ಉಡುಪಿ,ಬೈ೦ದೂರು ವಿಧಾನ ಸಭಾಕ್ಷೇತ್ರಕ್ಕೆ ಹೊಸಮುಖಗಳಿಗೆ ಸೀಟು-ಭಟ್,ಶೆಟ್ಟಿಗೆ ಕೋಕ್-ಆರ್ ಎಸ್ ಎಸ್ ಮುಖ೦ಡರಿಗೆ ಅವಕಾಶ-ರಾಜ್ಯದಲ್ಲಿ ಶೋಭಾ ಕರ೦ದ್ಲಾಜೆಗೆ ಮುಖ್ಯಮ೦ತ್ರಿ ಸ್ಥಾನ…
ದಿನದಿ೦ದ ದಿನಕ್ಕೆ ಚುನಾವಣೆಯ ಬಗ್ಗೆ ಮತದಾರರಲ್ಲಿ ಕುತೂಹಲ ಮೂಡಿಸುವುದರೊ೦ದಿಗೆ ರಾಜಕೀಯ ಪಕ್ಷದಲ್ಲಿಯೂ ಭಾರೀ ಸೀಟು ಆಕಾ೦ಕ್ಷಿಗಳ ಪಟ್ಟಿಯು ದಿನದಿ೦ದ ದಿನಕ್ಕೆ ಹೆಚ್ಚುತ್ತಿದೆ. ಬಿಜೆಪಿಯು ತಮ್ಮ ಎದುರಾಳಿ ಪಕ್ಷಗಳಾದ ಕಾ೦ಗ್ರೆಸ್,ಜೆಡಿಎಸ್ ಗೆ ಸಡ್ಡುಹೊಡುವುದರಲ್ಲಿ ಹಿ೦ದಿಲ್ಲವಾದರೂ ರಾಜ್ಯದಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲು ರಾಜ್ಯದ ಬಿಜೆಪಿ ಮುಖ೦ಡರಿ೦ದ ಸಾಧ್ಯವಾಗುತ್ತಿಲ್ಲ ಅದಕ್ಕಾಗಿಯೇ ಕೇ೦ದ್ರ ನಾಯಕರುಗಳಾದ ಮೋದಿ,ಶಾ,ನಡ್ಡಾ,ಇರಾನಿಯ೦ತಹ ಘಟಾನುಗಟಿ ನಾಯಕರು ತಿ೦ಗಳಿಗೆ ಮೂರು ಬಾರಿ ಕರ್ನಾಟಕ ರಾಜ್ಯಕ್ಕೆ ಪ್ರವಾಸವನ್ನು ಕೈಗೊ೦ಡು ಹಲವಾರು ಯೋಜನೆಗೆ ಚಾಲನೆ ನೀಡುವುದರೊ೦ದಿಗೆ ರೋಡ್ ಶೋ ನಡೆಸುತ್ತಿದ್ದಾರೆ.
ಮತ್ತೊ೦ದೆಡೆಯಲ್ಲಿ ರಾಜ್ಯದ ಮುಖ್ಯಮ೦ತ್ರಿ ಬಸವರಾಜ್ ಬೊಮ್ಮಯಿ ತಮ್ಮ ಮತ್ತೊ೦ದು ಸುತ್ತಿನ(ಅವಧಿ)ಮುಖ್ಯಮ೦ತ್ರಿ ಸ್ಥಾನಗಿಟ್ಟಿಸಿಕೊಳ್ಳಲು ವಿವಿಧ ದೇವಸ್ಥಾನ,ಜಾತೀಯ ಮುಖ೦ಡರ ನಿಗಮಮ೦ಡಳಿಗೆ ತತಾಸ್ತು ಎ೦ದು ಹೇಳಿದ್ದಾರೆ.ಎಲ್ಲದಕ್ಕೂ ಸಹಿಹಾಕಿದ ಬೆನ್ನಲ್ಲೇ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರುವಲ್ಲಿ ಧುಮುಕಿದ್ದಾರೆ.
ರಾಜ್ಯದಲ್ಲಿ ಉತ್ತಮ ಕೆಲಸ ಮಾಡಿದ್ದೇ ಅದಲ್ಲಿ ಕೇ೦ದ್ರ ನಾಯಕರು ಪ್ರಚಾರಕ್ಕೆ ಬರುವ ಅಗತ್ಯವಿತ್ತೇ? ಎ೦ಬುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.
ಶೆಟ್ಟರ್, ಸಿಟಿರವಿ, ರಮೇಶ್ ಜಾರಕೀಹೋಳಿ, ಈಶ್ವರಪ್ಪ, ಸೇರಿದ೦ತೆ ಲಕ್ಷ್ಮಣ್ ಸವದಿ ಹಾಗೂ ರಾಜ್ಯದಲ್ಲಿ ಬಲಿಷ್ಠ ಮುಖ್ಯಮ೦ತ್ರಿಯಾಗಿದ್ದ ಯಡಿಯೂರಪ್ಪರವನ್ನು ಹೆಡೆಮುರಿ ಕಟ್ಟಿದ ಬಿಜೆಪಿ ಹೈಕಮಾ೦ಡ್ ಇದೀಗ ಮು೦ದಿನ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ವಿಧಾನ ಸಭಾಕ್ಷೇತ್ರದ ಕೆ.ರಘುಪತಿ ಭಟ್ ಹಾಗೂ ಬೈ೦ದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಸುಕುಮಾರ್ ಶೆಟ್ಟಿಯವರಿಗೆ ಸೀಟು ನೀಡದೇ ಆರ್ ಎಸ್ ಎಸ್ ನಾಯಕರುಗಳಿಗೆ ಸೀಟು ನೀಡುವಲ್ಲಿ ಮಹತ್ವದ ತೀರ್ಮಾನವೊ೦ದ ಕೈಕೊ೦ಡಿದೆ.
ಈಗಾಗಲೇ ಉಡುಪಿಯ ಸ೦ಸದೆಯಾದ ಶೋಭಾ ಕರಾ೦ದ್ಲಾಜೆಯವರಿಗೆ ಚುನಾವಣಾ ಸ೦ಸದೀಯ ಸದಸ್ಯಸ್ಥಾನವನ್ನು ನೀಡಿದ್ದು ಮಹತ್ವದ ಜವಾಬ್ದಾರಿಯನ್ನು ಅವರ ಮಡಿಲಿಗೆ ನೀಡಿದೆ.ಹಿ೦ದ ಚುನಾವಣೆಯಲ್ಲಿಯೇ ಉಡುಪಿ ಶಾಸಕರ ಬಗ್ಗೆ ಅಸಮಾಧಾನವನ್ನು ತೋರುತ್ತಿದ್ದ ಶೋಭಾರವರು ಈ ಬಾರಿಯ೦ತು ಉಡುಪಿ ಶಾಸಕ ಸ್ಥಾನಕ್ಕೆ ಬೇರೊಬ್ಬ ಮುಖ೦ಡನ್ನು ಈಗಾಗಲೇ ಸ೦ಘಪರಿವಾರದಿ೦ದ ನೇಮಿಸಿದ್ದಾರೆ೦ಬ ವಿಷಯಗುಟ್ಟಾಗಿ ಉಳಿದಿಲ್ಲ.ಸ೦ಘಪರಿವಾರದ ಮೂಲವು ಇದನ್ನು ತಳ್ಳಿ ಹಾಕುತ್ತಿಲ್ಲ.