Log In
BREAKING NEWS >
ಜನವರಿ 29ರಿ೦ದ 31ರವರೆಗೆ ಅಮ್ಮು೦ಜೆ ಶ್ರೀದಾಮೋದರ ದೇವಸ್ಥಾನದ ಪ್ರತಿಪ್ರತಿಷ್ಠಾ ದಶಮನೋತ್ಸವ ಕಾರ್ಯಕ್ರಮದ ಸ೦ಭ್ರಮವು ಜರಗಲಿದೆ-30ರ ಸೋಮವಾರದ೦ದು ಶ್ರೀದಾಮೋದರ ದೇವರಿಗೆ ಚಿನ್ನದ ಕವಚ ಸಮರ್ಪಣಾ ಕಾರ್ಯಕ್ರಮವು ಜರಗಲಿದೆ....

ಆಕಾಶವಾಣಿ “ಬಿ” ದರ್ಜೆಯ ಗಾಯಕ,ಗಮಕಿ, ಹಿರಿಯ ಗಾಯಕ, ಕನ್ನಡ ಶಿಕ್ಷಕ ಚ೦ದ್ರಶೇಖರ ಕೆದ್ಲಾಯ ನಿಧನ

ಬ್ರಹ್ಮಾವರ:ಜ 23 ಖ್ಯಾತ ಗಮಕಿ, ಗಾಯಕ, ನಿವೃತ್ತ ಕನ್ನಡ ಭಾಷಾ ಅಧ್ಯಾಪಕ ಹಾರ್ಯಾಡಿ ಚಂದ್ರಶೇಖರ ಕೆದ್ಲಾಯ (73) ಅವರು ಬ್ರಹ್ಮಾವರದಲ್ಲಿ ಜ. 24ರ ಮಂಗಳವಾರ ನಿಧನರಾಗಿದ್ದಾರೆ.

ಚಂದ್ರಶೇಖರ ಕೆದ್ಲಾಯ ಅವರು ಪ್ರಸಿದ್ಧ ಗಾಯಕರಾಗಿದ್ದು, ಪರಿಣಿತ ಗಮಕ ಕಲಾವಿದರಾಗಿದ್ದರು. ಬ್ರಹ್ಮಾವರದ ನಿರ್ಮಲಾ ಪ್ರೌಢಶಾಲೆಯಲ್ಲಿ 35 ವರ್ಷಗಳ ಕಾಲ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಆಕಾಶವಾಣಿ “ಬಿ” ದರ್ಜೆಯ ಗಾಯಕರೂ ಆಗಿದ್ದರು. ಅವರ ಗಾಯನ ಕಾರ್ಯಕ್ರಮಗಳು ಆಕಾಶವಾಣಿ ಕೇಂದ್ರಗಳು ಮತ್ತು ದೂರದರ್ಶನ ಚಾನೆಲ್‌ಗಳಲ್ಲಿ ಪ್ರಸಾರವಾಗಿವೆ.

ಚಂದ್ರಶೇಖರ ಕೆದ್ಲಾಯ ಅವರು ಕನ್ನಡ ಭಾಷೆಯ ಮೇಲಿನ ಪ್ರೀತಿಗೆ ಹೆಸರುವಾಸಿಯಾಗಿದ್ದರು. ಅವರು ಅಕ್ಟೋಬರ್ 13, 1951 ರಂದು ಕುಂದಾಪುರ ತಾಲೂಕಿನ ಹರ್ಯಾಡಿಯಲ್ಲಿ ಜನಿಸಿದರು.

ಚಂದ್ರಶೇಖರ ಕೆದ್ಲಾಯರು ದಕ್ಷಯಜ್ಞ, ಸಮುದ್ರಮಥನ, ಗಿರಿಜಾ ಕಲ್ಯಾಣ, ಲವಕುಶ, ನಾಗ ಮಹಿಮೆ, ಹೂಗಳ ರಾಣಿ, ಏಕತೆ, ಬಿತ್ತಿದ ಬೀಜ, ದಶಕನ್ಯೆಯರು, ರಾಮಜನನ, ಭರತನ ಭ್ರಾತೃ ಪ್ರೇಮ, ಶಾಂತಲೆ ಹೀಗೆ ಹಲವು ನಾಟಕ ಕೃತಿಗಳನ್ನು ರಚಿಸಿರುವುದರ ಜತೆಗೆ ಹಲವಾರು ನಾಟಕಗಳಿಗೆ ನೃತ್ಯ ರೂಪಕಗಳಿಗೆ ಹಾಡುಗಳ ರಚನೆಯನ್ನೂ ಮಾಡಿದ್ದಾರೆ.

ಚಂದ್ರಶೇಖರ ಕೆದ್ಲಾಯ ಅವರು ಕನ್ನಡ ಶಿಕ್ಷಕರ ಸಂಪನ್ಮೂಲ ವ್ಯಕ್ತಿಗಳಾಗಿದ್ದು, ಶಿಕ್ಷಕರಿಗೆ ಹಲವು ತರಬೇತಿಗಳನ್ನು ನಡೆಸಿದ್ದಾರೆ. ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ, ಕರ್ನಾಟಕ ಶ್ರೀ ಬಿರುದು, ಮತ್ತು ಹಲವಾರು ಸಂಘ ಸಂಸ್ಥೆಗಳು ಮತ್ತು ಸಂಘಗಳಿಂದ ಪುರಸ್ಕೃತರಾಗಿದ್ದಾರೆ.

No Comments

Leave A Comment