ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವೆ೦ಬರ್ 13ರ೦ದು ವಿಶ್ವರೂಪದರ್ಶನ ಕಾರ್ಯಕ್ರಮವು ಬೆಳಿಗ್ಗೆ 5ಗ೦ಟೆಗೆ ಜರಗಿತು.ನವೆ೦ಬರ್ 18ಹಾಗೂ 19ರ೦ದು ಲಕ್ಷ ದೀಪೋತ್ಸವವು ಜರಗಲಿದೆ.
ನಿರಂತರವಾಗಿ ಗ್ಯಾಸ್ ಬೆಲೆ ಏರಿಕೆ ಜನರ ಜೀವನಕ್ಕೆ ಬಿಜೆಪಿ ಡಬಲ್ ಇಂಜಿನ್ ಸರ್ಕಾರ ದೊಡ್ಡ ಭಾರ ವಾಗಿದೆ” – ಕೆ ಕೃಷ್ಣ ಮೂರ್ತಿ ಆಚಾರ್ಯ
ಉಡುಪಿ: ನಿರಂತರವಾಗಿ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಏರಿಸುವುದರ ಮೂಲಕ ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಜನರಿಗೆ ಭಾರವಗಿದೆ.
ಮಹಿಳೆಯರ ಕಣ್ಣಲ್ಲಿ ನೀರು ತರಿಸುವಂತಹ ಪಾಪದ ಕೆಲಸವನ್ನು ಗ್ಯಾಸ್ ಬೆಲೆ ಏರಿಕೆ ಮಾಡುವ ಮೂಲಕ ಬಿಜೆಪಿ ಡಬಲ್ ಇಂಜಿನ್ ಸರಕಾರ ಬಾರವಗಿದೆ ಎಂದು ಉಡುಪಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರು ಶ್ರೀ ಕೆ ಕೃಷ್ಣ ಮೂರ್ತಿಆಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನರೇಂದ್ರ ಮೋದಿಯವರ ಡಬಲ್ ಇಂಜಿನ್ ಅಚ್ಚೇ ದಿನದ ಪರಿಣಾಮ ಗೃಹಬಳಕೆಯ ಸಿಲಿಂಡರ್ ಬೆಲೆ ಸಾವಿರದ ಗಡಿ ದಾಟಿ ಹೋಗಿದೆ. ಈಗ ಮತ್ತೊಮ್ಮೆ 50 ರೂ ಹೆಚ್ಚಳ ಮಾಡಿದರೆ ಕೇಂದ್ರದ ಉಜ್ವಲಾ ಯೋಜನೆಯ ಮೂಲಕ ಗ್ಯಾಸ್ ಸಂಪರ್ಕ ಪಡೆದಿದ್ದ ಬಡವರು ಅದರಲ್ಲೂ ಕೂಲಿ ಕಾರ್ಮಿಕರು, ಬಡ ಹಾಗೂ ಮಾಧ್ಯಮ ವರ್ಗದ ಮಹಿಳೆಯರು ಗ್ಯಾಸ್ ಬೆಲೆಯೇರಿಕೆಯ ಶಾಕ್ ಗೆ ತತ್ತರಿಸಿ ಹೋಗಿದ್ದಾರೆ. ಸೌದೆ ಬಿಟ್ಟು ಸಿಲಿಂಡರ್ ಮೊರೆ ಹೋಗಿದ್ದ ಮಹಿಳೆಯರಿಗೆ ದರ ಏರಿಕೆಯಿಂದ ಹಳೆ ಗಂಡನ ಪಾದವೇ ಗತಿ ಎಂಬಂತೆ ಸೌದೆಯೇ ಆಸರೆಯಾಗುತ್ತಿದೆ.
ಯು.ಪಿ.ಎ. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಬೆಲೆ ಏರಿಕೆ ಬಗ್ಗೆ ನಿರಂತರವಾಗಿ ರಸ್ತೆ ಮೆಲೆ ಗ್ಯಾಸ್ ಹಿಡಿದು ಪ್ರತಿಭಟನೆ ಮಾಡುತ್ತಿದ ಬಿಜೆಪಿ ನಾಯಕರು ಹಾಗೂ ಸಂಸದೆ ಶೋಭ ಅಕ್ಕ ಇವತ್ತು ಎಲ್ಲಿ ಹೋಗಿದ್ದಾರೆ ಇವತ್ತು ಯಾಕೆ ದಿನ ಬಳಕೆ ವಾಸ್ತು ಗಳ ಬೆಲೆ ಏರಿಕೆ ಬಗ್ಗೆ ತುಟಿಕ್ ಪಿಟಿಕ್ ಮಾತಾಡುತ್ತಿಲ್ಲ ಬಿಜೆಪಿ ಅವರು ? ಯಾಕೆ ರಸ್ತೆಗೆ ಬಂದು ಇವತ್ತು ಪ್ರತಿಭಟನೆ ನಡೆಸುವುದಿಲ್ಲ ?
ಇವತ್ತು ನಿಮ್ಮ ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಬೆಲೆ ಏರಿಕೆ ಮಾಡಿದಾಗ ನಿಮಗೆ ಜನರ ಬಗ್ಗೆ ಕಾಲಾಜಿ ಇಲ್ಲವೇ ರಾಜ್ಯದಲ್ಲಿ ಕೇಂದ್ರದಲ್ಲಿ ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಬಂದರೆ ರಾಜ್ಯದಲ್ಲಿ ಸ್ವರ್ಗ ಸೃಷ್ಟಿ ಮಾಡುತ್ತೇವೆ ಅಂತ ಹೇಳಿಇವತ್ತು ದಿನ ಬಳಕೆ ವಾಸ್ತು ಗಳ ಬೆಲೆ ಏರಿಕೆ ಮಾಡುವ ಮೂಲಕ ಜನರಿಗೆ ನೀವು ಭಾರವಾಗಿದ್ದೀರಿ
ನಿಮಗೆ ಜನರ ಬಗ್ಗೆ ಕಿಂಚಿತ್ತೂ ಕಾಳಜಿ ಇದರೆ ದಿನ ಬಳಕೆ ವಾಸ್ತುಗಳ ಬೆಲೆ ಏರಿಕೆಯ ಭಾರವನ್ನು ತತ್ ಕ್ಷಣ ಕಡಿಮೆ ಮಾಡಿ ಇಲ್ಲದೇ ಹೋದರೆ ಯಾವ ಮುಖದಲ್ಲಿ ಬಿಜೆಪಿ ಅವರು ಮುಂದಿನ ದಿನಗಳಲ್ಲಿ ಪ್ರತಿಭಟಿಸುತ್ತರೇ ಎಂದು ಉಡುಪಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರು ಸಮಾಜ ಸೇವಕರು ಶ್ರೀ ಕೆ ಕೃಷ್ಣ ಮೂರ್ತಿ ಆಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