Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಮಂಗಳೂರು: ಹೃದಯಾಘಾತ – ರಂಗಸ್ಥಳದಲ್ಲೇ ಕಟೀಲು ಮೇಳದ ಕಲಾವಿದ ಮೃತ್ಯು

ಮಂಗಳೂರು:ಡಿ 23 . ಯಕ್ಷಗಾನ ನಡೆಯುತ್ತಿದ್ದಾಗ ರಂಗಸ್ಥಳದಲ್ಲೇ ಹೃದಯಾಘಾತವಾಗಿ ಕಟೀಲು ಮೇಳದ ಕಲಾವಿದರೊಬ್ಬರು ನಿಧನರಾದ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ.

ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯನಾಲ್ಕನೇ‌ ಮೇಳದ ಕಲಾವಿದ ಗುರುವಪ್ಪ ಬಾಯಾರು ( 58)ಮೃತ ಕಲಾವಿದ.

ಕಟೀಲಿನ ಕ್ಷೇತ್ರದ ಸರಸ್ವತೀ ಸದನದಲ್ಲಿ ಗುರುವಾರ ತ್ರಿಜನ್ಮ ಮೋಕ್ಷ ಯಕ್ಷಗಾನ ನಡೆಯುತ್ತಿದ್ದು ಈ ಸಂದರ್ಭ ಗುರುವಪ್ಪ ಬಾಯರು ಶಿಶುಪಾಲನ ಪಾತ್ರಧಾರಿಯಾಗಿ ಪಾತ್ರ ನಿರ್ವಹಿಸುತ್ತೊದ್ದರು. ಪ್ರಸಂಗದ ಕೊನೆ ಭಾಗ ಪ್ರದರ್ಶನಗೊಳ್ಳುತ್ತಿತ್ತು. ಇನ್ನೊಬ್ಬರು ಪಾತ್ರಧಾರಿ ಯಕ್ಷಗಾನದ ರಂಗಸ್ಥಳದಲ್ಲಿ ಕುಣಿಯುತ್ತಿದ್ದಾಗ ಅಲ್ಲೇ ಇದ್ದ ಗುರುವಪ್ಪ ಬಾಯಾರು ಅವರಿಗೆ ಹೃದಾಯಾಘಾತವಾಗಿ ರಂಗಸ್ಥಳದಿಂದ ಕೆಳಗಡೆ ಕುಸಿದು ಬಿದ್ದಿದ್ದರು.

ತಕ್ಷಣ ಅವರನ್ನು ಸ್ಥಳೀಯ ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಳಿಕ ಮಂಗಳೂರಿನ ಅಸ್ಪತ್ರೆಗೆ ಕೊಡ್ಯೊಯ್ದರೂ ಚಿಕಿತ್ಸೆ ಫಲಕಾರಿ ಆಗದೆ ನಿಧನರಾಗಿದ್ದಾರೆ.

ಅಷ್ಟಮಂಗಲ ಪ್ರಸಂಗ ಬರೆದಿದ್ದ ಅವರು ಕಳೆದ ಮಳೆಗಾಲದಲ್ಲಿ ಮಂಗಳೂರು ಪುರಭವನದಲ್ಲಿ ಆಡಿಸಿದ್ದರು. ನಾನಾ ಮೇಳಗಳಲ್ಲಿ ತಿರುಗಾಟ ನಡೆಸಿದ್ದ ಅವರು 2013 ಕಟೀಲು ಮೇಳಕ್ಕೆ ಸೇರಿದ್ದರು.

ತ್ರಿಜನ್ಮ ಮೋಕ್ಷ ಯಕ್ಷಗಾನ ಪ್ರದರ್ಶನದಲ್ಲೇ ಶಿಶುಪಾಲನಾಗಿದ್ದ ಗುರುವಪ್ಪ ಬಾಯಾರು ಮೋಕ್ಷ ಪಡೆದಿದ್ದಾರೆ.

No Comments

Leave A Comment