Log In
BREAKING NEWS >
ನವೆ೦ಬರ್ 27ರ೦ದು ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ದೀಪೋತ್ಸವ ಕಾರ್ಯಕ್ರಮ ಜರಗಲಿದೆ...

ಐತಿಹಾಸಿಕ ಕ್ಷಣ: ನಾಗಾಲ್ಯಾಂಡ್ ಮೊದಲ ಮಹಿಳಾ ಸಚಿವೆಯಾಗಿ ಸಲ್ಹೌಟುವೊನುವೊ ಕ್ರೂಸ್ ಪ್ರಮಾಣ

ಗುವಾಹಟಿ: 60 ಸದಸ್ಯ ಬಲದ ನಾಗಾಲ್ಯಾಂಡ್ ವಿಧಾನಸಭೆಗೆ ಆಯ್ಕೆಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಕೇವಲ ಐದು ದಿನಗಳ ನಂತರ ಸಲ್ಹೌಟುವೊನುವೊ ಕ್ರೂಸ್ ಅವರು ಮಂಗಳವಾರ ರಾಜ್ಯದ ಮೊದಲ ಮಹಿಳಾ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಮತ್ತೊಂದು ಇತಿಹಾಸ ಸೃಷ್ಟಿಸಿದ್ದಾರೆ.

ನಾಗಾಲ್ಯಾಂಡ್ ರಾಜ್ಯದ ಸ್ಥಾನಮಾನ ಪಡೆದು 60 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಇಬ್ಬರು ಮಹಿಳಾ ಶಾಸಕರು, ಕ್ರೂಸ್ ಮತ್ತು ಹೆಕಾನಿ ಜಖಾಲು ಅವರು ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.

60 ಸದಸ್ಯ ಬಲದ ನಾಗಾಲ್ಯಾಂಡ್ ಸರ್ಕಾರದಲ್ಲಿ ಗರಿಷ್ಠ 12 ಮಂದಿ ಸಚಿವರಾಗಲು ಅವಕಾಶ ಇದೆ. ಜಖಾಲು ಅವರನ್ನು ಸಚಿವ ಸ್ಥಾನಕ್ಕೆ ಪರಿಗಣಿಸಿಲ್ಲ. ಜಖಾಲು ಮತ್ತು ಕ್ರೂಸ್ ಇಬ್ಬರೂ ನ್ಯಾಶನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿಯ ಶಾಸಕರಾಗಿದ್ದಾರೆ.

55 ವರ್ಷದ ಕ್ರೂಸ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಭಾವಪರವಶರಾಗಿದ್ದರು.

“ನನಗೆ ಈ ಜವಾಬ್ದಾರಿಯನ್ನು ನೀಡಿರುವುದು ತುಂಬಾ ಸಂತೋಷವಾಗಿದೆ. ನಾನು ನನ್ನ ಕೈಲಾದಷ್ಟು ಮಾಡುತ್ತೇನೆ ಮತ್ತು ಧೈರ್ಯಶಾಲಿ, ಪ್ರಾಮಾಣಿಕ ಮತ್ತು ಕಠಿಣ ಪರಿಶ್ರಮದಿಂದ ಮಹಿಳೆಯರನ್ನು ಪ್ರೋತ್ಸಾಹಿಸುತ್ತೇನೆ” ಎಂದು ಸಚಿವೆಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಕ್ರೂಸ್ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

No Comments

Leave A Comment