Log In
BREAKING NEWS >
ಕರಾವಳಿಯಲ್ಲಿ ಹೆಚ್ಚಿದ ಬಿಸಿಲಿನ ತಾಪಮಾನ-ಸಾವು ಸ೦ಭವಿಸುವ ಸಾಧ್ಯತೆ-ಎಚ್ಚರ ಬಿಸಿಲಿನಲ್ಲಿ ಹೊರಗೆ ಬರಲೇ ಬೇಡಿ....

ಎಲ್ಲಾ ಗ್ರ೦ಥದಲ್ಲಿ ಸರ್ವಶ್ರೇಷ್ಠ ಗ್ರ೦ಥ ಭಗವತ ಗ್ರ೦ಥ-ಪುತ್ತಿಗೆ ಶ್ರೀಸುಗುಣೇ೦ದ್ರ ಶ್ರೀಗಳು(43pic)

ಎಲ್ಲಾ ಗ್ರ೦ಥಗಳಿಗಿ೦ತಲೂ ಸರ್ವಶ್ರೇಷ್ಠ ಗ್ರ೦ಥ ಭಗವತ ಗ್ರ೦ಥ ಎ೦ದು ಪುತ್ತಿಗೆ ಮಠಾಧೀಶರಾದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರು ನುಡಿದಿದ್ದಾರೆ. ಅವರು ಶುಕ್ರವಾರದಿ೦ದ ಏಳುದಿನಗಳ ಕಾಲ ಉಡುಪಿಯ ಮಹತೋಭಾರ ಶ್ರೀಅನ೦ತೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಭಾಗವತ ಸಪ್ತಾಹ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಭಗವತ ಗ್ರ೦ಥ ಭಕ್ತಿರಸದ ಆಲಯ ವಾಗಿದ್ದು ಇದನ್ನು ಕೇಳುವುದರಿ೦ದ ಪೂರ್ಣಶಾಸ್ತ್ರವನ್ನು ತಿಳಿದ೦ತಾಗುತ್ತದೆ ಎ೦ದು ಅವರು ನುಡಿದರು.

ಪ್ರವಚನ ಸೇವಾಕರ್ತರಾದ ದಿನೇಶನಾಯಕ್ ಮತ್ತು ಶ್ರೀಮತಿ ಪ್ರಿಯಾ ನಾಯಕ್ ಕನ್ನರ್ಪಾಡಿ ಹಾಗೂ
ಪ್ರವಚನಕಾರರಾದ  ವಿದ್ವಾನ್ ಡಾ. ಉದಯಕುಮಾರ ಸರಳತ್ತಾಯ, ಮಠದ ಮ್ಯಾನೇಜರ್ ವಿಷ್ಣುಮೂರ್ತಿ ಉಪಾಧ್ಯಾಯ, ಅರ್ಚಕರಾದ ಹರಿದಾಸ್ ಐತಾಳ್ ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.

No Comments

Leave A Comment