Log In
BREAKING NEWS >
ಜೂ.26ರ೦ದು ಉಡುಪಿ ಶ್ರೀಪುತ್ತಿಗೆ ಮಠದ ೪ನೇ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ ಕಾರ್ಯಕ್ರಮ ಜರಗಲಿದೆ.....

ಮಂಗಳೂರು: ಗಾಂಜಾ ಪ್ರಕರಣ – ಮತ್ತೆ 7 ವೈದ್ಯಕೀಯ ವಿದ್ಯಾರ್ಥಿಗಳು, ಇಬ್ಬರು ವೈದ್ಯರ ಬಂಧನ

ಮಂಗಳೂರು ಜ 21. ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಏಳು ವಿದ್ಯಾರ್ಥಿಗಳು ಹಾಗೂ ಇಬ್ಬರು ವೈದ್ಯರನ್ನು ಪೊಲೀಸರು ಬಂಧಿಸಿದ್ದು, ಬಂಧಿತರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ.

ಬಂಧಿತರನ್ನು ಉತ್ತರ ಪ್ರದೇಶದ ಡಾ. ವಿದುಶ್ ಕುಮಾರ್ (27) ಡಾ. ಇಶಾ ಮಿಡ್ಡಾ (27), ಡಾ. ಸಿದ್ದಾರ್ಥ ಪವಾಸ್ಕರ್ (29) ಡಾ. ಸುಧೀಂದ್ರ (34) ಡಾ ಸೂರ್ಯಜಿತ್ ದೇವ್ (20) ಮತ್ತು ಡಾ ಆಯಿಷಾ ಮೊಹಮ್ಮದ್ (23), ಡಾ ಪ್ರಣಯ್ ನಟರಾಜ್ (24) ಡಾ. ಚೈತನ್ಯ ಆರ್ ತುಮುಲುರಿ (23) ಡಾ. ಶರಣ್ಯ (23) ಎಂದು ಗುರುತಿಸಲಾಗಿದೆ

ಪ್ರಕರಣದಲ್ಲಿ ಆರೋಪಿಗಳಾಗಿರುವ ನಗರದ ಖಾಸಗಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ 7 ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದ್ದು, ಅಲ್ಲದೆ ಇಬ್ಬರು ವೈದ್ಯರನ್ನು ಸೇವೆಯಿಂದ ಗುರುವಾರ ವಜಾಗೊಳಿಸಲಾಗಿದೆ.

No Comments

Leave A Comment