ವಾಯುಪಡೆಯ ಯುದ್ಧ ಘಟಕದ ಮೊದಲ ಮಹಿಳಾ ಗ್ರೂಪ್ ಕ್ಯಾಪ್ಟನ್ ಆಗಿ ಶಾಲಿಜಾ ಧಾಮಿ ನೇಮಕ !
ನವದೆಹಲಿ: ಭಾರತೀಯ ವಾಯುಪಡೆಯು ಗ್ರೂಪ್ ಕ್ಯಾಪ್ಟನ್ ಶಾಲಿಜಾ ಧಾಮಿ ಅವರನ್ನು ಪಶ್ಚಿಮ ವಲಯದಲ್ಲಿನ ಮುಂಚೂಣಿ ಯುದ್ಧ ಘಟಕದ ಕಮಾಂಡರ್ ಆಗಿ ನೇಮಕ ಮಾಡಲಾಗಿದೆ. ಆ ಮೂಲಕ ಐಎಎಫ್‌ನ ಯುದ್ಧ ಘಟಕವನ್ನು ಮುನ್ನಡೆಸಲಿರುವ ಮೊದಲ ಮಹಿಳೆ ಎನ್ನುವ ಹಿರಿಮೆಗೆ ಗ್ರೂಪ್ ಕ್ಯಾಪ್ಟನ್ ಶಾಲಿಜಾ ಧಾಮಿ ಅವರು ಪಾತ್ರರಾಗಿದ್ದಾರೆ.
2003ರಲ್ಲಿ ಹೆಲಿಕಾಪ್ಟರ್ ಪೈಲಟ್ ಆಗಿ ಗ್ರೂಪ್ ಕ್ಯಾಪ್ಟನ್ ಶಾಲಿಜಾ ಧಾಮಿ ಅವರು ಐಎಎಫ್ ಸೇರ್ಪಡೆಯಾಗಿದ್ದರು. ಇವರು ಪಶ್ಚಿಮ ವಲಯದ ಹೆಲಿಕಾಪ್ಟರ್ ಘಟಕವೊಂದರ ಫ್ಲೈಟ್ ಕಮಾಂಡರ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಗ್ರೂಪ್ ಕ್ಯಾಪ್ಟನ್ ಹುದ್ದೆಯು ಸೇನೆಯಲ್ಲಿನ ಕರ್ನಲ್ ಹುದ್ದೆಗೆ ಸರಿಸಮನಾಗಿದೆ.
ಗ್ರೂಪ್ ಕ್ಯಾಪ್ಟನ್ (ಸೇನೆಯಲ್ಲಿ ಕರ್ನಲ್‌ಗೆ ಸಮಾನ) ಧಾಮಿ ಅವರು 2003 ರಲ್ಲಿ ಹೆಲಿಕಾಪ್ಟರ್ ಪೈಲಟ್ ಆಗಿ ನೇಮಕಗೊಂಡರು. 2,800 ಗಂಟೆಗಳ ಹಾರಾಟದ ಅನುಭವವನ್ನು ಹೊಂದಿದ್ದಾರೆ.
ವಾಯುಪಡೆಯಲ್ಲಿ ಹಲವು ಪ್ರಥಮಗಳ ಕೀರ್ತಿ ಪಡೆದ ಹೆಗ್ಗಳಿಕೆಗೆ ಪಾತ್ರರಾಗಿರುವ ಶಾಲಿಜಾ, 15ಕ್ಕೂ ಹೆಚ್ಚು ವರ್ಷಗಳ ಅನುಭವಗಳನ್ನು ಐಎಎಫ್‌ನಲ್ಲಿ ಪಡೆದಿದ್ದಾರೆ. ಪಂಜಾಬ್ನ ಲೂಧಿಯಾನದಲ್ಲಿ ಜನಿಸಿದ ಇವರು 2003ರಲ್ಲಿ ಎಚ್ಎಎಲ್ ಎಚ್ಪಿಟಿ-32 ದೀಪಕ್ ಅನ್ನು ಮೊದಲ ಬಾರಿಗೆ ಏಕಾಂಗಿಯಾಗಿ ಹಾರಿಸಿದ್ದರು. 2003ರಲ್ಲಿ ಐಎಎಫ್‌ನಲ್ಲಿ ಫ್ಲೈಯಿಂಗ್ ಆಫೀಸರ್ ಆಗಿ ನೇಮಕಗೊಂಡು 2005ರಲ್ಲಿ ಫ್ಲೈಟ್ ಲೆಫ್ಟಿನೆಂಟ್ ಹಾಗೂ 2009ರಲ್ಲಿ ಸ್ಕ್ವಾಡ್ರನ್ ಲೀಡರ್ ಆಗಿ ಬಡ್ತಿ ಪಡೆದಿದ್ದರು.