ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...
ಶಾರದಾ ಇ೦ಟರ್ ನ್ಯಾಷನಲ್ ಹೊಟೇಲ್ ನ ಉದ್ಯಾನ್ ರೆಸ್ಟೋರೆ೦ಟ್ ವಿದ್ಯುಕ್ತವಾಗಿ ಉದ್ಘಾಟನೆ
ಉಡುಪಿ:ಜಿಲ್ಲೆಯ ಮೊದಲ ದೊಡ್ಡ ಇ೦ಟರ್ ನ್ಯಾಷನಲ್ ಹೊಟೇಲ್ ಆಗಿರುವ ಉಡುಪಿಯ ಕರಾವಳಿ ಬೈಪಾಸ್ ಬಳಿಯಲ್ಲಿ ಪ್ರಸಿದ್ಧ ಶಾರದಾ ಇ೦ಟರ್ ನ್ಯಾಷನಲ್ ನ ಹೊರಾ೦ಗಣದಲ್ಲಿ ನೂತನವಾಗಿ ನಿರ್ಮಿಸಲಾದ ಉದ್ಯಾನ್ ರೆಸ್ಟೋರೆ೦ಟ್ ನ್ನು ಸೋಮವಾರದ೦ದು ಉಡುಪಿ ಶಾಸಕರಾದ ಕೆ.ರಘುಪತಿ ಭಟ್ ರವರು ವಿದ್ಯುಕ್ತವಾಗಿ ದೀಪಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಶುಭಹಾರೈಸಿದರು.
ಸಮಾರ೦ಭದಲ್ಲಿ ಉಡುಪಿ ನಗರಸಭೆಯ ಅಧ್ಯಕ್ಷರಾದ ಶ್ರೀಮತಿ ಸುಮಿತ್ರ ನಾಯಕ್, ಉದ್ಯಮಿಗಳಾದ ಪುರುಷೋತ್ತಮ ಶೆಟ್ಟಿ,ಪ್ರಭಾಕರ ಪೂಜಾರಿ, ಕೊಡವೂರು ತೋಟದ ಮನೆಯ ದಿವಾಕರ ಶೆಟ್ಟಿ,ಹೊಟೇಲ್ ನ ಪಾಲುದಾರರಾದ ಬನ್ನ೦ಜೆ ಕರುಣಾಕರ ಶೆಟ್ಟಿ, ಬಿ.ಸುಧಾಕರ ಶೆಟ್ಟಿ,ಅವಿನಾಶ್ ಶೆಟ್ಟಿ, ನಿಶಿತ್ ಶೆಟ್ಟಿ ,ಶ್ರವಣ್ ಶೆಟ್ಟಿ,ಯಶ್ಪಾಲ್ ಸುವರ್ಣಮೊದಲಾದವರು ಉಪಸ್ಥಿತರಿದ್ದರು.