ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಉಡುಪಿ: ಬಹುನಿರೀಕ್ಷಿತ ಶಾಪಿಂಗ್ ಹಬ್ಬ ‘ಹರ್ಷೋತ್ಸವ’ ಮಾ.06 ರಿಂದ ಆರಂಭ
ಉಡುಪಿ:ಮಾ,05. ಪ್ರತಿವರ್ಷವೂ ಗ್ರಾಹಕರ ಅಪಾರ ಬೆಂಬಲದಿಂದ ಹರ್ಷೋತ್ಸವವು ಯಶಸ್ವಿಯಾಗಿ ನಡೆಯುತ್ತಿದ್ದು, ವರ್ಷದಿಂದ ವರ್ಷಕ್ಕೆ ಭಾರೀ ಜನಮನ್ನಣೆ ಗಳಿಸುತ್ತಾ, ಎಲ್ಲರ ನೆಚ್ಚಿನ ಶಾಪಿಂಗ್ ಹಬ್ಬವಾಗಿ ಸಂಭ್ರಮದಿಂದ ಆಚರಿಸಲ್ಪಡುತ್ತಿದೆ. ಈ ಬಾರಿಯೂ ಇನ್ನಷ್ಟು ವೈಶಿಷ್ಟ್ಯಯಗಳೊಂದಿಗೆ ಏಳು ದಿನಗಳು ನಡೆಯಲಿರುವ ಹೊಸ ರೂಪದ ಹರ್ಷೋತ್ಸವವು ನಿಮ್ಮ ಶಾಪಿಂಗ್‌ಗೆ ಒಂದು ವಿನೂತನ ಮೆರುಗನ್ನು ನೀಡಲಿದೆ.
ಹರ್ಷದ ವಾರ್ಷಿಕಾಚರಣೆ – “ಹರ್ಷೋತ್ಸವ” ನಾಳೆ ಮಾರ್ಚ್ 06 ರಿಂದ 12ರವರೆಗೆ ಉಡುಪಿಯ ಮೂರು, ಮಂಗಳೂರಿನ ಎರಡು, ಬ್ರಹ್ಮಾವರ, ಸುರತ್ಕಲ್, ಪುತ್ತೂರು, ಕುಂದಾಪುರ ಹಾಗೂ ಶಿವಮೊಗ್ಗ ಮಳಿಗೆಗಳಲ್ಲಿ ನಡೆಯಲಿದೆ. ಜಗತ್ ಪ್ರಸಿದ್ಧ ಬ್ರ್ಯಾಂಡ್‌ಗಳಾದ ಗೋದ್ರೇಜ್, ಒನಿಡಾ, ವೋಲ್ಟಾಸ್, ಐಎಫ್‌ಬಿ, ವರ್ಲ್ಪೂಲ್, ಸೋನಿ, ಪ್ಯಾನಸೋನಿಕ್, ಎಲ್‌ಜಿ, ಸ್ಯಾಮ್‌ಸಂಗ್, ಬೋಶ್, ಹೈಯರ್, ಲೀಭೇರ್, ಬ್ಲೂಸ್ಟಾರ್, ಆ್ಯಪಲ್, ಹೆಚ್‌ಪಿ, ನಿಕಾನ್, ಪ್ರೆಸ್ಟಿಜ್, ಉಷಾ ಮೊದಲಾದ ಕಂಪೆನಿಗಳ ಅತ್ಯಾಧುನಿಕ ಗೃಹೋಪಕರಣಗಳು ವಿಶಾಲ ಶ್ರೇಣಿಯಲ್ಲಿ ಲಭ್ಯವಿದ್ದು, ಅತ್ಯುತ್ತಮ ಬೆಲೆಯಲ್ಲಿ ಲಾಭದಾಯಕ ಕೊಡುಗೆಗಳೊಂದಿಗೆ ದೊರೆಯುತ್ತಿರುವುದು ಹರ್ಷೋತ್ಸವದ ವಿಶೇಷತೆ.
