Log In
BREAKING NEWS >
ಉಡುಪಿಯ ಶ್ರೀಪುತ್ತಿಗೆ ಮಠಾಧೀಶರಾದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ 4ನೇ ಪರ್ಯಾಯಕ್ಕೆ ಗುರುವಾರದ೦ದು ಅದ್ದೂರಿಯ ಅಕ್ಕಿಮುಹೂರ್ತ ಕಾರ್ಯಕ್ರಮ ಸ೦ಪನ್ನ.....

ಜೆಸಿಂಡಾ ಆರ್ಡರ್ನ್ ಪದತ್ಯಾಗ- ಕ್ರಿಸ್ ಹಿಪ್ಕಿನ್ಸ್ ನ್ಯೂಜಿಲೆಂಡ್ ನೂತನ ಪ್ರಧಾನಿ

ನ್ಯೂಜಿಲ್ಯಾಂಡ್: ಜ 21: ಜೆಸಿಂಡಾ ಆರ್ಡರ್ನ್ ಅವರ ದಿಢೀರ್ ರಾಜೀನಾಮೆಯಿಂದ ತೆರವಾಗಿರುವ ನ್ಯೂಜಿಲ್ಯಾಂಡ್ ಪ್ರಧಾನಿ ಸ್ಥಾನಕ್ಕೆ ಲೇಬರ್ ಪಕ್ಷದ ಸಂಸದ ಪೊಲೀಸ್ ಹಾಗೂ ಶಿಕ್ಷಣ ಸಚಿವ ಕ್ರಿಸ್ ಹಿಪ್ಕಿನ್ಸ್ ಅವರು ಆಯ್ಕೆಯಾಗಿದ್ದಾರೆ.

ಲೇಬರ್ ಪಕ್ಷದಿಂದ 44 ವರ್ಷದ ಹಿರಿಯ ರಾಜಕಾರಣಿ ಹಿಪ್ಕಿನ್ಸ್ ಒಬ್ಬರನ್ನೇ ನಾಮ ನಿರ್ದೇಶನ ಮಾಡಿದ್ದರಿಂದ ಅವರು ಅವಿರೋಧವಾಗಿ ನೇಮಕವಾದರು. ಹೀಗಾಗಿ ೪೧ನೇ ಪ್ರಧಾನಿಯಾಗಿ ಕ್ರಿಸ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಕೋವಿಡ್ 19 ಸಂದರ್ಭದಲ್ಲಿ ಹಿಪ್ಕಿನ್ಸ್ ಅವರು ಜವಾಬ್ದಾರಿ ಹೊತ್ತಿದ್ದರು. ಉತ್ತಮವಾದ ಕೆಲಸ ಮಾಡೋ ಮೂಲಕ ಜನಮನ್ನಣೆಯನ್ನು ಗಳಿಸಿದ್ದರು. ಲೇಬರ್ ಪಕ್ಷದಿಂದ ಹಿಪ್ಕಿನ್ಸ್ ಒಬ್ಬರನ್ನೇ ನಾಮ ನಿರ್ದೇಶನ ಮಾಡಿದ್ದರಿಂದ ಅವರು ಅವಿರೋಧವಾಗಿ ನೇಮಕವಾದರು.

ಪ್ರಧಾನು ಜೆಸಿಂಡಾ ಆರ್ಡರ್ನ್ ಅವರು ತಾನು ಪ್ರಧಾನಿ ಹುದ್ದೆಯಿಂದ ಕೆಳಕ್ಕಿಳಿಯುವುದಾಗಿ ಘೋಷಿಸಿದ್ದರು. ಕಳೆದ ಐದೂವರೆ ವರ್ಷಗಳಿಂದ ಪ್ರಧಾನಿಯಾಗಿದ್ದ 37 ವರ್ಷದ ಜೆಸಿಂಡಾ ಅವರು ಅಧಿಕಾರವಿನ್ನು ಸಾಕು ಎಂದು ಹೇಳಿ ಪದತ್ಯಾಗ ಮಾಡಿದ್ದರು.

No Comments

Leave A Comment