ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವೆ೦ಬರ್ 13ರ೦ದು ವಿಶ್ವರೂಪದರ್ಶನ ಕಾರ್ಯಕ್ರಮವು ಬೆಳಿಗ್ಗೆ 5ಗ೦ಟೆಗೆ ಜರಗಿತು.ನವೆ೦ಬರ್ 18ಹಾಗೂ 19ರ೦ದು ಲಕ್ಷ ದೀಪೋತ್ಸವವು ಜರಗಲಿದೆ.
ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಆಶ್ರಯದಲ್ಲಿ ವಿಪ್ರ ಮಹಿಳಾ ದಿನಾಚರಣೆ-ವಿವಿಧ ಕ್ಷೇತ್ರದಲ್ಲಿ ಸೇವೆಸಲ್ಲಿಸುತ್ತಿರುವ ಮಹಿಳೆಯರಿಗೆ ಸನ್ಮಾನ
ಉಡುಪಿ: ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಆಶ್ರಯದಲ್ಲಿ ವಿಪ್ರ ಮಹಿಳಾ ದಿನಾಚರಣೆ ಮತ್ತು ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡ್ ವಿತರಣೆ ಕಾರ್ಯಕ್ರಮವು ಪರಿಷತ್ತಿನ ಬ್ರಾಹ್ಮೀ ಸಭಾಭವನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ವಿಪ್ರ ಸಾಧಕಿಯರಾದ ವೀಣಾ ವಿದುಷಿ ಪವನ ಬಿ ಆಚಾರ್, ಖ್ಯಾತ ಕವಯಿತ್ರಿ ಜ್ಯೋತಿ ಮಹಾದೇವ್, ದಂತ ವೈದ್ಯೆ ಸಮಾಜ ಸೇವಕಿ ಡಾ. ಅರ್ಚನಾ ಕೆ, ಯುವ ಯಕ್ಷ ಪ್ರತಿಭೆ ಪ್ರಣಮ್ಯ ತಂತ್ರಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಖ್ಯಾತ ಸ್ತ್ರೀರೋಗ ತಜ್ಞರಾದ ಡಾ. ರಾಜಲಕ್ಷ್ಮಿ ಇವರು ಮಹಿಳೆಯರ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು ವಿಷಯದ ಬಗ್ಗೆ ಮಾಹಿತಿ ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಡುಪಿ ಜಿಲ್ಲಾ ಮಹಿಳಾ ಮಂಡಳಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಸಂತಿ ರಾವ್ ಕೊರಡ್ಕಲ್ ಅವರು ಮಾತನಾಡಿ ನಮ್ಮ ಉಡುಪಿ ಜಿಲ್ಲೆ ಸುಶಿಕ್ಷಿತ ಎಂದು ಪರಿಗಣಿಸಲ್ಪಟ್ಟರೂ ಮಹಿಳೆಯರ ಶೋಷಣೆ ನಿರಂತರ ನಡೆಯುತ್ತಿದೆ ಅದರ ವಿರುದ್ಧ ಎಲ್ಲರೂ ಒಟ್ಟಾಗಿ ಗಟ್ಟಿ ಧ್ವನಿಯಲ್ಲಿ ಪರಿಣಾಮಕಾರಿಯಾಗಿ ಪ್ರತಿಭಟನೆ ಮಾಡುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.
ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡ್ ಸೌಲಭ್ಯದ ಬಗ್ಗೆ ಸಂಚಾಲಕರಾದ ಕೆ ರಘುಪತಿ ರಾವ್ ಇವರು ಮಾಹಿತಿ ನೀಡಿದರು. ಅನಂತರ ಸುಮಾರು 400 ಫಲಾನುಭವಿಗಳಿಗೆ ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಅಶಕ್ತರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ರೂ. 20,000 ಸಹಾಯಧನ ಹಸ್ತಾಂತರಿಸಲಾಯಿತು. ನೂತನ ಮಹಿಳಾ ಸದಸ್ಯರನ್ನು ಪರಿಷತ್ತಿಗೆ ಸೇರ್ಪಡೆಗೊಳಿಸಲಾಯಿತು.
ಸಭಾ ಕಾರ್ಯಕ್ರಮದ ನಂತರ ಮಹಿಳಾ ಸದಸ್ಯರಿಂದ ವಿವಿಧ ಮನರಂಜನ ಕಾರ್ಯಕ್ರಮ ಜರುಗಿತು. ಸದಸ್ಯರಾದ ಶಶಿಪ್ರಬಾ, ಜ್ಯೋತಿ ಲಕ್ಷ್ಮಿ, ಸುನಿತಾ ಚೈತನ್ಯ, ಅನುಪಮಾ ಸನ್ಮಾನ ಪತ್ರ ವಾಚಿಸಿದರು. ಅಮಿತಾ ಕ್ರಮದಾರಿ ಮತ್ತು ಪದ್ಮಲತಾ ವಿಷ್ಣು ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಕೋಶಾಧಿಕಾರಿ ಕುಮಾರಸ್ವಾಮಿ ಉಡುಪ ನೂತನ ಸದಸ್ಯರ ಪಟ್ಟಿ ವಾಚಿಸಿದರು. ಪ್ರಾರಂಭದಲ್ಲಿ ಸದಸ್ಯರಾದ ಆಶಾ ರಘುಪತಿ ರಾವ್, ಪದ್ಮಲತಾ ವಿಷ್ಣು ಮತ್ತು ಸವಿತಾ ಶಶಿಧರ್ ಇವರು ಪ್ರಾರ್ಥಿಸಿದರು.
ಪರಿಷತ್ತಿನ ಅಧ್ಯಕ್ಷರಾದ ಚೈತನ್ಯ ಎಂ. ಜಿ. ಪ್ರಸ್ತಾವಿಸಿ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಎನ್. ವಂದನಾರ್ಪಣೆಗೈದರು.