Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಮಾರ್ಚ್ 12: ಮಹಾಲಕ್ಷ್ಮೀ ಲೇ ಔಟ್ ನಲ್ಲಿ ರಾಣಿ ಅಬ್ಬಕ್ಕ ಉತ್ಸವ– 2023

ಮಾರ್ಚ್ 12ಕ್ಕೆ ಬೆಂಗಳೂರಿನ ರಾಣಿ ಅಬ್ಬಕ್ಕ ಕ್ರೀಡಾಂಗಣ, ಮಹಾಲಕ್ಷ್ಮೀ ಲೇಔಟ್ನಲ್ಲಿ ರಾಣಿ ಅಬ್ಬಕ್ಕ ಉತ್ಸವ 2023 ನಡೆಯಲಿದೆ ಎಂದು ರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಉಪಾಧ್ಯಕ್ಷೆ ಕಾಂತಿ ಶೆಟ್ಟಿ ತಿಳಿಸಿದ್ದಾರೆ.

ಅವರು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಸ್ವಾತಂತ್ರ್ಯ ಹೋರಾಟ, ಪರಕೀಯರ ದಾಳಿಯನ್ನು ಸದೆ ಬಡಿದು, ಶೌರ್ಯ, ಪರಾಕ್ರಮ ನಾಡಿನ ಗೌರವ ಘನತೆಯನ್ನು ಉಳಿಸುವಲ್ಲಿ, ವಿಶೇಷವಾಗಿ ನಾಡಿನ ಅಪಾರ ಸಂಪತ್ತು ಲೂಟಿಯಾಗಿ ವಿದೇಶಿಯರ ಪಾಲಾಗುತ್ತಿತ್ತು. ಇಂತಹ ಸನ್ನಿವೇಶಗಳನ್ನು ನಿಭಾಯಿಸಿದ ಹಲವು ಮಹಿಳೆಯರಲ್ಲಿ ಬೆಳವಾಡಿ ಮಲ್ಲಮ್ಮ, ಕಿತ್ತೂರು ಚೆನ್ನಮ್ಮ, ಉಳ್ಳಾಲದ ರಾಣಿ ಅಬ್ಬಕ್ಕ ಪ್ರಮುಖರು ಎಂದರು.

ಕರಾವಳಿಯ ದುರ್ಲಾಭ ಪಡೆದ ವಿದೇಶಿಯರಿಗೆ ಪಾಥ ಕಲಿಸಿದ ಅಬ್ಬಕ್ಕಳಿಗೆ ಬೆಂಗಳೂರಿನಲ್ಲಿ ನೆಲೆಸಿರುವ ಸಂಘ ಸಂಸ್ಥೆಗಳು, ಶಾಸಕ ಹಾಗೂ ಅಬಕಾರಿ ಸಚಿವರಾದ ಗೋಪಾಲಯ್ಯ ಸಹಕಾರದಿಂದ, ಅಬ್ಬಕ್ಕ ಪ್ರತಿಮೆಯನ್ನು ರಾಜಾಜಿನಗರ ಪಶ್ಚಿಮದ ಕಾರ್ಡ್ ರಸ್ತೆಯಲ್ಲಿ ಸ್ಥಾಪಿಸಲಾಗಿದೆ. ಹೀಗೆಯೆ ಸಮೀಪದ ಆಟದ ಮೈದಾನವನ್ನು “ಅಬ್ಬಕ್ಕ ಕ್ರೀಡಾಂಗಣ” ಎಂದು ನಾಮಕರಣ ಮಾಡಲಾಗಿದೆ ಎಂದರು.

ಅಬ್ಬಕ್ಕನ ನೆನಪನ್ನು ನಾಡಿನ ಜನತೆಗೆ ನೆನಪಿಸುವ ನಿಟ್ಟಿನಲ್ಲಿ ಮಾರ್ಚ್ 12 ರಂದು ಒಂದು ದಿನದ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ವಿಶೇಷವಾಗಿ ಆಳ್ವಾಸ್ ಮೂಡಬಿದಿರೆ ತಂಡ ಇಲ್ಲಿ ಪ್ರದರ್ಶನ ನೀಡಲಿದೆ. ಆಹಾರ ಮೇಳ, ಕ್ರೀಡೆ, ಕರಾವಳಿಯ ಹುಲಿ ಕುಣಿತ, ಚಿಂಹೆವಾದನ, ಮನರಂಜನಾ ಕಾರ್ಯಕ್ರಮ ನಡೆಯಲಿದೆ ಅಂದರು.

No Comments

Leave A Comment