ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ
ಅಮೇರಿಕಾದಲ್ಲಿ ವಿಮಾನ ಅಪಘಾತ: ಭಾರತೀಯ ಮೂಲದ ಮಹಿಳೆ ಸಾವು, ಮಗಳಿಗೆ ತೀವ್ರ ಗಾಯ
ನ್ಯೂ ಯಾರ್ಕ್: ಅಮೆರಿಕದಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಭಾರತ ಮೂಲದ ಮಹಿಳೆ ಸಾವನ್ನಪ್ಪಿದ್ದು ಆಕೆಯ ಪುತ್ರಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಭಾರತ ಮೂಲದ ರೋಮಾ ಗುಪ್ತಾ (63 ವರ್ಷ) ಅವರು ಭಾನುವಾರ ಲಾಂಗ್ ಐಲ್ಯಾಂಡ್‌ನ ರಿಪಬ್ಲಿಕ್ ಏರ್‌ಪೋರ್ಟ್‌ಗೆ ವಾಪಸಾಗುತ್ತಿದ್ದಾಗ ನಾಲ್ಕು ಆಸನಗಳ ಸಿಂಗಲ್ ಎಂಜಿನ್ ಪೈಪರ್ ಚೆರೋಕೀ ವಿಮಾನವು ಬೆಂಕಿಗೆ ಆಹುತಿಯಾಗಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. NBC ನ್ಯೂಯಾರ್ಕ್ ಟಿವಿ ಚಾನೆಲ್ ಪ್ರಕಾರ, ಅವರ 33 ವರ್ಷದ ಮಗಳು ರಿವಾ ಗುಪ್ತಾ ಮತ್ತು ಪೈಲಟ್ ತೀವ್ರ ಸುಟ್ಟಗಾಯಗಳಿಂದ ಬಳಲುತ್ತಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಲಿಂಡೆನ್‌ಹರ್ಸ್ಟ್‌ನ ವಸತಿ ಪ್ರದೇಶದ ಮೈದಾನದಲ್ಲಿ ವಿಮಾನ ಪತನಗೊಂಡಿದ್ದು, ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಮಾನವು ವಸತಿ ಪ್ರದೇಶಕ್ಕೆ ಅಪ್ಪಳಿಸುವುದನ್ನು ತಡೆಯಲು ಪೈಲಟ್ ತನ್ನ ಕೈಲಾದಷ್ಟು ಪ್ರಯತ್ನಿಸಿದರು.
ಮೂಲಗಳ ಪ್ರಕಾರ ಇದು ವಿಮಾನದ ಪ್ರದರ್ಶನದ ಹಾರಾಟವಾಗಿತ್ತು.. ಆದರೆ ದುರಂತ ಸಂಭವಿಸಿದೆ ಎಂದು ಡ್ಯಾನಿ ವೈಸ್‌ಮನ್ ಫ್ಲೈಟ್ ಸ್ಕೂಲ್‌ನ ವಕೀಲ ಓಲೆಹ್ ಡೆಕಾಜ್ಲೋ ಚಾನೆಲ್‌ಗೆ ತಿಳಿಸಿದ್ದಾರೆ. ಮೃತ ರೋಮಾ ಗುಪ್ತಾ ಅವರ ಪುತ್ರಿ ರಿವಾ ಗುಪ್ತಾ ಅವರು ಮೌಂಟ್ ಸಿನೈ ಹಾಸ್ಪಿಟಲ್ ಸಿಸ್ಟಮ್‌ನ ನರಶಸ್ತ್ರಚಿಕಿತ್ಸೆಯ ವೈದ್ಯ ಸಹಾಯಕರಾಗಿದ್ದಾರೆ. 23 ವರ್ಷದ ಪೈಲಟ್ ಪ್ರಮಾಣೀಕೃತ ವಿಮಾನ ತರಬೇತುದಾರನಾಗಿದ್ದ ಎಂದು WABC-TV ವರದಿ ಮಾಡಿದೆ.