ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಪಣಿಯಾಡಿ:ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತಪದ್ಮನಾಭ ದೇವಸ್ಥಾನದ ಪ್ರಪ್ರಥಮ ರಥೋತ್ಸವಕ್ಕೆ ಅದ್ದೂರಿಯ ಹೊರೆಕಾಣಿಕೆ ಸಲ್ಲಿಕೆ(44pic)

ಉಡುಪಿ:ಇತಿಹಾಸ ಪ್ರಸಿದ್ಧ ಶ್ರೀ ಅನಂತಾಸನ ಶ್ರೀ ಲಕ್ಷ್ಮೀ ಅನಂತಪದ್ಮನಾಭ ದೇವಸ್ಥಾನ ಪಣಿಯಾಡಿಯ ದೇವರ ಸನ್ನಧಿಯಲ್ಲಿ ಫೆ.27ರ ಸೋಮವಾರದ೦ದು ನಡೆಯಲಿರುವ ಪ್ರಪ್ರಥಮ ರಥೋತ್ಸವಕ್ಕೆ ಶನಿವಾರದ೦ದು ಉಡುಪಿಯ ಎ೦ಜಿಎ೦ ಕಾಲೇಜಿನ ಎದುರುಗಡೆಯಲ್ಲಿರುವ ರಿಕ್ಷಾ ನಿಲ್ದಾಣದಿ೦ದ ಹೊರೆಕಾಣಿಕೆಯನ್ನು ಅದ್ದೂರಿಯ ಮೆರವಣಿಗೆಯಲ್ಲಿ ಶ್ರೀ ಅನಂತಾಸನ ಶ್ರೀ ಲಕ್ಷ್ಮೀ ಅನಂತಪದ್ಮನಾಭ ದೇವರ ಸನ್ನಿದಾನಕ್ಕೆ ತಲುಪಿಸಲಾಯಿತು.

ನ೦ತರ ವೇದಮೂರ್ತಿ ಹಯವದನ ತಂತ್ರಿ ನೇತ್ರತ್ವದಲ್ಲಿ ಶ್ರೀದೇವರಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.

ಹೊರೆಕಾಣಿಕೆಯ ಮೆರವಣಿಗೆಯಲ್ಲಿ ಬಿರುವಾವಳಿ,ನಾಸಿಕ್ ಬ್ಯಾ೦ಡ್, ಚೆ೦ಡೆ, ಕುಣಿತ ಭಜನೆ, ಮಹಿಳಾ ಭಜನಾ ತ೦ಡ, ವಾದ್ಯ,ಕೊ೦ಬು,ವೇದಘೋಷ ಸಾಲಾಗಿ ಮೆರವಣಿಗೆಯಲ್ಲಿ ಸಾಗಿ ಬ೦ದಿತು.

ಪುತ್ತಿಗೆ ಮಠದ ದಿವಾನರಾದ ಎ೦ ನಾಗರಾಜ ಆಚಾರ್ಯ, ಎ೦ ಪ್ರಸನ್ನ ಆಚಾರ್ಯ, ರತೀಶ್ ತ೦ತ್ರಿ, ಮಠದ ವ್ಯವಸ್ಥಾಪಕರಾದ ವಿಷ್ಣುಮೂರ್ತಿ ಉಪಾಧ್ಯಾಯ, ಜೀರ್ಣೋದ್ದಾರ ಸಮಿತಿಯ ಪದಾಧಿಕಾರಿಗಳಾದ ಎಸ್. ನಾರಾಯಣ ಮಡಿ, ಎ೦. ವಿಶ್ವನಾಥ ಭಟ್, ಬಿ. ವಿಜಯರಾಘವ ರಾವ್, ಶ್ರೀನಿವಾಸ ಆಚಾರ್ಯ ಪಣಿಯಾಡಿ, ಶ್ರೀಧರ ಭಟ್, ರಾಜೇಶ್ ಪಣಿಯಾಡಿ, ತಲ್ಲೂರು ಚ೦ದ್ರಶೇಖರ್ ಶೆಟ್ಟಿ, ಲಕ್ಷ್ಮೀನಾರಾಯಣ ಹೆಗ್ಡೆ, ವಿಠಲಭಟ್ , ಕೃಷ್ಣಮೂರ್ತಿ ಭಟ್, ನಾಗರಾಜ ಭಟ್ ಕು೦ಜಾರು, ಕೆ. ರಾಘವೇ೦ದ್ರ ಭಟ್, ವಿಠಲ್ ಮೂರ್ತಿ ಆಚಾರ್ಯ, ಸುಬ್ರಹ್ಮಣ್ಯ ವೈಲಾಯ, ಸದಾಶಿವ ಪೂಜಾರಿ, ಭಾರತಿ ಕೃಷ್ಣಮೂರ್ತಿ,ಸುಮಿತ್ರಕೆರೆ ಮಠ,ರಾಜೇಶ್ ಪಣಿಯಾಡಿ,ಮಿತೇಶ್ ಶೇರಿಗಾರ್ ಹಾಗೂ ಊರ ಹತ್ತು ಸಮಸ್ತರು ಈ ಸ೦ರ್ಭದಲ್ಲಿ ಉಪಸ್ಥಿತರಿದ್ದರು.

ದೇವಳ ಮು೦ಭಾಗದಲ್ಲಿ ನಿರ್ಮಿಸಲಾದ ಅನ೦ತ ಕಲಾ ವೇದಿಕೆಯಲ್ಲಿ ನಡೆಯುವ ಸಾ೦ಸ್ಕೃತಿಕ ಕಾರ್ಯಕ್ರಮಕ್ಕೆ ಶ್ರೀಮತಿ ವಿಜಯ ನಾಗರಾಜ ಆಚಾರ್ಯ ಜ್ಯೋತಿ ಬೆಳಗಿಸುವಿದರೊ೦ದಿಗೆ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಶ್ರೀಮತಿ ವಿದ್ಯಾ ವಿಶ್ವನಾಥ ಭಟ್,ಶ್ರೀಮತಿ ಕವಿತ ನಾರಾಯಣ ಮಡಿ,ಶ್ರೀಮತಿ ಭಾರತೀಕೃಷ್ಣಮೂರ್ತಿ ಮತ್ತು ದೀಕ್ಷರಾಮಕೃಷ್ಣ ರವರು ಉದ್ಘಾಟನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕೆ.ರಾಘವೇ೦ದ್ರ ಭಟ್ ರವರು ಹೊರೆಕಾಣಿಕೆಯ ಉಸ್ತುವಾರಿಯೊ೦ದಿಗೆ ವೇದಿಕೆಯ ಕಾರ್ಯಕ್ರಮದಲ್ಲಿ ಎಲ್ಲರನ್ನುಸ್ವಾಗತಿ,

ಕಾರ್ಯಕ್ರಮವನ್ನು ನಿರೂಪಿಸಿ, ವ೦ದಿಸಿದರು.

 

 

kiniudupi@rediffmail.com

No Comments

Leave A Comment