ಬಿಜೆಪಿ, ಕಾಂಗ್ರೆಸ್‌ನಿಂದ ಸಮಾನ ಅಂತರ ಕಾಯ್ದುಕೊಳ್ಳಲು ಟಿಎಂಸಿ ನಿರ್ಧಾರ
ಕೋಲ್ಕತ್ತಾ: ಈಶಾನ್ಯ ರಾಜ್ಯಗಳಲ್ಲಿ ಹೀನಾಯ ಸೋಲಿನಿಂದ ಎಚ್ಚೆತ್ತ ತೃಣಮೂಲ ಕಾಂಗ್ರೆಸ್, ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಸಮಾನ ಅಂತರ ಕಾಯ್ದುಕೊಳ್ಳಲು ಮತ್ತು ಈ ಎರಡೂ ಪಕ್ಷಗಳನ್ನು ವಿರೋಧಿಸುವ ಪ್ರಾದೇಶಿಕ ಪಕ್ಷಗಳೊಂದಿಗೆ ಕೈಜೋಡಿಸಲು ಮುಂದಾಗಿದೆ.
ತ್ರಿಪುರಾದಲ್ಲಿ ಟಿಎಂಸಿ ನೋಟಾ ಪಡೆದ ಮತಗಳಿಗಿಂತ ಕಡಿಮೆ ಮತ ಪಡೆದಿದ್ದು, ಮೇಘಾಲಯದಲ್ಲೂ ಪಕ್ಷದ ಶಾಸಕರ ಸಂಖ್ಯೆ 11 ರಿಂದ ಐದಕ್ಕೆ ಇಳಿದಿದೆ.
“ರಾಷ್ಟ್ರೀಯವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡರಿಂದಲೂ ಸಮಾನ ಅಂತರವನ್ನು ಕಾಯ್ದುಕೊಳ್ಳುವುದು ನಮ್ಮ ಕಾರ್ಯತಂತ್ರವಾಗಿದೆ. ಬಿಜೆಪಿ ವಿರುದ್ಧ ಹೋರಾಡಲು ಬಯಸುವ ಮತ್ತು ಕಾಂಗ್ರೆಸ್ ಅನ್ನು ವಿರೋಧಿಸುವ ಇತರ ಪ್ರತಿಪಕ್ಷಗಳು ಜತೆ ಸಂಯುಕ್ತ ವಿರೋಧ ಪಕ್ಷವಾಗಿ ಕೆಲಸ ಮಾಡಲು ನಾವು ಬಯಸುತ್ತೇವೆ. ಈ ಸಂಬಂಧ ನಾವು ಈಗಾಗಲೇ ಬಿಆರ್ಎಸ್ (ಹಿಂದಿನ ಟಿಆರ್ಎಸ್), ಎಎಪಿ ಮತ್ತು ಇತರ ಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಈ ತಂತ್ರವು ಮುಂದಿನ ಸಂಸತ್ ಅಧಿವೇಶನದಲ್ಲಿ ಪ್ರತಿಫಲಿಸುತ್ತದೆ” ಎಂದು ಟಿಎಂಸಿ ಸಂಸದೀಯ ಪಕ್ಷದ ನಾಯಕ ಸುದೀಪ್ ಬಂಡೋಪಾಧ್ಯಾಯ ಪಿಟಿಐಗೆ ತಿಳಿಸಿದ್ದಾರೆ.