Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ವಿಮಾನ ಪತನ – ಪೈಲಟ್ ಸೇರಿ ಪ್ರಯಾಣಿಕರು ಸಾವು

ನೆವಾಡಾ: ಫೆ ,26. ಅಮೇರಿಕಾದ ಉತ್ತರ ನೆವಾಡಾದ ಪರ್ವತ ಪ್ರದೇಶದಲ್ಲಿ ವಿಮಾನವೊಂದು ಪತನಗೊಂಡು ಐವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.ನೆ

ವಾಡಾದ ಸ್ಟೇಜ್‌ಕೋಚ್ ಬಳಿ ಶುಕ್ರವಾರ ರಾತ್ರಿ 9:15 ರ ಸುಮಾರಿಗೆ ವೈದ್ಯಕೀಯ ವಿಮಾನ ಪತನವಾಗಿದೆ

ಮೃತರಲ್ಲಿ ಪೈಲಟ್, ಫ್ಲೈಟ್ ನರ್ಸ್, ಫ್ಲೈಟ್ ಪ್ಯಾರಾಮೆಡಿಕ್, ರೋಗಿ ಮತ್ತು ರೋಗಿಯ ಕುಟುಂಬದ ಸದಸ್ಯರು ಸೇರಿದ್ದಾರೆ ಎಂದು ತಿಳಿದುಬಂದಿದೆ.

ಹವಾಮಾನ ವೈಪರೀತ್ಯದ ನಡುವೆಯೂ ಪರ್ವತ ಪ್ರದೇಶದಲ್ಲಿ ರೋಗಿಯನ್ನು ತುರ್ತು ಚಿಕಿತ್ಸೆಗಾಗಿ ಈ ಚಿಕ್ಕ ವಿಮಾನದಲ್ಲಿ ಸಾಗಿಸಲಾಗುತ್ತಿತ್ತು. ಪತನಕ್ಕೀಡಾದ ಈ ವಿಮಾನ ನೆಲಕ್ಕಪ್ಪಳಿಸಿದ್ದು, ಹೊತ್ತಿ ಉರಿದಿದೆ. ಇದರಿಂದಾಗಿ, ವಿಮಾನದಲ್ಲಿದ್ದವರೆಲ್ಲರೂ ಸಾವನ್ನಪ್ಪಿದ್ದಾರೆ.

No Comments

Leave A Comment