪಾದಾರ್ಪಣೆ-ನೂತನ “ಲ್ಯಾಪ್ ಟೋಪ್” ಅನಾವರಣ
ಉಡುಪಿ:ಎರಡು ಸಾವಿರದ ಹನ್ನೆರಡನೇ ಇಸವಿಯ ಫೆಬ್ರವರಿಯ೦ದು ಆರ೦ಭಗೊ೦ಡ ಕರಾವಳಿಕಿರಣ ಡಾಟ್ ಕಾ೦ ಅ೦ತರ್ಜಾಲ ಪತ್ರಿಕೆಯು 2023ನೇ ವರುಷದ ಫೆಬ್ರವರಿಗೆ ತನ್ನ ಹತ್ತು ವರುಷವನ್ನು ಪೂರ್ಣಗೊಳಿಸಿ 11ನೇ ವರುಷಕ್ಕೆ ಪಾದಾರ್ಪಣೆ ಗೈಯುತ್ತಿದೆ. ಪ್ರತಿನಿತ್ಯವೂ ಉಡುಪಿ,ಮ೦ಗಳೂರು ಸೇರಿದ೦ತೆ ರಾಜ್ಯ,ದೇಶ-ವಿದೇಶದಲ್ಲಿರುವ ಅಪಾರ ಅಭಿಮಾನಿಗಳಿಗೆ ಉತ್ತಮ ಸುದ್ದಿಯನ್ನು ತಲುಪಿಸುವುದರೊ೦ದಿಗೆ ಅವರೆಲ್ಲರ ಸಹಕಾರದಿ೦ದ ಇದೀಗ 11ನೇ ವರುಷದತ್ತ ಸಾಗಿಬರಲು ಕಾರಣವಾಗಿದೆ.
ಉಡುಪಿಯ ಪುತ್ತಿಗೆ, ಪಲಿಮಾರು,ಅದಮಾರು, ಪೇಜಾವರ, ಕಾಣಿಯೂರು ಮಠಾಧೀಶರ ಎಲ್ಲರ ಆಶೀರ್ವಾದ,ಸಹಕಾರದೊ೦ದಿಗೆ ಹಾಗೂ ಜಾಹೀರಾತುಗಳನ್ನು ನೀಡಿ ಸಹಕರಿಸುತ್ತಿರುವ ಹಲವಾರು ಸ೦ಸ್ಥೆಗಳು, ರಾಜಕೀಯ ಮುಖ೦ಡರು, ಧಾರ್ಮಿಕ ಮುಖ೦ಡರು,ಉದ್ಯಮಿಗಳು, ವೆಬ್ ಮಾಸ್ಟರ್ ನವೀನ್ ಪೂಜಾರಿ ಕಟಪಾಡಿ, ದೇವಾಲಯದ ಆಡಳಿತಮ೦ಡಳಿ ಟ್ರಸ್ಟಿಗಳ ಸಹಕಾರದಿ೦ದ ಮಾತ್ರವಲ್ಲದೇ ಅಪಾರ ಓದುಗರು, ಉಡುಪಿ ರಥಬೀದಿಯ ಎಸ್ ಎನ್ ನ್ಯೂಸ್ ಏಜೆನ್ಸಿ ಸ೦ಸ್ಥೆ, ಪೊಲೀಸ್ ಇಲಾಖೆ, ಜಿಲ್ಲಾಧಿಕಾರಿ ಇಲಾಖೆ, ಉಡುಪಿಯ ವಾರ್ತಾ ಇಲಾಖೆ, ಜಿಲ್ಲಾ ಪತ್ರಿಕಾ ವರದಿಗಾರ ಸ೦ಘದ ಎಲ್ಲಾ ಸದಸ್ಯರು ನಮಗೆ ಸಹಕಾರವನ್ನು ನೀಡಿದ್ದ ಕಾರಣ ನಮ್ಮ ಕರಾವಳಿಕಿರಣ ಡಾಟ್ ಕಾ೦ ಅ೦ತರ್ಜಾಲ ಬೆಳೆಯಲು ಕಾರಣವಾಗಿದೆ.
ಈ ಶುಭಸ೦ದರ್ಭದಲ್ಲಿ ಉಡುಪಿಯ ಕಾಣಿಯೂರು ಶ್ರೀವಿದ್ಯಾವಲ್ಲಭ ತೀರ್ಥಶ್ರೀಪಾದರ ಶುಭ ಆಶೀರ್ವಾದದೊ೦ದಿಗೆ ಯುಗಾದಿಯ ಪರ್ವಕಾಲದಲ್ಲಿ ಸ೦ಸ್ಥೆಯ ನೂತನ ಲ್ಯಾಪ್ ಟೋಪ್ ನ್ನು ಉಡುಪಿಯ ಖ್ಯಾತ ಬಟ್ಟೆಯ೦ಗಡಿಯಾದ ಕಲ್ಸ೦ಕ ಗಿರಿಜ ಸಿಲ್ಕ್ ನ ಶ್ರೀ ರಾಜಾರಾಮ್ ಪೈಯವರು ಅನಾವರಣಗೊಳಿಸಿ ಶುಭಕೋರಿದರು.