ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ವಿಶ್ವಮಹಿಳಾ ದಿನಾಚರಣೆ -ಜಿಲ್ಲಾಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ
ಉಡುಪಿ:ಕರ್ನಾಟಕರಕ್ಷಣಾವೇದಿಕೆ ಉಡುಪಿತಾಲೂಕು ಘಟಕದ ವತಿಯಿಂದ ರಾಜ್ಯಧ್ಯಕ್ಷರಾದ ಟಿ, ಎ,ನಾರಾಯಣ ಗೌಡರ ಆದೇಶದಂತೆ ವಿಶ್ವಮಹಿಳಾ ದಿನಾಚರಣೆಯಯನ್ನು ಅಜ್ಜರ ಕಾಡು ಜಿಲ್ಲಾಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ಹಂಪಲು ಹಂಚುವಮೂಲಕ ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಯಿತು ಈ ಸಂದರ್ಭದಲ್ಲಿ ಆಸ್ಪತ್ರೆಯ ಸರ್ಜನ್ ಮಧುಸೂದನ್ ನಾಯಕ್ ಹಾಗೂಜಿಲ್ಲಾ ಸರ್ವಲೈನ್ಸ್ ಡಾ| ನಾಗರತ್ನ ರವರು ವಿಶ್ವ ಮಹಿಳಾ ದಿನಾಚರಣೆ ಶುಭಾಶಯಗಳನ್ನು ತಿಳಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ತಾಲೂಕು ಅಧ್ಯಕ್ಷ ಅ.ರಾ ಪ್ರಭಾಕರ್ ,ರಾಜ್ ಪೂಜಾರಿ ಮಹಿಳಾ ತಾಲ್ಲೂಕು ಅಧ್ಯಕ್ಷೇ ಮಾಮತಾ ಪ್ರಭಾಕರ್ ಹಾಗೂ ಕರ್ನಾಟಕ ರಕ್ಷಣಾವೇದಿಕೆಯ ಸದಸ್ಯಸಮಾಜ ಸೇವಕ ಫ್ರ್ಯಾಂಕಿ ಡಿಸೋಜ ಹಾಗೂ ಜಿಲ್ಲಾ ಪದಾಧಿಕಾರಿಗಳಾದ ರಾಘವೇಂದ್ರ ನಾಯಕ್ ಕುಶಾಲ್ ಅಮೀನ್ ಬೆಂಗ್ರೆಲಕ್ಷ್ಮೀಶ್ ಶೆಟ್ಟಿ ಹಾಗೂ ಮಾಜಿ ಯೋಧ ಸುಂದರ್ ಬಂಗೇರ ಯುವಘಟಕದ ಉಪಾಧ್ಯಕ್ಷ ರೋಷನ್ ಬಂಗೇರ ,ಸಂಗೊಳ್ಳಿರಾಯಣ್ಣ ಜಿಲ್ಲಾಧಕ್ಷರು ಸಿದ್ದುಹಿರೇಮಠ್ ಹಾಗೂ ಅಭಿಮಾನಿ ಬಳಗದ ದೇವರಾಜ್ ಸಿದ್ದಣ್ಣಪೂಜಾರಿ ಹಾಗೂ ಉಡುಪಿ ತಾಲೂಕಿನ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರುಗಳು ಹಾಜರಿದ್ದರು