ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವೆ೦ಬರ್ 13ರ೦ದು ವಿಶ್ವರೂಪದರ್ಶನ ಕಾರ್ಯಕ್ರಮವು ಬೆಳಿಗ್ಗೆ 5ಗ೦ಟೆಗೆ ಜರಗಿತು.ನವೆ೦ಬರ್ 18ಹಾಗೂ 19ರ೦ದು ಲಕ್ಷ ದೀಪೋತ್ಸವವು ಜರಗಲಿದೆ.
ಚಿಕ್ಕಮಗಳೂರು: ಮುಳ್ಳು ಹಂದಿ ಬೇಟೆಗೆ ತೆರಳಿದ್ದ ಇಬ್ಬರು ಕೂಲಿಕಾರ್ಮಿಕರ ಸಾವು
ಚಿಕ್ಕಮಗಳೂರು: ಮುಳ್ಳು ಹಂದಿ ಬೇಟೆಗೆ ತೆರಳಿದ್ದ ಇಬ್ಬರು ಕೂಲಿಕಾರ್ಮಿಕರು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಿನಲ್ಲಿ ವರದಿಯಾಗಿದೆ.
ಚಿಕ್ಕಮಗಳೂರಿನ ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮುಳ್ಳು ಹಂದಿ ಇದ್ದ ಸುರಂಗಕ್ಕೆ ಶಿಕಾರಿ ಮಾಡಲು ನುಗ್ಗಿ ಇಬ್ಬರು ಕೂಲಿಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಮಾಳಿಗನಾಡು ಸಮೀಪದ ಆನೆಗುಂಡಿ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರಾದ ತಮಿಳುನಾಡು ಮೂಲದ ವಿಜಯ್ (28 ವರ್ಷ), ಶರತ್( 26 ವರ್ಷ) ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ.
ಚಿಕ್ಕಮಗಳೂರಿಗೆ ಕಾಳು ಮೆಣಸು ಕುಯ್ಯಲು ಬಂದಿದ್ದ ತಮಿಳುನಾಡಿನ ಕಾರ್ಮಿಕರು ಮುಳ್ಳು ಹಂದಿ ಶಿಕಾರಿ ಮಾಡಲು ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿಯ ಕಾಳಿಕಟ್ಟೆ ಗುಡ್ಡದ ಗವಿಯಲ್ಲಿರುವ ಗುಡ್ಡಕ್ಕೆ ತೆರಳಿದ್ದರು. ಸುರಂಗದ ಪ್ರವೇಶ ದ್ವಾರಕ್ಕೆ ಹೊಗೆ ಹಾಕಿ ಇಬ್ಬರು ಒಳಗೆ ಹೋದಾಗ ಹೊಗೆಯಿಂದಾಗಿ ಉಸಿರಾಡಲು ಸಾಧ್ಯವಾಗದೆ ಗುಹೆಯೊಳಗೆ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.
ಸುದ್ದಿ ತಿಳಿದು ಬಾಳೂರು ಸಬ್ ಇನ್ಸ್‍ಪೆಕ್ಟರ್ ಪವನ್ ಕುಮಾರ್ ಅವರು ಸ್ಥಳೀಯರ ನೆರವಿನಿಂದ ಗುಹೆಯೊಳಗೆ ಹೋಗಿ ಶವಗಳನ್ನು ಹೊರತೆಗೆದಿದ್ದಾರೆ. ಮೂಡಿಗೆರೆ ತಾಲ್ಲೂಕಿನ ಬಾಳೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮ ಕೈಗೊಳ್ಳಲಾಗಿದೆ.