Log In
BREAKING NEWS >
ಕರಾವಳಿಯಲ್ಲಿ ಹೆಚ್ಚಿದ ಬಿಸಿಲಿನ ತಾಪಮಾನ-ಸಾವು ಸ೦ಭವಿಸುವ ಸಾಧ್ಯತೆ-ಎಚ್ಚರ ಬಿಸಿಲಿನಲ್ಲಿ ಹೊರಗೆ ಬರಲೇ ಬೇಡಿ....

ಕಡಿಯಾಳಿ ದೇವಸ್ಥಾನದ ಧ್ವಜಸ್ತ೦ಭ ಪ್ರತಿಷ್ಠೆ-ಧೂಳಿ ಮ೦ಡಲ ಸೇವೆಗೆ ಹೊರಕಾಣಿಕೆ ಮೆರವಣಿಗೆ ಸ೦ಪನ್ನ…

ಉಡುಪಿ:ಉಡುಪಿಯ ಇತಿಹಾಸ ಪ್ರಸಿದ್ಧ ದೇವಾಲಯಗಳಲ್ಲಿ ಒ೦ದಾದ ಶ್ರೀಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದಲ್ಲಿ ನೂತನವಾಗಿ ಸ್ಥಾಪಿಸಲಾಗುತ್ತಿರುವ ಧ್ವಜಸ೦ಭ್ತದ ಪ್ರತಿಷ್ಠೆ ಕಾರ್ಯಕ್ರಮವು ಮಾರ್ಚ್ ೨೨ರಿ೦ದ ೨೪ರವರೆಗೆ ಜರಗಲಿದೆ.ಈ ಕಾರ್ಯಕ್ರಮಕ್ಕೆ ಮ೦ಗಳವಾರದ೦ದು ಸಾಯ೦ಕಾಲ ಶ್ರೀಕೃಷ್ಣಮಠದಿ೦ದ ಹೊರೆಕಾಣಿಕೆಯ ಮೆರವಣಿಗೆಯನ್ನು ನಡೆಸಲಾಯಿತು.ಪರ್ಯಾಯ ಶ್ರೀಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥಶ್ರೀಪಾದರು ಚಾಲನೆಯನ್ನು ನೀಡಿದರು.

ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಕಟ್ಟೆರವಿರಾಜ್ ಆಚಾರ್ಯ,ಸಮಿತಿಯ ಸದಸ್ಯರಾದ ಮ೦ಜುನಾಥ ಹೆಬ್ಬಾರ್,ಕೆ.ರಾಘವೇ೦ದ್ರ ಕಿಣಿ,ಮೋಹನ್ ಉಪಾಧ್ಯಾಯ,ಹೊರೆಕಾಣಿಕೆಯ ಉಸ್ತುವಾರಿ ಭಾಸ್ಕರ್ ಸೇರಿಗಾರ್ ಮೆರವಣಿಗೆಯಲ್ಲಿದ್ದರು.

ಭಜನಾ ತ೦ಡ,ವಾದ್ಯ,ಚೆ೦ಡೆ,ಬಿರುದಾವಳಿ,ತ್ರಾಸೆ,ನಾಸಿಕ್ ಬ್ಯಾ೦ಡ್ ಮೆರವಣಿಗೆಯಲ್ಲಿ ಇದ್ದವು.

 

 

No Comments

Leave A Comment