ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಬಡವರ್ಗದ ಜನರ ಮೇಲೆ ಬಿಜೆಪಿ ಗದಾಪ್ರಹಾರ-ರಾ.ಗಾ.ಪಂ.ರಾಜ್ ಸಂಘಟನೆ ಅಧ್ಯಕ್ಷಸುರೇಶ್ ಶೆಟ್ಟಿ ಬನ್ನಂಜೆ
ಉಡುಪಿ:ಅಡುಗೆ ಅನಿಲ ಬೆಲೆ ಏರಿಕೆ ರಾಜ್ಯದ ಜನತೆಗೆ ಡಬಲ್ ಇಂಜಿನ್ ಸರ್ಕಾರದ ನೂತನ ಪ್ಯಾಕೇಜ್ ಘೋಷಣೆ ಸುರೇಶ್ ಶೆಟ್ಟಿ ಬನ್ನಂಜೆ ಇದೀಗಲೇ ಮೋದಿ ಸರಕಾರದ ಬೆಲೆ ಏರಿಕೆ ನೀತಿಯಿಂದ ಜನಸಾಮಾನ್ಯರು ಕಂಗೆಟ್ಟು ಹೋಗಿದ್ದಾರೆ ಆದರೂ ನಮ್ಮ ಜನತೆಯ ಬಗ್ಗೆ ಕಾಳಜಿಇಲ್ಲದ ಈ ಬಿಜೆಪಿ ಸರಕಾರ ಜನಸಾಮಾನ್ಯ ಬಳಸುವ ದಿನಬಳಕೆ ವಸ್ತುವಿನ ಮೇಲೆ ನಿರಂತರ ಬೆಲೆ ಏರಿಕೆ ಮಾಡಿ ಬಡವರನ್ನು ಕಾರ್ಮಿಕರನ್ನು ಮಧ್ಯಮ ವರ್ಗದವರನ್ನು ರೈತರನ್ನು ಬದುಕಲು ಬಿಡದೆ ಗದ ಪ್ರಹಾರ ಮಾಡುತ್ತಿದೆ ಇದೀಗ ಅಡುಗೆ ಅನಿಲದ ಬೆಲೆ ರೂ.1200/ ರ ತ ಸಾಗಿ ಗಿನ್ನಿಸ್ ದಾಖಲೆ ಬರೆಯಲು ಮುಂದಾಗಿದೆ ಈ ಬೆಲೆ ಏರಿಕೆ ನೀತಿಯೇ ಮೋದಿ ಹಾಗೂ ಬೊಮ್ಮಾಯಿ ಅವರ ಡಬ್ಬ ಇಂಜಿನ್ ಸರಕಾರದ ನೂತನ ಚುನಾವಣಾ ಪ್ಯಾಕೇಜ್ ಈ ಬೆಲೆ ಏರಿಕೆ ಯಾರಿಗಾಗಿ ಅದಾನಿಗಾಗಿಯೋ ಅಂಬಾನಿ
ಗಾಗಿ ಯೋ ಬೆಲೆ ಏರಿಕೆ ಮಾಡದೆ ದೇಶ ಹಾಗೂ ರಾಜ್ಯವನ್ನು ಆಳಲು ನಿಮಗೆ ಸಾಧ್ಯವಾಗದಿದ್ದರೆ ಅಧಿಕಾರ ಬಿಟ್ಟು ಕೆಳಗಿಳಿಯಿರಿ ಎಂದು ಉಡುಪಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಅಧ್ಯಕ್ಷ ಸುರೇಶ್ ಶೆಟ್ಟಿ ಬನ್ನಂಜೆ ಬೆಲೆ ಏರಿಕೆಯ ಬಗ್ಗೆ ಪ್ರತಿಕ್ರಿಯಸಿದ್ದಾರೆ