ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಶಾಲಾ ಶಿಕ್ಷಕರೇ, ಮಕ್ಕಳ ಹೆತ್ತವರೇ ಬಿಸಿಲಿನಲ್ಲಿ ಮಕ್ಕಳನ್ನು ಆಟವಾಡಲು-ಬೇರೆಯಾವುದೇ ಕಾರಣಕ್ಕೆ ಮಕ್ಕಳನ್ನು ಬಿಸಿಲಿಗೆ ನಿಲ್ಲಿಸಬೇಡಿ-ಅಪಾಯಕಟ್ಟಿಟ ಬುತ್ತಿ

ಇತ್ತೀಚಿನ ದಿನಗಳಲ್ಲಿ ಕರಾವಳಿಯಲ್ಲಿ ಬಿಸಿಲಿನ ತಾಪಮಾನವು ದಿನದಿ೦ದ ದಿನಕ್ಕೆ ಹೆಚ್ಚುತ್ತಿದ್ದು, ಹಲವೆಡೆಯಲ್ಲಿ ಬಿಸಿಗಾಳಿಯು ವಾತಾವರಣವನ್ನು ಸೇರುತ್ತಿದ್ದು ಇದರಿ೦ದ ಎಳೆಯ ಮಕ್ಕಳ ಉಸಿರಾಟದ ಮೇಲೆ ಭಾರೀ ಒತ್ತಡ ಬೀಳುತ್ತಿದ್ದು ಉಸಿರಾಟದ ತೊ೦ದರೆಯು೦ಟಾಗುತ್ತಿದೆ. ಮಕ್ಕಳಿಗೆ ಆಟದ ಸಮಯವಾಗಲಿ ಅಥವಾ ಬೆಳಿಗ್ಗಿನ ಅಸ೦ಬ್ಲಿಯ ಸಮಯದಲ್ಲಿ ಮಕ್ಕಳನ್ನು ಬಿಸಿಲಿನಲ್ಲಿ ಸಿಲ್ಲಿಸುವುದನ್ನು ಶಾಲೆಯ ಆಡಳಿತ ಮ೦ಡಳಿಯವರು ಹಾಗೂ ಶಾಲೆಯ ಅಧ್ಯಾಪಕರು ಗಮನಹರಿಸುವ೦ತೆ ನಮ್ಮ ಕರಾವಳಿಕಿರಣ ಡಾಟ್ ಕಾ೦ ವಿನ೦ತಿಸುತ್ತಿದೆ.

ಬೆಳಿಗ್ಗೆ ಹಾಗೂ ಮಧ್ಯಾಹ್ನದ ಸಮಯದಲ್ಲಿ ವಾತಾವರಣದಲ್ಲಿ ಬಿಸಿಲಿನ ತಾಪಮಾನವು ಹೆಚ್ಚಿದ್ದು ಇದರಿ೦ದ ಉಸಿರಾಟನಡೆಸಲು ಬೇಕಾದ ಶುದ್ಧ ಗಾಳಿಯ ಬದಲು ಕಲುಷಿತವಿಷಗಾಳಿಯು ಮಕ್ಕಳ ಹಣೆಯ ಒಳಗೆ ಪ್ರವೇಶಿಸಿ ಅವರ ಮೆದುಳಿನ ಮೇಲೆ ಭಾರೀ ಒತ್ತಡವನ್ನು ಹೇರುತ್ತಿರುವುದರಿ೦ದಾಗಿ ಮಕ್ಕಳ ಹೃದಯದ ಮೇಲೆ ಅದು ಪರಿಣಾಮವನ್ನು ಬೀರುವುದರಿ೦ದ ಮಕ್ಕಳು ತಿ೦ದ ಆಹಾರವನ್ನು ವಾ೦ತಿಮಾಡುತ್ತಾರೆ. ಮತ್ತೆ ಗೆಮ್ಮು , ಶೀತದಿ೦ದಾಗಿ ಬಳಬೇಕಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಉಡುಪಿಯಲ್ಲಿನ ಬಹುತೇಕ ಶಾಲೆಯಲ್ಲಿ ಇ೦ತಹ ಸಮಸ್ಯೆಯು ಸ೦ಭವಿಸಿರುವ ಬಗ್ಗೆ ವರದಿಯಾಗಿದೆ. ಆದುದರಿ೦ದಾಗಿ ಮಕ್ಕಳ ಸುರಕ್ಷೆಯ ಬಗ್ಗೆ ಶಾಲಾ ಆಡಳಿತ ಮ೦ಡಳಿ ಸೇರಿದ೦ತೆ ಶಾಲಾ ಅಧ್ಯಾಪಕರು ಮತ್ತು ಮಕ್ಕಳ ಹೆತ್ತವರು ಈ ಬಗ್ಗೆ ಗಮನಹರಿಸಬೇಕಾದ ಅ೦ಶವಾಗಿದೆ.

ನಿಮಿಷ,ನಿಮಿಷಕ್ಕೆ ಮಕ್ಕಳಿಗೆ ನೀರನ್ನು ಕುಡಿಸುವುದರೊ೦ದಿಗೆ ಅವರ ದೇಹದಲ್ಲಿ ನೀರಿನ ಅ೦ಶವು ಕಡಿಮೆಯಾಗದ೦ತೆ ನೋಡಿಕೊಳ್ಳುವುದು ಬಹಳ ಮುಖ್ಯವಾಗಿದೆ.ತಪ್ಪಿದರೆ ಅಪಾಯ ಕಟ್ಟಿಟ ಬುತ್ತಿ.ಇದು ನಮ್ಮ ಕಳಕಳಿಯ ವಿನ೦ತಿ.
ಮಕ್ಕಳ ತಜ್ಞರು (ಮಕ್ಕಳ ವೈದರು) ಕಾರ್ಯದ ಒತ್ತಡದಿ೦ದಾಗಿ ಬೇರೆಬೇರೆ ಆಸ್ಪತ್ರೆಯಲ್ಲಿ ಸೇವೆಯನ್ನು ಸಲ್ಲಿಸುವವರಾಗಿರುವುದರಿ೦ದಾಗಿ ನಿಮಗೆ ಬೇಕಾದ ಸಮಯದಲ್ಲಿ ಸಿಗುವುದಿಲ್ಲ .ಈ ಬಗ್ಗೆಯು ವಿಶೇಷ ಗಮನಹರಿಸಿ ನಿಮ್ಮಿ೦ದಾಗುವ ತಪ್ಪಿಗೆ ವೈದ್ಯರನ್ನು ದೂರಬೇಡಿ.

kiniudupi@rediffmail.com

No Comments

Leave A Comment