1987 ಮಾರ್ಚ್ 9ರಂದು ಉಡುಪಿಯಲ್ಲಿ ಪ್ರಾರಂಭಗೊಂಡ ಹರ್ಷ ಗೃಹೋಪಕರಣಗಳ ಮಾರಾಟ ಮತ್ತು ಸೇವೆಯಲ್ಲಿ ಸುಪ್ರಸಿದ್ಧ ಮಳಿಗೆಯಾಗಿ, ರಾಜ್ಯಾದ್ಯಂತ 12 ನಗರಗಳ 16 ಮಳಿಗೆಗಳಲ್ಲಿ 15 ಲಕ್ಷಕ್ಕೂ ಅಧಿಕ ಗ್ರಾಹಕರ ಸಂತಸದ ಮನೆಮಾತಾಗಿದೆ. ಗ್ರಾಹಕರ ಸಂತೃಪ್ತಿಯೇ ಹರ್ಷದ ಎಲ್ಲಾ ಚಟುವಟಿಕೆಗಳ ಕೇಂದ್ರ ಬಿಂದುವಾಗಿದ್ದು, ಗ್ರಾಹಕರು ತೋರುತ್ತಿರುವ ಪ್ರೀತಿ, ವಿಶ್ವಾಸ, ಅಭಿಮಾನ, ‘ಹರ್ಷ’ ವನ್ನು ಪೋಷಿಸುತ್ತಿರುವ ಪರಿ ನಿಜಕ್ಕೂ ಅದ್ವಿತೀಯ. ಅಷ್ಟೇ ಅಲ್ಲ, ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲದಿಂದಾಗಿ, ಇಂದು ಸುಖೀ ಪರಿವಾರಗಳನ್ನು ನಿರ್ಮಿಸುವ ಹರ್ಷದ ಕನಸು ಸಾಕಾರಗೊಳ್ಳುವಂತೆ ಮಾಡಿದೆ.
ಡಿಜಿಟಲ್ ಹಾಗೂ ಗೃಹೋಪಕರಣಗಳ ಅತಿದೊಡ್ಡ ಮಳಿಗೆ
ಕರಾವಳಿ ಜಿಲ್ಲೆಯಲ್ಲಿ ಶಾಪಿಂಗ್ ಸಂಸ್ಕೃತಿಯನ್ನು ಹುಟ್ಟು ಹಾಕಿದ ಕೀರ್ತಿ ಹರ್ಷಕ್ಕೆ ಸಲ್ಲುತ್ತದೆ. ಮೂರು ದಶಕಗಳಿಂದ ಉಡುಪಿ, ಮಂಗಳೂರುಗಳಲ್ಲಿ ಗ್ರಾಹಕರ ವಿಶ್ವಾಸವನ್ನು ಗಳಿಸಿದ “ಹರ್ಷ” ನಂತರ ಶಿವಮೊಗ್ಗ, ಹುಬ್ಬಳ್ಳಿ, ಪುತ್ತೂರು, ಕುಂದಾಪುರ, ಬೆಳಗಾವಿ, ಧಾರವಾಡ, ಬೆಂಗಳೂರು ಬ್ರಹ್ಮಾವರ, ಸುರತ್ಕಲ್ ಹಾಗೂ ಕಲಬುರಗಿ ನಗರಗಳಲ್ಲಿ ಶಾಪಿಂಗ್‌ನ ವಿನೂತನ ಅನುಭವವನ್ನು ನೀಡಲೆಂದೇ 25,000 ಚದರಡಿಯ, 3 ಅಂತಸ್ತುಗಳ, ವಿಶಾಲ ಶ್ರೇಣಿಯ ವಸ್ತು-ವೈವಿಧ್ಯಗಳ ವಿಶಾಲ ಸಂಗ್ರಹದೊಂದಿಗೆ ಬೃಹತ್ ಮಳಿಗೆಗಳನ್ನು ಹೊಂದಿದೆ.
