ಸಿಕಂದರಾಬಾದ್: ಸ್ವಪ್ನಲೋಕ ಕಾಂಪ್ಲೆಕ್ಸ್‌ನಲ್ಲಿ ಬೆಂಕಿ, 8 ಮಂದಿ ಸಾವು
ಹೈದರಾಬಾದ್: ಸಿಕಂದರಾಬಾದ್‌ನ ಸ್ವಪ್ನಲೋಕ ಕಾಂಪ್ಲೆಕ್ಸ್‌ನಲ್ಲಿ ನಿನ್ನೆ ಗುರುವಾರ ಸಂಜೆ ಸಂಭವಿಸಿದ ಬೆಂಕಿ ದುರಂತದಲ್ಲಿ ನಾಲ್ವರು ಯುವತಿಯರು ಸೇರಿದಂತೆ ಎಂಟು ಮಂದಿ ಮೃತಪಟ್ಟಿದ್ದಾರೆ.
ಮೃತಪಟ್ಟವರನ್ನು ಶಿವ, ಪ್ರಶಾಂತ್, ಪ್ರಮೀಳಾ, ಶ್ರಾವಣಿ, ವೆನ್ನೆಲಾ ಮತ್ತು ತ್ರಿವೇಣಿ ಎಂದು ಗುರುತಿಸಲಾಗಿದೆ. ಬೆಂಕಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ವಾಶ್‌ರೂಮ್‌ಗೆ ಹೋಗಿ ಬೀಗ ಹಾಕಿದ ನಂತರ ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಒಂಬತ್ತು ಅಂತಸ್ತಿನ ಕಟ್ಟಡದ ಐದನೇ ಮಹಡಿಯಲ್ಲಿ ನಿನ್ನೆ ರಾತ್ರಿ 7.45ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಐದು ಅಗ್ನಿಶಾಮಕ ಟೆಂಡರ್‌ಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಇತರ ಮಹಡಿಗಳಿಗೆ ವ್ಯಾಪಿಸದಂತೆ ನಿಯಂತ್ರಿಸಿದರು.
ತೆಲಂಗಾಣ ರಾಜ್ಯ ವಿಪತ್ತು ಪ್ರತಿಕ್ರಿಯೆ ಮತ್ತು ಅಗ್ನಿಶಾಮಕ ಸೇವೆಗಳು ಮತ್ತು ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (GHMC) ನ ವಿಪತ್ತು ಮತ್ತು ಪ್ರತಿಕ್ರಿಯೆ ಪಡೆ (DRF) ಸದಸ್ಯರನ್ನು ಒಳಗೊಂಡ ರಕ್ಷಣಾ ತಂಡವು ಹೈಡ್ರಾಲಿಕ್ ಕ್ರೇನ್ ಎಲಿವೇಟರ್ ನ್ನು ಬಳಸಿಕೊಂಡು ಎಂಟು ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಸಾಧ್ಯವಾಯಿತು. ಅನೇಕ ಸಿಕ್ಕಿಬಿದ್ದ ವ್ಯಕ್ತಿಗಳು ರಕ್ಷಣಾ ಸಿಬ್ಬಂದಿಯ ಗಮನ ಸೆಳೆಯಲು ತಮ್ಮ ಮೊಬೈಲ್ ಫೋನ್ಗಳಲ್ಲಿ ತಮ್ಮ ಟಾರ್ಚ್ಲೈಟ್ಗಳನ್ನು ಬೆಳಗಿಸಿದರು.