Log In
BREAKING NEWS >
ಉಡುಪಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಪರಮೇಶ್ವರ್ ಅನಂತ್ ಹೆಗ್ಡೆ ನೇಮಕ...

ಹುಬ್ಬಳ್ಳಿ: ಉದ್ಯಮಿ ಮನೆ ಮೇಲೆ ಸಿಸಿಬಿ ದಾಳಿ, ರೂ.3 ಕೋಟಿ ನಗದು ವಶಕ್ಕೆ

ಹುಬ್ಬಳ್ಳಿ: ಹುಬ್ಬಳ್ಳಿಯ ಭವಾನಿನಗರದಲ್ಲಿರುವ ಉದ್ಯಮಿಯೊಬ್ಬರ ನಿವಾಸದಲ್ಲಿ ಶನಿವಾರ ನಗರ ಅಪರಾಧ ವಿಭಾಗ (ಸಿಸಿಬಿ)ದಳದ ಪೊಲೀಸರು ದಾಳಿ ನಡೆಸಿದ್ದು,  ಲೆಕ್ಕಕ್ಕೆ ಸಿಗದ 3 ಕೋಟಿ ರೂ.ನಗದನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದಲ್ಲಿ ತೆರಿಗೆ ವಂಚನೆ ನಡೆದಿದ್ದೇ ಆದರೆ, ತನಿಖೆ ನಡೆಸಲು ತನಿಖಾಧಿಕಾರಿ ಎಸ್.ಕೆ.ಪಟ್ಟಣಕುಡಿ ಅವರಿಗೆ ಆದಾಯ ತೆರಿಗೆ ಇಲಾಖೆ ನೆರವು ನೀಡಲಿದೆ.

ಎಸಿಪಿ ನಾರಾಯಣ ಬರ್ಮಾನಿ ನೇತೃತ್ವದ ಸಿಸಿಬಿ ದಳವು, ಉದ್ಯಮಿ ಮನೆಲ ಮೇಲೆ ದಾಳಿ ನಡೆಸಿ 500 ರೂಪಾಯಿ ಮುಖಬೆಲೆಯ ಲೆಕ್ಕವಿಲ್ಲದ ನಗದನ್ನು ವಶಪಡಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.

No Comments

Leave A Comment