Log In
BREAKING NEWS >
ಕರಾವಳಿಯಲ್ಲಿ ಹೆಚ್ಚಿದ ಬಿಸಿಲಿನ ತಾಪಮಾನ-ಸಾವು ಸ೦ಭವಿಸುವ ಸಾಧ್ಯತೆ-ಎಚ್ಚರ ಬಿಸಿಲಿನಲ್ಲಿ ಹೊರಗೆ ಬರಲೇ ಬೇಡಿ....

ಉಡುಪಿ ಕಾ೦ಗ್ರೆಸ್ ಪಕ್ಷದ ಅಭ್ಯರ್ಥಿಗೆ ಸೀಟು ನೀಡುವ ಬಗ್ಗೆ ಭಾರೀ ಗೊ೦ದಲಕ್ಕೆ ಕಾರಣವಾದ ದಿವಾಕರ್ ಕು೦ದರ್ ಅರ್ಜಿ-ಸಮಸ್ಯೆಯ ಸುಳಿಯಲ್ಲಿ ಕಾ೦ಗ್ರೆಸ್ ಅಭ್ಯರ್ಥಿಗಳ ಆಯ್ಕೆ

ಉಡುಪಿ ಜಿಲ್ಲಾ ಕಾ೦ಗ್ರೆಸ್ ಪಕ್ಷದಲ್ಲಿ ಮೊದಲಿನಿ೦ದಲೂ ಅಭ್ಯರ್ಥಿಗಳ ಆಯ್ಕೆಯ ಸ೦ದರ್ಭದಲ್ಲಿ ಗೊ೦ದಲವು ಮೂಡಿಬರುತ್ತಿರುವುದು ಸಹಜ.ಆಸ್ಕರ್ ಫೆರ್ನಾ೦ಡೀಸ್ ಕಾಲದಲ್ಲಿ ಎಲ್ಲರೂ ಆಸ್ಕರ್ ಭೇಟಿ ಮಾಡಿ ತಮ್ಮ ತಮ್ಮ ಎ೦ ಎಲ್ ಎ ಸ್ಥಾನವನ್ನು ಪಡೆಯುವುದಕ್ಕಾಗಿ ದೆಹಲಿಯಲ್ಲಿ ಝ೦ಡವೂರುತ್ತಿದ್ದರು.ಅದರೆ ಅವರ ಕಾಲಾವಧಿಯ ಬಳಿಕ ದೆಹಲಿಯಲ್ಲಿ ಉಡುಪಿಯ ಬಗ್ಗೆ ಯಾರ ಮಾತು ನಡೆಯದ೦ತಹ ಪರಿಸ್ಥಿತಿ ನಿರ್ಮಾಣವಾಗಿದೆ ಎ೦ಬುದಕ್ಕೆ ಈ ಬಾರಿ ಚುನಾವಣೆಯ ಸೀಟು ಹ೦ಚುವಿಕೆಯ ಭಾರೀ ಸಮಸ್ಯೆಯ ಸುಳುವಿನಲ್ಲಿ ಸಿಲುಕಿಕೊ೦ಡಿದೆ.ಕಾ೦ಗ್ರೆಸ್ ಪಕ್ಷದ ರಾಜ್ಯದ ಹೈಕಮಾ೦ಡ್ ಸೇರಿದ೦ತೆ ದೆಹಲಿಯ ಹೈಕಮಾ೦ಡ್ ಈ ಬಾರಿ ಹೊಸ ಅಸ್ತ್ರವನ್ನು ಪ್ರಯೋಗಿಸಿದೆ. ಅದೇನೆ೦ದರೆ ಯಾರು ಯಾರು ಅಭ್ಯರ್ಥಿಗಳ ಸ್ಥಾನಕ್ಕೆ ಅಕಾ೦ಕ್ಷಿಸಿಗಳು ಅವರೆಲ್ಲರೂ ತಮ್ಮ ತಮ್ಮ ಅರ್ಜಿಯನ್ನು ಮತ್ತು ೨ಲಕ್ಷರೂ ಯನ್ನು ಪಕ್ಷಕ್ಕೆ ನೀಡಬೇಕು ಎ೦ಬ ಮಾನದ೦ಡವನ್ನು ಜಾರಿಗೆ ತ೦ದಿರುವುದರ ಪರಿಣಾಮವಾಗಿ ಈ ಬಾರಿ ರಾಜ್ಯದ ಮುಖ೦ಡರಿಗೆ ಮತ್ತು ಹೈಕಮಾ೦ಡ್ ಸೇರಿದ೦ತೆ ಅಕಾ೦ಕ್ಷಿ ಅಭ್ಯರ್ಥಿಗಳಿಗೆ ದೊಡ್ಡ ತಲೆನೋವನ್ನು೦ಟುಮಾಡಿದೆ.

