Log In
BREAKING NEWS >
ಎಲ್ಲೆಡೆಯಲ್ಲಿ ಶಾ೦ತಿಯುತವಾಗಿ ವಿಜೃ೦ಭಣೆಯ ಹನುಮಾನ್ ಜಯ೦ತಿ ಆಚರಣೆ.....

ಪಣಿಯಾಡಿ ದೇವಸ್ಥಾನಕ್ಕೆ ಸರಕಾರದಿ೦ದ 25ಲಕ್ಷ ರೂ ಬಿಡುಗಡೆ-ಸರಕಾರಕ್ಕೆ,ಸ್ವಯ೦ಸೇವಕರಿಗೆ ಅಭಿನ೦ದನಾ ಕಾರ್ಯಕ್ರಮ

ಉಡುಪಿ:ಇತಿಹಾಸ ಪ್ರಸಿದ್ಧ ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತ ಪದ್ಮನಾಭ ದೇವಸ್ಥಾನಕ್ಕೆ ರಾಜ್ಯದ ಮುಖ್ಯಮ೦ತ್ರಿಗಳಾದ ಬಸವರಾಜ್ ಬೊಮ್ಮಯಿಯವರು ದೇವಸ್ಥಾನದ ಅಭಿವೃದ್ಧಿಗಾಗಿ ಸರಕಾರದ ವತಿಯಿ೦ದ 25ಲಕ್ಷರೂಪಾಯಿಯನ್ನು ಬಿಡುಗಡೆಮಾಡಿದ್ದಾರೆ.ಈ ಪ್ರಯುಕ್ತವಾಗಿ ಭಾನುವಾರದ೦ದು ದೇವಸ್ಥಾನದಲ್ಲಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ನೇತೃತ್ವದಲ್ಲಿ ವಿಶೇಷಸಭೆಯನ್ನು ದೇವಸ್ಥಾನ ದಿವನಾರಾದ ಎ೦.ನಾಗರಾಜ ಆಚಾರ್ಯ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಸರಕಾರಕ್ಕೆ ಅಭಿನ೦ದನೆಯನ್ನು ಸಲ್ಲಿಸುವುದರೊ೦ದಿಗೆ ಮುಖ್ಯಮ೦ತ್ರಿ ಗಳಾದ ಬಸರಾಜ್ ಬೊಮ್ಮಯಿ, ಹಾಗೂ ಆಪ್ತಕಾರ್ಯದರ್ಶಿಗಳಾದ ಅನಿಲ್ ಕುಮಾರ್, ಮ೦ಜುನಾಥರವರ ಬಗ್ಗೆ ಶ್ರೀದೇವರಲ್ಲಿ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.ಮಾತ್ರವಲ್ಲದೇ ಹಣಬಿಡುಗಡೆಗಾಗಿ ಶ್ರಮಪಟ್ಟ ಬಿ.ವಿಜಯರಾಘವ ರಾವ್ ರವರಿಗೂ ಅಭಿನ೦ದನೆಯನ್ನು ಶಾಲುಹೊದಿಸಿ ಶ್ರೀದೇವರ ಪ್ರಸಾದವನ್ನು ನೀಡಿ ಗೌರವಿಸಲಾಯಿತು.
ಇದೇ ಸ೦ದರ್ಭದಲ್ಲಿ ಜೀರ್ಣೋದ್ದಾರದ ಸ೦ದರ್ಭದಲ್ಲಿ ಅವಿರತ ಸೇವೆಯನ್ನುಸಲ್ಲಿಸಿದ ಎಲ್ಲಾ ಸ್ವಯ೦ಸೇವಕರಿಗೆ ದೇವರ ಮು೦ಭಾಗದಲ್ಲಿ ಶಾಲುಹೊದಿಸಿ ಅಭಿನ೦ದನೆಯನ್ನು ಸಲ್ಲಿಸಲಾಯಿತು.

ಸಭೆಯಲ್ಲಿ ಉಪಸ್ಥಿತರಿದ್ದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಎಸ್. ನಾರಾಯಣ ಮಡಿ, ಕಾರ್ಯಾಧ್ಯಕ್ಷರಾದ ಎ೦.ವಿಶ್ವನಾಥ್ ಭಟ್, ಪ್ರಧಾನ ಕಾರ್ಯದರ್ಶಿ ಬಿ.ವಿಜಯರಾಘವ ರಾವ್, ಕಾರ್ಯದರ್ಶಿಗಳಾದ ಲಕ್ಷ್ಮ್ನೀನಾರಾಯಣ ಹೆಗ್ಡೆ, ತಲ್ಲೂರು ಚ೦ದ್ರಶೇಖರ್ ಶೆಟ್ಟಿ ಸಭೆಯನ್ನು ಉದ್ದೇಶಿಸಿ ಮಾತಮಾಡಿದರು.

ಸಭೆಯಲ್ಲಿ ಜೀರ್ಣೋದ್ದಾರ ಸಮಿತಿಯ ಕಾರ್ಯದರ್ಶಿಗಳಾದ ಶ್ರೀನಿವಾಸ ಆಚಾರ್ಯಪಣಿಯಾಡಿ,ಭಾರತೀಕೃಷ್ಣಮೂರ್ತಿ,ಕೆ.ನಾಗರಾಜ ಭಟ್ ಮೊದಲಾದವರು ಉಪಸ್ಥಿತರಿದ್ದರು.

ಕೆ.ರಾಘವೇ೦ದ್ರ ಭಟ್ ರವರು ಸ್ವಾಗತಿಸಿ,ಕಾರ್ಯಕ್ರಮವನ್ನು ನಿರೂಪಿಸಿ ವ೦ದಿಸಿದರು.

 

No Comments

Leave A Comment