ಉಡುಪಿಯಲ್ಲಿ ವಿಶೇಷವಾಗಿ, ನವಪೀಳಿಗೆಯ ಆಕಾಂಕ್ಷೆಗಳಿಗನುಗುಣವಾಗಿ ನೂತನ ಜೀವಶೈಲಿಗೆ ಪೂರಕವಾಗುವಂತಹ ಎಲ್ಲಾ ಬಗೆಯ ನವ-ನವೀನ ಮಾದರಿಯ ಗುಣಮಟ್ಟದ ಪೀಠೋಪಕರಣಗಳು, ಫಿಟ್ನೆಸ್ ಹಾಗೂ ಜಿಮ್ ಉಪಕರಣಗಳು ಸೇರಿದಂತೆ ಡಿಜಿಟಲ್ ಹಾಗೂ ಗೃಹೋಪಕರಣಗಳನ್ನೊಳಗೊಂಡ, 40 ಸಾವಿರ ಚದರದಡಿ ವಿಸ್ತೀರ್ಣ ಹಾಗೂ 4 ಅಂತಸ್ತುಗಳ, ಕಣ್ಮನ ಸೆಳೆಯುವ ಅತಿದೊಡ್ಡ ಮಳಿಗೆಯು ನಗರದ ಹೃದಯ ಭಾಗದಲ್ಲಿನ ಸಿಟಿ ಬಸ್ ನಿಲ್ದಾಣದ ಸಮೀಪ ರೂಪುಗೊಂಡಿದೆ. ಅಂತರಾಷ್ಟ್ರೀಯ ಮಟ್ಟದ ಅತ್ಯಾಧುನಿಕ ಶಾಪಿಂಗ್‌ನ ಸುಂದರ ಅನುಭವ ನೀಡಲಿರುವ ಉಡುಪಿಯ 3 ನೇ ಮಳಿಗೆಯು ಅದಾಗಲೇ ಗೃಹೋಪಕರಣಗಳ ಖರೀದಿಯಲ್ಲಿ ಗ್ರಾಹಕರ ನೆಚ್ಚಿನ ಮಳಿಗೆಯಾಗಿದೆ.
ಗ್ರಾಹಕರನ್ನು ಸ್ವಾಗತಿಸಲು ಪ್ರೀತಿಯ ಕರೆಯೋಲೆ
ಕಳೆದ 35 ವರ್ಷಗಳಿಂದ ಪ್ರತಿ ವರ್ಷ ಹರ್ಷೋತ್ಸವದ ಆಮಂತ್ರಣ ಪತ್ರಿಕೆಯನ್ನು ಕಳುಹಿಸಿ, ಹುಟ್ಟುಹಬ್ಬದ ಅದ್ದೂರಿಯ ಆಚರಣೆಗೆ ತನ್ನೆಲ್ಲಾ ಗ್ರಾಹಕರನ್ನು ಆಹ್ವಾನಿಸುತ್ತಿರುವುದು ಹಾಗೂ ಎಲ್ಲರೂ ಹರ್ಷೋತ್ಸವದಲ್ಲಿ ತುಂಬು ಸಂತಸದಿಂದ ಪಾಲ್ಗೊಂಡು ಸಂಭ್ರಮಿಸುತ್ತಿರುವುದು, ಹರ್ಷದ ಹಿರಿಮೆ. ಈ ಬಾರಿಯೂ ಮಾರ್ಚ್ 06 ರಿಂದ 12ರವರೆಗೆ ಉಡುಪಿಯ ಮೂರು, ಮಂಗಳೂರಿನ ಎರಡು, ಬ್ರಹ್ಮಾವರ, ಸುರತ್ಕಲ್, ಪುತ್ತೂರು, ಕುಂದಾಪುರ ಹಾಗೂ ಶಿವಮೊಗ್ಗ ಮಳಿಗೆಗಳಲ್ಲಿ ನಡೆಯುವ ಹರ್ಷೋತ್ಸವದಲ್ಲಿ ಭಾಗವಹಿಸುವಂತೆ ಸುಮಾರು 4.8 ಲಕ್ಷ ಗ್ರಾಹಕರಿಗೆ ಕರೆಯೋಲೆಯನ್ನು ಕಳುಹಿಸಲಾಗಿದೆ.
ತ್ವರಿತ ಲಕ್ಕಿ ಡ್ರಾ ಕೊಡುಗೆಗಳು
ಶ್ರೇಷ್ಟಮಟ್ಟದ ಅಂತರಾಷ್ಟ್ರೀಯ ಖ್ಯಾತಿಯ ಬ್ರ್ಯಾಂಡ್‌ನ ಉತ್ಪನ್ನಗಳನ್ನು ರಿಯಾಯಿತಿ ದರಗಳಲ್ಲಿ ಗ್ರಾಹಕರಿಗೆ ನೀಡುವುದು ಹರ್ಷದ ವಿಶೇಷತೆಯಾಗಿದೆ. ಹರ್ಷೋತ್ಸವದ ಆಕರ್ಷಕ ವಿನಿಮಯ ಕೊಡುಗೆಗಳು, ವಿಶಿಷ್ಟ ಕಾಂಬಿ ಕೊಡುಗೆಗಳು, ವಿಶೇಷ ರಿಯಾಯಿತಿಗಳು, ಖಚಿತ ಉಡುಗೊರೆಗಳು ಗ್ರಾಹಕರಿಗೆ ಹೆಚ್ಚಿನ ಸಂತಸವನ್ನು ನೀಡಲಿದೆ. ಜೊತೆಗೆ ಹರ್ಷೋತ್ಸವದ ಕೇಂದ್ರ ಬಿಂದು ಲಕ್ಕಿ ಡ್ರಾ, ಖರೀದಿಯ ನಂತರ ಸ್ಥಳದಲ್ಲೇ ನಡೆಯುವ ಲಕ್ಕಿ ಡ್ರಾ ನಲ್ಲಿ ಗ್ರಾಹಕರು ಆ ಕೂಡಲೇ ಎಲ್‌ಇಡಿ ಟಿವಿ, ಏಸಿ, ಸ್ಮಾರ್ಟ್ಫೋನ್, ಸ್ಮಾರ್ಟ್ವಾಚ್, ಮೈಕ್ರೋವೇವ್ ಅವನ್, ಮಿಕ್ಸರ್, ಗ್ರೆಂಡರ್ ಸಹಿತ ಹಲವಾರು ಬಹುಮಾನಗಳನ್ನು ಗೆಲ್ಲುವ ಅವಕಾಶ ಸಿಗಲಿದೆ.
