Log In
BREAKING NEWS >
ಮಾರ್ಚ್ 22ರ೦ದು ಚ೦ದ್ರಾಮಾನ ಯುಗಾದಿ ,ಏಪ್ರಿಲ್ 15ರ೦ದು ಸೌರಮಾನ ಯುಗಾದಿ ಹಬ್ಬವು ನಡೆಯಲಿದೆ.ಹಲವಾರು ಗಣ್ಯರು ಯುಗಾದಿ ಹಬ್ಬದ ಶುಭಾಶಯವನ್ನು ಕೋರಿರುತ್ತಾರೆ.....

ಬಿಜೆಪಿ ವಶದಲ್ಲಿದ್ದ ಅಮರಾವತಿ ಕೌನ್ಸಿಲ್ ಸ್ಥಾನ ಕಿತ್ತುಕೊಂಡ ಎಂವಿಎ

ಮರಾವತಿ: ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿಗೆ ತೀವ್ರ ಹಿನ್ನೆಡೆಯಾಗಿದ್ದು, ಅಮರಾವತಿ ಪದವೀಧರ ಕ್ಷೇತ್ರದಲ್ಲಿ ಪ್ರತಿಪಕ್ಷ ಮಹಾ ವಿಕಾಸ್ ಅಘಾಡಿ(ಎಂವಿಎ) ಅಭ್ಯರ್ಥಿ ಧೀರಜ್ ಲಿಂಗಡೆ ಅವರು ಹಾಲಿ ಬಿಜೆಪಿ ಪರಿಷತ್ ಸದಸ್ಯ ರಂಜಿತ್ ಪಾಟೀಲ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಅಮರಾವತಿ ಪದವೀಧರರ ಕ್ಷೇತ್ರಕ್ಕೆ ನಡೆದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಗುರುವಾರ ಬೆಳಗ್ಗೆ 8 ಗಂಟೆಗೆ ಆರಂಭವಾಗಿದ್ದು, ಇಂದು ಮಧ್ಯಾಹ್ನ 1.30ಕ್ಕೆ ಮುಕ್ತಾಯವಾಗಿದೆ.

ರಾಜ್ಯ ವಿಧಾನಮಂಡಲದ ಮೇಲ್ಮನೆಯ ಇತರ ನಾಲ್ಕು ಸ್ಥಾನಗಳ ಫಲಿತಾಂಶಗಳು ಗುರುವಾರವೇ ಪ್ರಕಟವಾಗಿದ್ದು, ಆ ನಾಲ್ಕು ಸ್ಥಾನಗಳಲ್ಲಿ ಎರಡು ಸ್ಥಾನ ಎಂವಿಎ ಗೆದ್ದಿದೆ.

ಅಮರಾವತಿಯಲ್ಲಿ ಎಂವಿಎ ಅಭ್ಯರ್ಥಿ ಲಿಂಗಡೆ ಅವರು 46,344 ಮತಗಳನ್ನು ಪಡೆದರೆ, ಬಿಜೆಪಿಯ ಹಾಲಿ ಎಂಎಲ್‌ಸಿ ರಂಜಿತ್ ಪಾಟೀಲ್ 42,962 ಮತಗಳನ್ನು ಪಡೆದಿದ್ದಾರೆ ಎಂದು ಚುನಾವಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

No Comments

Leave A Comment