Log In
BREAKING NEWS >
ಫೆ.14 ಮತ್ತು 15ರ೦ದು ಉಡುಪಿಯ ಪಣಿಯಾಡಿಯ ಶ್ರೀಅನ೦ತಾಸನ ಶ್ರೀಲಕ್ಷ್ಮೀ ಅನ೦ತಪದ್ಮನಾಭ ದೇವಸ್ಥಾನದ ಧ್ವಜಸ್ತ೦ಭದ ಸ್ಥಾಪನಾ ಕಾರ್ಯಕ್ರಮವು ನಡೆಯಲಿದೆ.....

ಮಲೆಮಹದೇಶ್ವರ ಬೆಟ್ಟ ಹತ್ತುತ್ತಿದ್ದ ಗುಜರಾತ್‌ ಬಸ್‌ ಪಲ್ಟಿ: 15ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲು

ಚಾಮರಾಜನಗರ: ಮಹದೇಶ್ವರ ಬೆಟ್ಟದ ಪಾಲಾರ್ ಬಳಿ ಪ್ರವಾಸಿ ಬಸ್ ಉರುಳಿ  ಬಿದ್ದಿದ್ದು, 15ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ತಮಿಳುನಾಡು ಪ್ರವಾಸ ಮುಗಿಸಿ ಮಹದೇಶ್ವರ ಬೆಟ್ಟಕ್ಕೆ ಬರುತ್ತಿದ್ದ ಬಸ್ ಇದಾಗಿತ್ತು ಎನ್ನಲಾಗಿದೆ.

ಬಸ್‌ನಲ್ಲಿ 50ಕ್ಕೂ ಹೆಚ್ಚು ಪ್ರವಾಸಿಗರಿದ್ದರು ಎನ್ನಲಾಗಿದ್ದು, ಈ ಪೈಕಿ 15 ಮಂದಿಗೆ ಗಾಯಗಳಾಗಿವೆ. ಗುಜರಾತ್‌ ನೋಂದಣಿ ಹೊಂದಿದ್ದ ಬಸ್‌ ಇದಾಗಿದೆ. ಆದರೆ, ಪ್ರವಾಸಿಗರು ಗುಜರಾತ್‌ನವರಾಗಿದ್ದಾರೆ.

ಬುಧವಾರ ಬೆಳಿಗ್ಗೆ 8 ಗಂಟೆ ಸಮಯದಲ್ಲಿ ಪಾಲಾರ್ ರಸ್ತೆಯ ಎರಡನೇ ತಿರುವು ಬಳಿ ಬಸ್ ಚಾಲಕನ ನಿಯಂತ್ರಣಕ್ಕೆ ಸಿಗದೆ ಉರುಳಿ ಬಿದ್ದಿದೆ. ಬಸ್ಸಿನಲ್ಲಿ  ಒಟ್ಟು 50 ಜನರಿದ್ದು, ಈ ಪೈಕಿ  15 ಜನರಿಗೆ ಗಾಯಗಳಾಗಿವೆ.  ಗಾಯಾಳುಗಳಿಗೆ ಮಹದೇಶ್ವರ ಬೆಟ್ಟ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ.

No Comments

Leave A Comment