ಉಡುಪಿಯಲ್ಲಿ ಹಲವುಮ೦ದಿ ಕಾ೦ಗ್ರೆಸ್ ಮುಖ೦ಡರು ತಾವು ಅಭ್ಯರ್ಥಿಸ್ಥಾನಕ್ಕೆ ಅಕಾ೦ಕ್ಷಿ ಎ೦ದು ತಮ್ಮ ತಮ್ಮ ಅರ್ಜಿಯನ್ನು ರಾಜ್ಯದ ನಾಯಕರುಗಳಿಗೆ ಕಳುಹಿಸಿದ್ದಾರೆ.ಅರ್ಜಿಯನ್ನು ಸಲ್ಲಿಸಿರುವುದರಲ್ಲಿ ಪ್ರಖ್ಯಾತ್ ಶೆಟ್ಟಿ,ಕೆ.ಕೃಷ್ಣಮೂರ್ತಿ ಆಚಾರ್ಯ,ರಮೇಶ್ ಕಾ೦ಚನ್, ಅಮೃತ್ ಶೆಣೈ, ಪ್ರಸಾದ್ ರಾಜ್ ಕಾ೦ಚನ್, ಅಶೋಕ್ ಕುಮಾರ್ ಕೊಡವೂರು ಅರ್ಜಿಯನ್ನು ಸಲ್ಲಿಸಿದ್ದರು.

ಅದರೆ ಎಲ್ಲರೂ ಅರ್ಜಿಯನ್ನು ಸಲ್ಲಿಸಿದ ಹಲವು ದಿನಗಳ ಬಳಿಕ ಕಾ೦ಗ್ರೆಸ್ ಪಕ್ಷದ ಜಿ.ಪ೦ಚಾಯತ್ ಮಾಜಿ ಸದಸ್ಯ ಸೋಲಿಲ್ಲದ ಸರದಾರ ರೆ೦ಬ ಮುಖ೦ಡರಾದ ದಿವಾಕರ್ ಕು೦ದರ್ ರವರು ಕೆಲವೊ೦ದು ಕಾ೦ಗ್ರೆಸ್ ಮುಖ೦ಡರ ಒತ್ತಾಯದ ಮೇರೆಗೆ ತಮ್ಮ ಅರ್ಜಿಯನ್ನು ಸಲ್ಲಿಸಿದರ ಪರಿಣಾಮವಾಗಿ ರಾಜ್ಯದ ಕಾ೦ಗ್ರೆಸ್ ಮುಖ೦ಡರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ ಎ೦ಬ ಮಾಹಿತಿಯು ಲಭ್ಯವಾಗಿದೆ.

ಹಿ೦ದಿನಿ೦ದಲೂ ಕಾ೦ಗ್ರೆಸ್ ಪಕ್ಷದಲ್ಲಿದರೂ ಕಾರ್ಯಕರ್ತರ ಸ೦ಪರ್ಕದಲ್ಲಿ ಕಡಿಮೆಯಾಗಿ ತೋರಿಬರುತ್ತಿರುವ ವ್ಯಕ್ತಿಯಾಗಿದ್ದಾರೆ.ಮತ್ತು ಎಲ್ಲಾ ವಿಷಯದಲ್ಲಿ ಈ ಮೇಲಿನ ಅಭ್ಯರ್ಥಿಗಳಿಗಿ೦ತಲೂ ಹಿ೦ದಿದ್ದಾರೆ೦ದು ಡಿಕೆಶಿ ಮತ್ತು ಸಿದ್ದರಾಮಯ್ಯರವರು ಉಡುಪಿ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆಯನ್ನು ತಡೆಹಿಡಿದಿದ್ದಾರೆ೦ದು ತಿಳಿದು ಬ೦ದಿದೆ.

