Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಕೇ೦ದ್ರ ಬಜೆಟ್ ಕೇವಲ ಘೋಷಣೆ ಹೊರತು ಜನರ ದಿನ ನಿತ್ಯದ ಬಳಕೆಯ ವಸ್ತುಗಳ ಬಗ್ಗೆ ನಿರಾಶಾಧಾಯಕ :ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷ ಎ ಹರೀಶ್ ಕಿಣಿ

ಕೇಂದ್ರ ಬಜೆಟ್ ಕೇವಲ ಘೋಷಣೆಯ ಬಜೆಟ್ ಆಗಿದೆ. ಜನರಿಗೆ ಭಾರವಾಗಿರುವ ಪೇಟ್ರೋಲ್, ಡಿಸೇಲ್, ಪಡಿತರ ಎಣ್ಣೆ, ದಿನಬಳಕೆ ಗ್ಯಾಸ್‍ಗಳ ಬೆಲೆಯಲ್ಲಿ ಇಳಿಕೆ ಇಲ್ಲದಿರುವುದು ನಿರಾಸೆ ಮೂಡಿಸಿದೆ.

ಮಧ್ಯಮ ವರ್ಗದ ಮೇಲಿನ ತೆರಿಗೆ ವಿನಾಯಿತಿ ಸ್ಪಲ್ಪ ಮಟ್ಟಿನ ಸಮಾಧಾನ ಮೂಡಿಸಿದೆಯೇ ಹೊರತು, ಮಧ್ಯಮ ವರ್ಗದವರ ಜನರ ಜೀವನ ದುರ್ಬಲವಾಗಿರುವ ಈ ಸಂದರ್ಭದಲ್ಲಿ ಅವರನ್ನು ಮೇಲಕ್ಕೆತ್ತುವ ಕೆಲಸ ಆಗಿಲ್ಲ. ರೈತರಿಗೆ, ಕೂಲಿಕಾರ್ಮಿಕರಿಗೆ, ಮಹಿಳೆಯರಿಗೆ, ಯುವಜನರಿಗೆ ಮತ್ತು ವಿಶೇಷವಾಗಿ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಈ ಬಜೆಟ್ ಏನನ್ನು ನೀಡಿಲ್ಲ. ಇದು ಘೋಷಣೆಗಳ ಮತ್ತು ಕೇವಲ ಪ್ರಚಾರದ ಬಜೆಟ್ ಆಗಿದೆ.

ರಾಷ್ಟ್ರೀಯ ಶಿಕ್ಷಣ ನೀತಿಯು ಶಿಕ್ಷಣ ಕ್ಷೇತ್ರಕ್ಕೆ ವಿನಿಯೋಗ 2% ಕ್ಕಿಂತ ಕಡಿಮೆಯಿದೆ ಎಂದು ಬಜೆಟ್ ಕುರಿತು ಕಾ೦ಗ್ರೆಸ್ ಪಕ್ಷದ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾದ ಅಲೆವೂರು ಹರೀಶ್ ಕಿಣಿಯವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

No Comments

Leave A Comment