ಇಎಮ್‌ಐ ಮೂಲಕ ಖರೀದಿಸಿ, ಎಲ್‌ಜಿ ಎಲ್‌ಇಡಿ ಟಿವಿ, ರೆಫ್ರಿಜರೇಟರ್, ವಾಶಿಂಗ್ ಮಶಿನ್, ಏರ್ ಕಂಡೀಷನರ್, ಮೈಕ್ರೋವೇವ್ ಓವನ್, ಟೋನ್ ಇಯರ್ ಬಡ್ಸ್ ಹಾಗೂ ಸೌಂಡ್ ಬಾರ್ ಗೆಲ್ಲಿರಿ
ನಿಮ್ಮ ನೆಚ್ಚಿನ ಗೃಹೋಪಕರಣಗಳ ಖರೀದಿ ಇದೀಗ ಇನ್ನಷ್ಟು ಸುಲಭ, ಬಜಾಜ್ ಫೈನಾನ್ಸ್, ಹೆಚ್‌ಡಿಬಿ, ಹೆಚ್‌ಡಿಎಫ್‌ಸಿ, ಕೋಟಕ್ ಮಹೀಂದ್ರಾ ಬ್ಯಾಂಕ್ ಅಥವಾ ಐಡಿಎಫ್‌ಸಿ ಮೂಲಕ, ನಿಮ್ಮ ಕೈಗೆಟುಕುವ ಇಎಮ್‌ಐ ಯೋಜನೆಯಡಿ ನಿಮಗಿಷ್ಟವಾದ ಗೃಹೋಪಕರಣಗಳನ್ನು ಕೂಡಲೇ ಖರೀದಿಸಿ, ಬಡ್ಡಿ ರಹಿತ ಸುಲಭ ಕಂತುಗಳಲ್ಲಿ ನಂತರ ಪಾವತಿಸಿ. ಇದರೊಂದಿಗೆ ವಿಶೇಷವಾಗಿ ಸುಲಭ ಕಂತು ಯೋಜನೆಯಡಿ ಖರೀದಿಸುವ ಗ್ರಾಹಕರಿಗೆ ಲಕ್ಕಿ ಡ್ರಾ ಮೂಲಕ ಎಲ್‌ಜಿ ಸಂಸ್ಥೆಯ 65” ಎಲ್‌ಇಡಿ ಟಿವಿ, ರೆಫ್ರಿಜರೇಟರ್, ವಾಶಿಂಗ್ ಮಶಿನ್, ಏರ್ ಕಂಡೀಷನರ್, ಮೈಕ್ರೋವೇವ್ ಓವನ್ ಟೋನ್ ಇಯರ್ ಬಡ್ಸ್ ಹಾಗೂ ಸೌಂಡ್ ಬಾರ್ ಗೆಲ್ಲುವ ಅವಕಾಶ ಪಡೆಯಬಹುದು. ವಿವಿಧ ಬ್ಯಾಂಕ್‌ಗಳ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮುಖೇನ ಖರೀದಿಯೊಂದಿಗೆ 15% ವರೆಗೆ ಕ್ಯಾಶ್‌ಬ್ಯಾಕ್ ದೊರೆಯಲಿದೆ. ಇದರೊಂದಿಗೆ ಇನ್ನೂ ಹಲವಾರು ರೀತಿಯ ಆಕರ್ಷಕ ಖರೀದಿ ಯೋಜನೆಗಳು ಮತ್ತು ಸೌಲಭ್ಯಗಳನ್ನು ಗ್ರಾಹಕರು ಪಡೆಯಬಹುದಾಗಿದೆ.
