ಉಡುಪಿಯಲ್ಲಿ ಎನ್ ಕೌಂಟರ್: ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಮ್ ಗೌಡ ಸಾವು....ಮಹಾ ಚುನಾವಣೆ: ಮತದಾರರು ಬೂತ್‌ಗಳಿಗೆ ತೆರಳಲು QR ಕೋಡ್ ಪರಿಚಯ...ನವೆಂಬರ್ 25ರಿಂದ ಸಂಸತ್ ಚಳಿಗಾಲದ ಅಧಿವೇಶನ: ಭಾನುವಾರ ಸರ್ವಪಕ್ಷ ಸಭೆ...
ಅರೆಬರೆ ಕಾಮಗಾರಿಗೆ ಒಂದು ಕೋಟಿ ಅರವತ್ತು ಲಕ್ಷ ಬಿಡುಗಡೆ
ಪರ್ಕಳ ಇಲ್ಲಿನ ಅರ್ಜುನ ಯುವಕ ಮಂಡಲದಿಂದ ಸರಳೇಬೆಟ್ಟು ರಾಮಮಂದಿರದ ತನಕ.ನೂತನ ಕಾಂಕ್ರೀಟ್ ಪೂರ್ಣ ಗೊಂಡಂತಿದೆ ಈ ರಸ್ತೆ ಅಗಲೀಕರಣದ ವಿಚಾರದಲ್ಲೂ ಒಂದೊಂದು ಬದಿಯಲ್ಲಿ ಒಂದೊಂದು ತರ ಅಗಲೀಕರಣ ಪ್ರಕ್ರಿಯೆನಡೆಸಿ ಕಳೆದ ವರ್ಷ. ಮನಬಂದಂತೆ ಆಗಲಿಕರಣದ ಪ್ರಕ್ರಿಯೆನಡೆದು ಮಳೆಗಾಲದಲ್ಲಿ ರಸ್ತೆಯನ್ನು ಅಗೆದು ಅರ್ಧಂಬರ್ಧ ವಾದ ಕಾಮಗಾರಿನಡೆಸಿದ ತಾಜ ಉದಾರಣೆ ಈಗಲೂಕಂಡು ಬರುತ್ತದೆ.
ಈಗ ಈ ರಸ್ತೆ ಒಂದು ಕೋಟಿ 60 ಲಕ್ಷದ ಹಣ ನಗರೋತ್ತನದ ಅಡಿಯಲ್ಲಿ ಬಿಡುಗಡೆಯಾಗಿದೆ ಈರಸ್ತೆ ಪೂರ್ಣ ಆಗಿದೆ ಎಂದು ನಾಮಫಲಕ ಹಾಕಿರುತ್ತಾರೆ. ಗುತ್ತಿಗೆದಾರರು ಕಾಮಗಾರಿ ನಡೆಸುವ ರಾಘವೇಂದ್ರ ಎಲ್ಲಾ ವಸ್ತುಗಳನ್ನು ತೆರವು ಮಾಡಿದ್ದಾರೆ ಮಳೆಗಾಲ ಆರಂಭಿಸುವ ಮೊದಲು ಇಷ್ಟೊಂದು ಹಣ ಬಿಡುಗಡೆ ಮಾಡಿದರೂ ಚರಂಡಿ ವ್ಯವಸ್ಥೆಗೆ ಗುಂಡಿ ತೋಡಿದ್ದರೂ ಕಾಮಗಾರಿ ಪೂರ್ಣಗೊಳಿಸದೆ ಹಾಗೆಯೇ ಬಿಟ್ಟು ಹೋಗಿದ್ದಾರೆ ಸ್ಥಳದಿಂದ ಯಾವುದೇ ಕಾಮಗಾರಿ ಕೈಗೊಳ್ಳುವ ಲಕ್ಷಣ ಕಾಣುತ್ತಿಲ್ಲ.
ಮಳೆಗಾಲ ಆರಂಭವಾಗುವ ಮೊದಲು ಇಲ್ಲಿ ಉತ್ತಮ ಚರಂಡಿ ವ್ಯವಸ್ಥೆ ಆಗಬೇಕಾಗಿದೆ. ಈ ಹಿಂದೆ ಇಲ್ಲಿ ಆಟೋ ಈ ಚರಂಡಿಗೆ ಬಿದ್ದಿದೆ. ಅಲ್ಲದೆ ದನಕರುಗಳು ದ್ವಿಚಕ್ರ ವಾಹನರು ಆಯತಪ್ಪಿ ಬೀಳುತ್ತಿದ್ದಾರೆ. ಆಗಿದ ಮಣ್ಣು ಮತ್ತು ಅಗೆದ ಹೊಂಡ ಅಲ್ಲೇ ಕಾಣಸಿಗುತ್ತದೆ. ಸಂಬಂಧಪಟ್ಟ ಜನಪ್ರತಿನಿಧಿಗಳು. ನಗರಸಭೆಯ ಇಂಜಿನಿಯರ್ ಗಳು, ಗುತ್ತಿಗೆದಾರರು. ಇತ್ತ ಗಮನಹರಿಸಿ ಬೃಹತ್ ಮೊತ್ತ ಬಿಡುಗಡೆಯಾದರು ಕಾಮಗಾರಿ ಅರೆಬರೆಯಾದ ಕಾಮಗಾರಿ ಏಕೆ ನಡೆಸುತ್ತೀರಿ ಎಂಬಂತೆ ಪ್ರಶ್ನಿಸುವಂತಿದೆ ಈ ಕಾಮಗಾರಿ ಯನ್ನು ಈರಸ್ಥೆಯಪೂರ್ಣ ಪ್ರಮಾಣದ ಕಾಮಗಾರಿ ಮಾಡಬೇಕೇಂದು ಸ್ಥಳೀಯರು ಆಗ್ರಹಿಸಿದ್ದಾರೆ.