Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ವಿವಾಹೇತರ ಸಂಬಂಧ ಆರೋಪ: ನಟಿ ರಾಖಿ ಸಾವಂತ್ ಪತಿ ಆದಿಲ್ ಖಾನ್ ದುರಾನಿ ಬಂಧನ!

ಇತ್ತೀಚಿನ ದಿನಗಳಲ್ಲಿ ರಾಖಿ ಸಾವಂತ್ ಅವರ ಜೀವನದಲ್ಲಿ ಸಾಕಷ್ಟು ಏಳು ಬೀಳುಗಳು ಆಗುತ್ತಿವೆ. ಆದಿಲ್ ಖಾನ್ ಜೊತೆ ಮದುವೆಯಾದ ನಂತರ ಶುರುವಾದ ಒಡಕು ಫೆಬ್ರವರಿಯಲ್ಲಿಯೂ ಮುಂದುವರಿಯುತ್ತದೆ.

ರಾಖಿ ಸಾವಂತ್ ಇದೇ ವಾರದಲ್ಲಿ ತಾಯಿಯನ್ನು ಕಳೆದುಕೊಂಡು ನೋವಿನಲ್ಲಿದ್ದರು. ಇನ್ನು ಆದಿಲ್ ತನಗೆ ದ್ರೋಹ ಬಗೆದಿದ್ದಾರೆ. ಅವನು ಸರಿಯಿಲ್ಲ ಎಂದೆಲ್ಲಾ ಬಹಿರಂಗವಾಗಿ ಹೇಳುತ್ತಿದ್ದ ನಟಿ ಇದೀಗ ಮುಂಬೈ ಪೊಲೀಸರಿಗೆ ದೂರು ನೀಡಿದ್ದು ಈ ಹಿನ್ನೆಲೆಯಲ್ಲಿ ಪೊಲೀಸರು
ಆದಿಲ್ ಖಾನ್ ದುರಾನಿಯನ್ನು ಬಂಧಿಸಿದ್ದಾರೆ. ಆದರೆ ಬಂಧನಕ್ಕೆ ಕಾರಣ ಸದ್ಯಕ್ಕೆ ತಿಳಿದುಬಂದಿಲ್ಲ. ಆದರೆ ಕಳೆದ ಕೆಲವು ದಿನಗಳಿಂದ ಮಾಧ್ಯಮಗಳಲ್ಲಿ ರಾಖಿ ಸಾವಂತ್ ನೀಡುತ್ತಿರುವ ಹೇಳಿಕೆಯಿಂದ ಇದು ವಿವಾಹೇತರ ಸಂಬಂಧಕ್ಕೆ ಸಂಬಂಧಿಸಿದೆ ಎಂಬುದು ಸ್ಪಷ್ಟವಾಗಿದೆ.

ದಿನದ ಹಿಂದೆ ಪೊಲೀಸ್ ಠಾಣೆಗೆ ಬಂದಿದ್ದ ರಾಖಿ ಸಾವಂತ್
ಕೆಲವು ದಿನಗಳ ಹಿಂದೆ ರಾಖಿ ಸಾವಂತ್ ಕೂಡ ಪೊಲೀಸ್ ಠಾಣೆಯಲ್ಲಿ ಕಾಣಿಸಿಕೊಂಡಿದ್ದರು. ಠಾಣೆಗೆ ಬಂದ ವಿಷಯವನ್ನು ಕೇಳಿದಾಗ ರಾಖಿ ತನ್ನ ವೈಯಕ್ತಿಕ ಕೆಲಸಕ್ಕಾಗಿ ಇಲ್ಲಿಗೆ ಬಂದಿದ್ದಾಗಿ ಅದರ ಬಗ್ಗೆ ಮಾತನಾಡಲು ಏನೂ ಇಲ್ಲ ಎಂದು ಹೇಳಿದಳು. ಈಗ ಬರುತ್ತಿರುವ ಸುದ್ದಿಯ ಪ್ರಕಾರ ಆದಿಲ್ ರಾಖಿಯನ್ನು ಭೇಟಿಯಾಗಲು ರಾಖಿಯ ಮನೆಗೆ ಬಂದಿದ್ದು, ಬಳಿಕವಷ್ಟೇ ಆತನನ್ನು ವಶಕ್ಕೆ ಪಡೆಯಲಾಗಿದೆ.

ಆದಿಲ್ ಮೇಲೆ ವಿವಾಹೇತರ ಸಂಬಂಧದ ಆರೋಪ ಮಾಡಿದ್ದ ರಾಖಿ
ಮದುವೆಯ ವಿಷಯ ಬಹಿರಂಗವಾದಾಗಿನಿಂದ ರಾಖಿ ಮತ್ತು ಆದಿಲ್ ನಡುವೆ ನಿಜವಾದ ತೊಂದರೆಗಳು ಪ್ರಾರಂಭವಾಗಿವೆ. ಅದಕ್ಕೂ ಮೊದಲು ಎಲ್ಲವೂ ಚೆನ್ನಾಗಿ ಕಾಣುತ್ತಿತ್ತು. ರಾಖಿಯ ತಾಯಿ ಸಾವನ್ನಪ್ಪಿದ ಕೇವಲ 4-5 ದಿನಗಳ ನಂತರ, ರಾಖಿ ಮಾಧ್ಯಮಗಳ ಮುಂದೆ ಆದಿಲ್ ಯಾರೊಂದಿಗೋ ಸಂಬಂಧ ಹೊಂದಿದ್ದಾನೆ ಎಂದು ಸುಳಿವು ನೀಡಿದ್ದಳು.

ಇದೀಗ ಆಕೆಯ ಹೆಸರನ್ನು ಬಹಿರಂಗಪಡಿದ್ದು ಆದಿಲ್ ತನು ಎಂಬ ಹುಡುಗಿಯನ್ನು ಮದುವೆಯಾಗಿದ್ದಾನೆ ಎಂದು ಹೇಳಿದ್ದಾರೆ. ರಾಖಿಯೊಂದಿಗಿನ ಸಂಬಂಧ ಮತ್ತು ಮೋಸ. ಆದಿಲ್ ವಿರುದ್ಧ ಅತ್ಯಂತ ಗಂಭೀರ ಆರೋಪ ಮಾಡಿದ್ದು, ಆದಿಲ್ ತನ್ನ ಎಲ್ಲಾ ಹಣವನ್ನು ತೆಗೆದುಕೊಂಡಿದ್ದಾನೆ ಮತ್ತು ತಾಯಿಯ ಚಿಕಿತ್ಸೆಗೆ ಸಹ ನೀಡಲಿಲ್ಲ, ಇದರಿಂದ ತನ್ನ ತಾಯಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.

No Comments

Leave A Comment