Log In
BREAKING NEWS >
ಮಾರ್ಚ್ 8ರ೦ದು ಮಹಾಶಿವರಾತ್ರೆ-ಎಲ್ಲಾ ಈಶ್ವರ ದೇವಸ್ಥಾನಗಳಲ್ಲಿ ಭಜನಾ ಸ೦ಕೀರ್ತನೆ ಜರಗಲಿದೆ.....

ನಟ ರಕ್ಷಿತ್ ಶೆಟ್ಟಿ ಅವರು ಬಿಜೆಪಿಯ ಏಜೆಂಟರೇ?-ಸುರೇಶ್ ಶೆಟ್ಟಿ ಬನ್ನಂಜೆ

ಉಡುಪಿ:ಚಲನಚಿತ್ರ ನಟ ರಕ್ಷಿತ್ ಶೆಟ್ಟಿ ಅವರು ಬಿಜೆಪಿಯ ಏಜೆಂಟರಂತೆ ಮಾತನಾಡುತ್ತಿದ್ದಾರೆ ತಮ್ಮ ಚಲನಚಿತ್ರಕ್ಕೆ ರಾಜ್ಯ ಬಿಜೆಪಿ ಸರಕಾರ ನೂರು ಶೇಕಡ ಟ್ಯಾಕ್ಸ್ ಫ್ರೀ ಘೋಷಿಸಿದ್ದಕ್ಕಾಗಿ ಅದರ ಋಣವನ್ನು ತೀರಿಸುತ್ತಿದ್ದಾರೆಯೋ ಅಥವಾ ಉಡುಪಿ ಶ್ರೀ ಕೃಷ್ಣ ಮಠದ ಬಗ್ಗೆ ಮಾತನಾಡುತ್ತಿದ್ದಾ ರೋ ಉಡುಪಿ ಶ್ರೀ ಕೃಷ್ಣ ಮಠದ ಬಗ್ಗೆ ಮಾತನಾಡುವುದಾದರೆ ಪೇಜಾವರ ಮಠದ ಮಠದ ಹಿರಿಯ ಸ್ವಾಮೀಜಿಗಳು ಈ ಹಿಂದೆ ನೀಡಿದಂತಹ ಹೇಳಿಕೆಯನ್ನೇ ಮಿಥುನ್ ರೈ ಅವರು ಪುನರ್ಪಿ ಹೇಳಿದ್ದಾರೆ ಅಜ್ಞಾನಿಯಂತೆ ನೀವು ವರ್ತಿಸುವ ಮೊದಲು ಅಥವಾ ಹೇಳಿಕೆ ನೀಡುವ ಮೊದಲು ಪೇಜಾವರಮಠದ ಹಿರಿಯ ಮಠಾಧೀಶರ ಹೇಳಿಕೆಯನ್ನು ಮೊದಲು ನೋಡಿ ನಂತರ ನಿಮ್ಮ ಉತ್ತರವನ್ನು ನೀಡಬಹುದಿತ್ತು ಆದರೆ ಬಿಜೆಪಿ ಚೇಲಗಳಂತೆ ವರ್ತಿಸಿರುವುದು ನಿಮ್ಮಂತಹ ಒಬ್ಬ ಸ್ಟಾರ್ ನಟನಿಗೆ ಬೇಡವಾದ ಕೆಲಸ ನಾವೆಲ್ಲರೂ ಕೂಡ ಉಡುಪಿ ಅವರೇ ನೀವೊಬ್ಬರೇ ಉಡುಪಿಯ ರಥ ಬೀದಿಯನ್ನು ನೋಡಿದವರಲ್ಲ ಎಂದು ಉಡುಪಿ ಬ್ಲಾಕ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಅಧ್ಯಕ್ಷ ಸುರೇಶ್ ಶೆಟ್ಟಿ ಬನ್ನಂಜೆ ತಿಳಿಸಿರುತ್ತಾರೆ.

No Comments

Leave A Comment