ಕೊಡುಗೆಗಳ ಸಂಭ್ರಮ
ಗ್ರಾಹಕರು ಖರೀದಿಸುವ ಎಲ್ಲಾ ವಸ್ತು-ವೈವಿಧ್ಯಗಳ ಜೊತೆಗೆ ಖಚಿತ ಉಡುಗೊರೆಗಳು ದೊರೆಯಲಿದೆ, ಇಷ್ಟೇ ಅಲ್ಲದೆ, ವಿನಿಮಯ ಕೊಡುಗೆಗಳು, ಕಾಂಬಿ ಕೊಡುಗೆಗಳು ಜೊತೆಗೆ ಇನ್ನಿತರ ಆಕರ್ಷಣೀಯ ಖರೀದಿ ಯೋಜನೆಗಳು ಗ್ರಾಹಕರ ಶಾಪಿಂಗ್‌ಗೆ ಮತ್ತಷ್ಟು ರಂಗೇರಿಸಲಿದೆ. ಈ ರೀತಿಯಾಗಿ ಗ್ರಾಹಕರು ತಾವು ಖರೀದಿಸುವ ಯಾವುದೇ ಗೃಹೋಪಕರಣಗಳ ಮೇಲೆ ಒಂದಲ್ಲ ಒಂದು ರೀತಿಯ ಆಕರ್ಷಕ ಕೊಡುಗೆಗಳೊಂದಿಗೆ ಮನೆಗೊಯ್ಯಬಹುದು.
ಆಕರ್ಷಕ ರಿಯಾಯಿತಿ ದರ
ನವನವೀನ ಮಾದರಿಯ ಡಿಜಿಟಲ್ ತಂತ್ರಜ್ಞಾನದ ಎಲ್‌ಇಡಿ ಟಿವಿಗಳು, ಫ್ರಾಸ್ಟ್ ಪ್ರೀ ರೆಫ್ರಿಜರೇಟರ್‌ಗಳು ಫುಲ್ಲೀ ಅಟೊಮೆಟಿಕ್ ವಾಷಿಂಗ್ ಮೆಶೀನ್‌ಗಳು, ಕೈಗೆಟಕುವ ದರದಲ್ಲಿ ಉನ್ನತ ತಂತ್ರಜ್ಞಾನದ ವಿದ್ಯುತ್ ಉಳಿಸುವ ಸ್ಟಾರ್ ರೇಟೆಡ್ ಸ್ಪಿಲಟ್ ಏರ್‌ಕಂಡೀಶನರ್‌ಗಳು, ಮೈಕ್ರೋವೇವ್ ಅವನ್‌ಗಳು, ಜಗತ್ ಪ್ರಸಿದ್ಧ ಬ್ರ‍್ಯಾಂಡ್‌ಗಳ ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಸ್ಮಾರ್ಟ್ ಫೋನ್‌ಗಳು, ನವ-ನವೀನ ಮಾದರಿಯ ಮಿಕ್ಸರ್, ಗ್ರೆಂಡರ್, ಫ್ಯಾನ್, ಕೂಲರ್‌ಗಳು, ಅತ್ಯಾಧುನಿಕ ಪರ್ಸನಲ್, ಹೆಲ್ತ್ಕೇರ್ ಹಾಗೂ ಬ್ಯೂಟಿ ಕೇರ್ ಉತ್ಪನ್ನಗಳು, ಜೊತೆಗೆ ಇನ್ನಿತರ ಗೃಹೋಪಯೋಗಿ ವಸ್ತುಗಳು ಹತ್ತು ಹಲವಾರು ಕೊಡುಗೆಗಳೊಂದಿಗೆ ಗ್ರಾಹಕರ ಮನಸೆಳೆಯಲಿವೆ. ವಿಶ್ವ ವಿಖ್ಯಾತ ಬ್ರ್ಯಾಂಡ್‌ಗಳ ಉತ್ಕೃಷ್ಟ ವಸ್ತು ವೈವಿಧ್ಯಗಳ ವಿಶಾಲ ಶ್ರೇಣಿಯೇ ಹರ್ಷೋತ್ಸವದಲ್ಲಿದ್ದು, ಗ್ರಾಹಕರಿಗೆ ಒಂದೇ ಸೂರಿನಡಿ ಆಯ್ಕೆ ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ.