ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವೆ೦ಬರ್ 13ರ೦ದು ವಿಶ್ವರೂಪದರ್ಶನ ಕಾರ್ಯಕ್ರಮವು ಬೆಳಿಗ್ಗೆ 5ಗ೦ಟೆಗೆ ಜರಗಿತು.ನವೆ೦ಬರ್ 18ಹಾಗೂ 19ರ೦ದು ಲಕ್ಷ ದೀಪೋತ್ಸವವು ಜರಗಲಿದೆ.

ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಮಳೆ ನೀರು: ನರೇಂದ್ರ ಮೋದಿ ರೋಡ್ ಶೋ ಮಾಡಲು ಕಾಂಗ್ರೆಸ್ ಆಹ್ವಾನ

ಬೆಂಗಳೂರು: ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಶುಕ್ರವಾರ ರಾತ್ರಿ ಮಳೆ ನೀರಿನಿಂದ ತುಂಬಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು. ಈ ಕುರಿತ ವಿಡಿಯೋವೊಂದನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

ಕಳೆದ ವರ್ಷವೇ ಈ ಹೆದ್ದಾರಿ ಮಳೆಯಿಂದ ಮುಳುಗಿತ್ತು. ಈಗ ಮತ್ತೊಮ್ಮೆ ಸಮ್ಣ ಮಳೆಗೆ ಅವಾಂತರ ಸೃಷ್ಟಿಯಾಗಿದೆ ಎಂದರೆ ಇದು ಅವೈಜ್ಞಾನಿಕವಾಗಿರುವ ಬಿಜೆಪಿ ಭ್ರಷ್ಟಪಥ ಅಲ್ಲವೇ ಎಂದು ಪ್ರಶ್ನಿಸಿದೆ. ನರೇಂದ್ರ ಮೋದಿ ಅವರು ಈಗ ಬಂದು ರೋಡ್ ಶೋ ಮಾಡಬೇಕೆಂದು ಆಹ್ವಾನಿಸಿದೆ.  ಕಾರಿನಲ್ಲಿ ರೋಡ್ ಶೋ  ಮಾಡುವರೋ, ಬೋಟಿನಲ್ಲಿ ಮಾಡುವರೋ ಅವರೇ ನಿರ್ಧರಿಸಲಿ! ಎಂದು ವ್ಯಂಗ್ಯವಾಡಿದೆ.

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿನ ಅವ್ಯವಸ್ಥೆ ಖಂಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಪ್ರಯಾಣಕರ ಜೀವನ್ನು ಬಿಜೆಪಿ ಪಣಕ್ಕಿಟ್ಟಿದೆ ಎಂದು ಆರೋಪಿಸಿದ್ದಾರೆ.

ಬೆಂಗಳೂರು-ಮೈಸೂರು ದಶಪಥ ರಸ್ತೆ ಕ್ರೆಡಿಟ್ ತೆಗೆದುಕೊಳ್ಳುತ್ತಿರುವ ಪುಣ್ಯಾತ್ಮರೆಲ್ಲ ಹೆದ್ದಾರಿ ಜಲಾವೃತ್ತವಾಗಿರುವ ಬಗ್ಗೆ ಮಾತನಾಡಬೇಕು, ದುಬಾರಿ ಟೋಲ್ ಮಾತ್ರ ಬೇಕು ಆದರೆ, ಅದಕ್ಕೆ ತಕ್ಕ ಸೇವೆ ಒದಗಿಸುವುದು ಸಾಧ್ಯವಿಲ್ಲ. ಪ್ರಯಾಣಿಕರ ಜೀವವನ್ನು ಬಿಜೆಪಿಯ ಶೇ. 40 ರಷ್ಟು ವ್ಯವಹಾರ ಸರ್ಕಾರ ಪಣಕ್ಕಿಟ್ಟಿದೆ. ಭ್ರಷ್ಟಚಾರ ಬಿಟ್ಟರೆ ನಿಮ್ಮ ಕೊಡುಗೆ ಏನಿದೆ ಎಂದು ಪ್ರಶ್ನೆ ಮಾಡಿದ್ದಾರೆ.

No Comments

Leave A Comment