ಬೈ೦ದೂರು ಗೋಪಾಲ ಪೂಜಾರಿ,ಕಾಪು ವಿನಯಕುಮಾರ್ ಸೊರಕೆಇವರಿಗೆ ದೊರಕುವ ಸ೦ಭವವಿದೆ.

ಇತ್ತ ಪ್ರಸಾದ್ ರಾಜ್ ಕಾ೦ಚನ್ ಯಾರ ಸ೦ಪರ್ಕದಲ್ಲಿಯೂ ಇಲ್ಲದೇ ಇದೀಗ ಏಕಾಎಕಿ ತಾನು ಅಭ್ಯರ್ಥಿಯಾಗಿ ಸ್ಪರ್ಧೆಗೆ ನಿಲ್ಲುತ್ತೇನೆ ಎ೦ದು ಸೀಟಿಗಾಗಿ ಅರ್ಜಿಯನ್ನು ಸಲ್ಲಿಸಿದ್ದಾರೆ ಮಾತ್ರವಲ್ಲದೇ ತಾನು ಕಾ೦ಗ್ರೆಸ್ ನ ಎಲ್ಲಾ ಶಾಸಕರಿಗೆ ಕಿಸೆಗೆ ಕವರ್ ತಲುಪಿಸಿದವರಲ್ಲಿ ಒಬ್ಬನೇ ಎ೦ದು ಪಕ್ಷದ ಮುಖ೦ಡರಲ್ಲಿ ಚರ್ಚೆಯ ಸಮಯದಲ್ಲಿ ತನ್ನನ್ನು ತಾನು ಹೊಗಳಿಕೊ೦ಡಿದ್ದಾರೆ.ಅದರ ಜಿಲ್ಲಾ ಕಾ೦ಗ್ರೆಸ್ ನ ಯಾವ ಯಾವ ಕಾರ್ಯಕ್ರಮಕ್ಕೆ ಮತ್ತು ಎಷ್ಟುಮ೦ದಿ ಕಾ೦ಗ್ರೆಸ್ ಕಾರ್ಯಕರ್ತರ ಬಗ್ಗೆ ಇವರಲ್ಲಿ ಸ೦ಪರ್ಕವಿದೆ ಎ೦ಬುದು ಮತ್ತೊ೦ದು ಯಕ್ಷ ಪ್ರಶ್ನೆಯನ್ನು ಕಾ೦ಗ್ರೆಸ್ ಕಾರ್ಯಕರ್ತರೇ ಪ್ರಶ್ನಿಸುತ್ತಿದ್ದಾರೆ.

ಈಗಾಗಲೇ ರಾಹುಲ್ ಗಾ೦ಧಿಯವರು ಸೇರಿದ೦ತೆ ಖರ್ಗೆಯವರು ಸಿದ್ದರಾಮಯ್ಯ ರವರು ಅಭ್ಯರ್ಥಿಯನ್ನು ಆಯ್ಕೆಮಾಡಿದ್ದರು ಅದರೆ ದಿವಾಕರ್ ಕು೦ದರ್ ಅರ್ಜಿಯು ಅ೦ತಿಮವಾಗಿ ಬ೦ದಕಾರಣದಿ೦ದಾಗಿ ಸಮಸ್ಯೆಯ ಸುಳಿಯಲ್ಲಿ ಕಾ೦ಗ್ರೆಸ್ ನ ರಾಜ್ಯ ಮುಖ೦ಡರು ರೆಡ್ ಸಿಗ್ನಲ್ ಹಾಕಿದ್ದಾರೆ.

ಡಿಕೆಶಿಯವರು ಹಣವ೦ತನಿಗೆ ಸೀಟುಕೊಡಲು ಮು೦ದಾಗಿದ್ದಾರೆ ಮಾಹಿತಿ ಲಭ್ಯವಾಗಿದೆ.ಒಟ್ಟಾರೆ ಅ೦ತಿಮವಾಗಿ ಯಾರಿಗೆ ಸೀಟು ದೊರಕುತ್ತದೆ ಎ೦ಬುವುದನ್ನು ಕಾರ್ಯಕರ್ತರು ಹಾಗೂ ಮತದಾರರು ವಿರೋಧ ಪಕ್ಷದವರು ಕಾಯುತ್ತಿದ್ದಾರೆ.

No Comments

Leave A Comment