Log In
BREAKING NEWS >
ನವೆ೦ಬರ್ 27ರ೦ದು ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ದೀಪೋತ್ಸವ ಕಾರ್ಯಕ್ರಮ ಜರಗಲಿದೆ...

ಹಗರಣ ಪೀಡಿತ ಅದಾನಿ ಗ್ರೂಪ್ ನಿಂದ ದಿವಾಳಿಯಾದ ಶ್ರೀಲಂಕಾದಲ್ಲಿ 442 ಮಿಲಿಯನ್‌ ಡಾಲರ್ ಹೂಡಿಕೆ

ಕೊಲಂಬೊ: ಭಾರತದ ಹಗರಣ ಪೀಡಿತ ಅದಾನಿ ಗ್ರೂಪ್ ಆರ್ಥಿಕ ದಿವಾಳಿಯಾಗಿರುವ ಶ್ರೀಲಂಕಾದಲ್ಲಿ ಪವನ ವಿದ್ಯುತ್ ಯೋಜನೆಗಾಗಿ 442 ಮಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಗುರುವಾರ ತನ್ನ ಮೊದಲ ಪ್ರಮುಖ ವಿದೇಶಿ ಹೂಡಿಕೆಯನ್ನು ಘೋಷಿಸಿದೆ.

ವಿವಾದಾತ್ಮಕ ಭಾರತೀಯ ಉದ್ಯಮಿ ಗೌತಮ್ ಅದಾನಿ ಸಾಮ್ರಾಜ್ಯದ ಭಾಗವಾಗಿರುವ ಅದಾನಿ ಗ್ರೀನ್ ಎನರ್ಜಿ ದ್ವೀಪ ರಾಷ್ಟ್ರದಲ್ಲಿ ಎರಡು ಪವನ ವಿದ್ಯುತ್ ಫಾರ್ಮ್‌ಗಳನ್ನು ಸ್ಥಾಪಿಸಲಿದೆ ಎಂದು ಶ್ರೀಲಂಕಾ ಹೂಡಿಕೆ ಮಂಡಳಿ(ಬಿಒಐ) ತಿಳಿಸಿದೆ.

ಅದಾನಿ ಗ್ರೂಪ್ ಲಂಕಾದಲ್ಲಿ ಒಟ್ಟು 442 ಮಿಲಿಯನ್ ಡಾಲರ್ ಹೂಡಿಕೆ ಮಾಡಲಿದ್ದು, ಈ ಎರಡು ಸ್ಥಾವರಗಳು “2025 ರ ವೇಳೆಗೆ” ರಾಷ್ಟ್ರೀಯ ಗ್ರಿಡ್‌ಗೆ ವಿದ್ಯುತ್ ಸರಬರಾಜು ಮಾಡಲಿವೆ ಎಂದು BOI ಪ್ರಕಟಣೆಯಲ್ಲಿ ತಿಳಿಸಿದೆ.

ಶ್ರೀಲಂಕಾ 2021ರಲ್ಲಿ ಕೊಲಂಬೊದಲ್ಲಿ ಅದಾನಿಗೆ 700 ಮಿಲಿಯನ್ ಡಾಲರ್ ಸ್ಟ್ರಾಟೆಜಿಕ್ ಪೋರ್ಟ್ ಟರ್ಮಿನಲ್ ಪ್ರಾಜೆಕ್ಟ್ ಅನ್ನು ನೀಡಿತ್ತು. ಈಗ ಪವನ ವಿದ್ಯುತ್ ಯೋಜನೆ ನೀಡಿದೆ.

ವಿಂಡ್ ಫಾರ್ಮ್ ಯೋಜನೆಯನ್ನು ಅಂತಿಮಗೊಳಿಸಲು ಅದಾನಿ ಗ್ರೂಪ್ ಅಧಿಕಾರಿಗಳು ಕೊಲಂಬೊದಲ್ಲಿ ಬುಧವಾರ ತಮ್ಮನ್ನು ಭೇಟಿ ಮಾಡಿದ್ದರು ಎಂದು ಶ್ರೀಲಂಕಾ ಇಂಧನ ಸಚಿವ ಕಾಂಚನಾ ವಿಜೆಶೇಖರ ಅವರು ಹೇಳಿದ್ದಾರೆ.

“ಡಿಸೆಂಬರ್ 2024 ರೊಳಗೆ ವಿದ್ಯುತ್ ಸ್ಥಾವರಗಳು ಕಾರ್ಯಾರಂಭ ಮಾಡುತ್ತವೆ ಎಂದು ನಾವು ನಿರೀಕ್ಷಿಸುತ್ತೇವೆ” ಎಂದು ಅವರು ತಿಳಿಸಿದ್ದಾರೆ.

No Comments

Leave A Comment